ಶಿವಮೊಗ್ಗ: ಸಿಟಿ ಬಸ್’ನಲ್ಲಿ ಪಿಕ್ ಪಾಕೆಟ್ ಮಾಡುತ್ತಿದ್ದ ಕಳ್ಳನೊಬ್ಬನನ್ನು ಪೊಲೀಸರು ಬಂಧಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಳೆದ 17ರಂದು ಮೀನಾಕ್ಷಿ ಭವನದ ಬಳಿ ಸಿಟಿ ಬಸ್’ನಲ್ಲಿ ಪ್ರಯಾಣಿಸುತ್ತಿದ್ದ ಅಜ್ಜಂಪುರದ ಲೋಕೇಶಪ್ಪ ಎನ್ನುವವರ ಜೇಬಿನಲ್ಲಿದ್ದ 25,000 ರೂ. ಹಣವನ್ನು ಪಿಕ್ ಪಾಕೆಟ್ ಮಾಡಿದ್ದು ಈ ಬಗ್ಗೆ ಕೋಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಆರೋಪಿ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ . ಶಾಂತರಾಜ್ ಅವರು, ಹೆಚ್ಚುವರಿ ಪೋಲೀಸ್ ಅಧೀಕ್ಷಕರಾದ ಡಾ.ಶೇಖರ್.ಎಚ್.ಟಿ. ಕೆ.ಎಸ್.ಪಿ.ಎಸ್., ಡಿ.ವೈ.ಎಸ್.ಪಿ. ಉಮೇಶ್ ಈಶ್ವರ ನಾಯ್ಕ, ಮತ್ತು ಸಿಪಿಐ ಕೆ.ಟಿ. ಗುರುರಾಜ್ ಅವರ ಮಾರ್ಗದರ್ಶನದಲ್ಲಿ ಕೋಟೆ ಪೋಲೀಸ್ ಠಾಣೆ ಪಿಎಸ್’ಐ ತಿಮ್ಮಯ್ಯ ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಲಾಗಿತ್ತು.
ತತಕ್ಷಣ ಕಾರ್ಯಪ್ರವೃತ್ತವಾದ ತಂಡ ಆರೋಪಿ ಬುದ್ದನಗರದ ನದೀಮ್(20) ಎನ್ನುವವನನ್ನು ಬಂಧಿಸಿ, ಪಿಕ್ ಪಾಕೇಟ್ ಮಾಡಿದ್ದ ಹಣವನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯನ್ನು ಪತ್ತೆ ಮಾಡಿದ ತಂಡದಲ್ಲಿ ಪಿಎಸ್’ಐ ಎಚ್.ವಿ. ತಿಮ್ಮಯ್ಯ, ಸಿಬ್ಬಂದಿಗಳಾದ ವಾಚ್ಯನಾಯ್ಕ್, ಗೋಪಾಲ, ಕಲ್ಲನಗೌಡ, ನಾಗಪ್ಪ ಅಡಿವೆಪ್ಪನವರ್ ಅವರುಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಶ್ಲಾಘಿಸಿದ್ದಾರೆ.
Special Train Between Bengaluru Cantt and Chennai
Kalpa Media House | Bengaluru | To clear the extra rush of passengers during the Summer Holiday season, South Western...
Read moreDetails















