ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಪೊಲೀಸ್ ಇಲಾಖೆಯ ಬೆರಳುಮುದ್ರೆ ವಿಭಾಗದ ಎಎಸ್’ಐ ಅತೀಕ್ ಯು.ಆರ್ ರೆಹಮಾನ್ ಅವರಿಗೆ ಈ ಬಾರಿ ರಾಷ್ಟ್ರಪತಿ ಪದಕದ ಗೌರವ ಸಂದಿದೆ.
ಸ್ವತಂತ್ರ ದಿನಾಚರಣೆಯ ಹಿನ್ನೆಲೆಯಲ್ಲಿ ಘೋಷಿಸಲಾದ ರಾಷ್ಟ್ರಪತಿ ಪದಕ ಶಿವಮೊಗ್ಗದ ಅಧಿಕಾರಿಗೆ ಸಂದಿರುವುದು ಜಿಲ್ಲೆಯ ಜನರಲ್ಲಿ ಸಂತಸ ಮೂಡಿಸಿದೆ.
ದಾವಣಗೆರೆ ಪೂರ್ವ ವಲಯ ಬೆರಳು ಮುದ್ರೆ ವಿಭಾಗದ ಡಿವೈಎಸ್’ಪಿ ಎ.ಕೆ. ರುದ್ರೇಶ ಅವರು ಇವರನ್ನು ಅಭಿನಂದಿಸಿದ್ದಾರೆ.
ತಮ್ಮ ಕರ್ತವ್ಯನಿಷ್ಠೆಯಿಂದ ರಾಷ್ಟ್ರಪತಿ ಪದಕಕ್ಕೆ ಪಾತ್ರರಾದ ಎಎಸ್‘ಐ ಅತೀಕ್ ಅವರಿಗೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಭಿನಂದಿಸುತ್ತದೆ.
Get In Touch With Us info@kalpa.news Whatsapp: 9481252093















