ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ(ಶಿವಮೊಗ್ಗ) |
ಪರ್ವಕಾಲ ಸಂಕ್ರಾಂತಿ #Sankranthi ಹಬ್ಬವನ್ನು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಿ ಮಾದರಿಯಾದರು.
ವಿದ್ಯಾರ್ಥಿಗಳಿಂದ ಸಂಕ್ರಾಂತಿ ಹಬ್ಬವನ್ನು ಈ ವರ್ಷ ಪರಿಸರ ಸುರಕ್ಷತೆ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಬಗ್ಗೆ ಅರಿವು ಮೂಡಿಸುವ ದೃಷ್ಟಿಯಿಂದ ಪ್ಲಾಸ್ಟಿಕ್ ಮುಕ್ತ ಹಬ್ಬವಾಗಿ ಹಮ್ಮಿಕೊಳ್ಳಲಾಗಿತ್ತು.
ಈ ಬಗ್ಗೆ ಮಾತನಾಡಿದ ವಿದ್ಯಾರ್ಥಿಗಳು, ಪ್ರತಿವರ್ಷವೂ ಜನರು ಸಂತೋಷ ಮತ್ತು ಹರ್ಷದಿಂದ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಒಂದು ಸಂಕ್ರಾಂತಿ. ಭಾರತೀಯ ಸಂಪ್ರದಾಯಗಳಲ್ಲಿ ಮಹತ್ವದ ಹಬ್ಬವಾಗಿರುವ ಈ ದಿನವು ಹೊಸ ಕೃಷಿ ಚಕ್ರದ ಆರಂಭವನ್ನು ಸೂಚಿಸುತ್ತದೆ. ಭಾರತೀಯ ಕ್ಯಾಲೆಂಡರ್’ನಂತೆ, ಸಂಕ್ರಾಂತಿ ಪ್ರತಿ ವರ್ಷ ಆಗಿ ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವ ಸಮಯದಲ್ಲಿ ನಡೆಯುತ್ತದೆ ಎಂದು ತಿಳಿಸಿದರು.
Also read: ಹಾಡಹಗಲೇ ಭೀಕರ ದರೋಡೆ | ಎಟಿಎಂಗೆ ಹಣ ತುಂಬಲ ಬಿಂದಿದ್ದ ಬ್ಯಾಂಕ್ ಸಿಬ್ಬಂದಿ ಮೇಲೆ ಗುಂಡಿನ ದಾಳಿ | ಓರ್ವ ಸಾವು
ಹಬ್ಬದ ಧಾರ್ಮಿಕ ಮತ್ತು ಕೃಷಿಕ ಮಹತ್ವ
ಸಂಕ್ರಾಂತಿ ಹಬ್ಬವು ಧಾರ್ಮಿಕವಾಗಿ ಕೂಡ ಮಹತ್ವವನ್ನು ಹೊಂದಿದೆ.ಈ ಹಬ್ಬದಂದು ರೈತರೂ ತಾವು ಕೊಯ್ಲು ಮಾಡಿರುವ ಧಾನ್ಯಗಳಿಂದ ಪೊಂಗಲ್ ಎಂಬ ಖಾದ್ಯವನ್ನು ತಯಾರಿಸಿ ಸೇವಿಸುತ್ತಾರೆ. ಈ ಹಬ್ಬವನ್ನು ಭಾರತದಲ್ಲಿ ವಿವಿಧ ಹೆಸರುಗಳಿಂದ ಕರೆಯುತ್ತಾರೆ ಎಂದರು.
ತಮಿಳುನಾಡಿನಲ್ಲಿ ಪೊಂಗಲ್, ಕರ್ನಾಟಕ ಆಂಧ್ರಪ್ರದೇಶದಲ್ಲಿ ಮಕರ ಸಂಕ್ರಾAತಿ, ಗುಜರಾತಿನಲ್ಲಿ ಉತ್ತರಾಯಣ, ಪಂಜಾಬಿನಲ್ಲಿ ಲೊಹ್ರಿ ಎಂದು ಕರೆಯುತ್ತಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮನೆ ಮನೆಗೆ ಭೇಟಿ ನೀಡಿ ತಾವೇ ವಿಶೇಷವಾದ ಪೇಪರ್ ಕಪ್ಪುಗಳ ಬ್ಯಾಗನ್ನು ತಯಾರಿಸಿ ಅದರಲ್ಲಿ ಎಳ್ಳು-ಬೆಲ್ಲವನ್ನು ಹಾಕಿ ಹಂಚಿ, ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಎಂದು ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post