ಶಿವಮೊಗ್ಗ: ಖ್ಯಾತ ಕೈಗಾರಿಕೋದ್ಯಮಿಗಳು, ಎನ್.ಎಸ್. ಗಿರಿಮಾಜಿ ಅಂಡ್ ಸನ್‌ಸ್ನ ಸಂಸ್ಥಾಪಕರಲ್ಲೋರ್ವರಾಗಿದ್ದ ದ್ವಾರಕಾನಾಥ ಗಿರಿಮಾಜಿ (82) ಅವರು ಇಂದು ಬೆಳಿಗ್ಗೆ ನಿಧನರಾದರು. ಮೃತರು ಪತ್ನಿ, ಓರ್ವ ಪುತ್ರ, ಈರ್ವ ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂಸೇವಕರು ಆಗಿದ್ದ ದ್ವಾರಕಾನಾಥ ಗಿರಿಮಾಜಿ ಅವರು ಕಷ್ಟದಲ್ಲಿದ್ದವರಿಗೆ ನೆರವು ನೀಡುವ ಸ್ವಭಾವ ಹೊಂದಿದ್ದರು. ಸರಳ ಸಜ್ಜನ ಹಾಗೂ ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದ ಇವರ ನಿಧನಕ್ಕೆ ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಶಾಸಕ ಕೆ.ಎಸ್. ಈಶ್ವರಪ್ಪ, ಮಾಜಿ ಶಾಸಕರಾದ ಕೆ.ಬಿ. ಪ್ರಸನ್ನಕುಮಾರ್, ಹೆಚ್.ಎಂ. ಚಂದ್ರಶೇಖರಪ್ಪ, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ ಭಾಗವತ್, ಆರ್‌ಎಸ್‌ಎಸ್‌ನ ಪ್ರಮುಖರಾದ ಡಿ.ಹೆಚ್. ಸುಬ್ಬಣ್ಣ, ಮಾಜಿ ನಗರಾಧ್ಯಕ್ಷ ಎಂ. ಶಂಕರ್, ಹಿರಿಯ ಸಮಾಜವಾದಿಗಳಾದ ಜಿ.ಎಸ್. ಸತ್ಯನಾರಾಯಣ್, ಪಿ. ಪುಟ್ಟಯ್ಯ, ಪ್ರಮುಖರಾದ ಮಲ್ಲಿಕಾರ್ಜುನ್, ನವೀನ್ ದಳವಾಯಿ, ಕೇಶವಮೂರ್ತಿ ತಿವಾರಿ, ಇನ್ನಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ.
Haseena Themali Raises Over ₹5 Lakh for Palliative Care at the Tata Mumbai Marathon 2026 in her bid
Kalpa Media House | Bangalore | The bid to support the creation of the first world-class palliative care centre in...
Read moreDetails














