ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿದ ದೀಮಂತ ನಟ ಶಂಕರನಾಗ್. ಒಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ ಕ್ರಿಯಾಶೀಲ ನಟ-ನಿರ್ದೇಶಕನಾಗಿ ಕರುನಾಡ ಜನಮನದಲ್ಲಿ ಅಜರಾಮರವಾಗಿದ್ದಾರೆ ಎಂದು ಉಳ್ಳಿ ಫೌಂಡೇಶನ್ ನ ಅಧ್ಯಕ್ಷರು ಹಾಗು ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಉಳ್ಳಿ ದರ್ಶನ್ ಅಭಿಪ್ರಾಯಪಟ್ಟರು.
ಶಂಕರ್ ನಾಗ್ ರವರ 67ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಉಳ್ಳಿ ಫೌಂಡೇಶನ್ ವತಿಯಿಂದ ಪಟ್ಟಣದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು ಹಾಗು ಸಿಹಿ ವಿತರಿಸಿ ಮಾತನಾಡಿದ ಅವರು, ಕೇವಲ 12 ವರ್ಷ ಚಿತ್ರರಂಗದ ಬದುಕಿನಲ್ಲಿ ಸುಮಾರು 90 ಚಿತ್ರಗಳಲ್ಲಿ ನಟಿಸಿ, ಮೊದಲ ಚಿತ್ರದ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದ ಕರಾಟೆ ಕಿಂಗ್ ಶಂಕರನಾಗ್, ರಂಗಭೂಮಿಯ ಮೇಲಿನ ಪ್ರೀತಿಯಿಂದ ಬ್ಯಾಂಕ್ ಆಫ್ ಇಂಡಿಯಾ ನೌಕರಿಗೆ ಗುಡ್ ಬೈ ಹೇಳಿದ ಕಲಾ ರಸಿಕ. ಅವರು ಕೇವಲ ತಾವು ಬೆಳೆದಿದ್ದಲ್ಲದೇ, ಹಲವರನ್ನು ಬೆಳೆಸಿ ಸಮಸ್ತ ಜನತೆಯ ಮನದಲ್ಲಿ ಅಜರಾಮರವಾಗಿದ್ದಾರೆ ಎಂದರು.
ಶಂಕರನಾಗ್ ರವರು ಲಂಡನ್ ನಲ್ಲಿ ಮೆಟ್ರೋ ನೋಡಿ ಅಂದೆ ಬೆಂಗಳೂರಿಗೆ ಒಂದು ಮೆಟ್ರೋ ಇರಬೇಕೆಂದು ಅದರ ನೀಲಿ ನಕ್ಷೆ ಕೂಡ ತಯಾರಿಸಿ ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಗಡೆ ಅವರಿಗೆ ನೀಡಿದ್ದರು. ಶಂಕರನಾಗ್ ರವರು ಅಂದೆ ಸರ್ಕಾರ ನಂದಿ ಬೆಟ್ಟಕ್ಕೆ ರೋಪ್ ವೇ ಹಾಕಬೇಕೆಂದು ಬಯಸಿದ್ದರು. “ಸಂಕೇತ ಎಲೆಕ್ಟ್ರಾನಿಕ್ಸ್” ಹೆಸರಿನಲ್ಲಿ ಬೆಂಗಳೂರಿನಲ್ಲಿ ಮೊದಲ ರಿಕಾರ್ಡಿಂಗ್ ಸ್ಟುಡಿಯೋ ನಿರ್ಮಿಸಿದ ಕೀರ್ತಿ ಶಂಕರನಾಗ್ ಅವರದ್ದು ಎಂದು ಹೇಳಿದರು.
ಇಂತಹ ಮಹಾನ್ ಕಲಾವಿದನ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಅಚರಿಸುವ ಸಲುವಾಗಿ ಉಳ್ಳಿ ಫೌಂಡೇಶನ್ ವತಿಯಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಪೆನ್ನುಗಳು ಹಾಗು ಸಿಹಿ ವಿತರಿಸಿ ಅರ್ಥಪೂರ್ಣವಾಗಿ ಆಚರಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ದಯಾನಂದ ಗಾಮ, ಚಂದ್ರಪ್ಪ, ತಿಪ್ಪೇಶ್, ನಾಗರಾಜ್, ಪ್ರಶಾಂತ್ ಪ್ರತಿಬಿಂಬ, ರಾಜು ಉಡುಗಣಿ, ಚಂದ್ರಶೇಖರ್ ಗೌಡ, ಹಾಗು ಮುಖ್ಯೋಪಾಧ್ಯಾಯರು, ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post