ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನೋಬ ನಗರ ಬಳಿಯ ಬೊಮ್ಮನಕಟ್ಟೆ ರೈಲ್ವೆ ಗೇಟ್ ಸನಿಹದಲ್ಲಿ ಖಾಸಗಿ ಸಿಟಿ ಬಸ್’ವೊಂದು ಚರಂಡಿಗೆ ಉರುಳಿ ಬಿದ್ದಿದ್ದು, ಹಲವರಿಗೆ ಗಾಯಗಳಾಗಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಬೊಮ್ಮನ ಕಟ್ಟೆಯಿಂದ ಗೋಪಾಳಕ್ಕೆ ತೆರಳುವ ಖಾಸಗಿ ಸಿಟಿ ಬಸ್ ಬೊಮ್ಮನಕಟ್ಟೆ ರೈಲ್ವೆ ಗೇಟ್ ಪಕ್ಕದ ರಸ್ತೆ ಉರುಳಿ ಬಿದ್ದಿದ್ದು, ಪರಿಣಾಮವಾಗಿ ಹಲವರಿಗೆ ಗಾಯಗಳಾಗಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಬಸ್ ಉರುಳಿದಾಕ್ಷಣ ಸಾರ್ವಜನಿಕರು ಸಹಾಯಕ್ಕೆ ಧಾವಿಸಿದ್ದು, ಗಾಯಾಳುಗಳಲ್ಲಿ ಕೆಲವರನ್ನು ಮೆಗ್ಗಾನ್ ಹಾಗೂ ಇನ್ನು ಕೆಲವರನ್ನು ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.
Also read: ಶಿವಮೊಗ್ಗ | ಕಲುಷಿತ ನೀರು ಪೂರೈಕೆ? ಜನ ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ | ಮಾಜಿ ಶಾಸಕ ಕೆಬಿಪಿ ಆಗ್ರಹ
ಅತಿಯಾದ ವೇಗದಿಂದ ಬಂದಿದ್ದು ಹಂಪ್ ಹಾರಿ ಸ್ಟೇರಿಂಗ್ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ಸುಮಾರು10 ಮೀಟರ್ ಕಬ್ಬಿಣದ ಫೆನ್ಸಿಂಗ್ ಅನ್ನು ಕೂಡ ಉರುಳಿಸಿ ಚರಂಡಿಗೆ ಬಸ್ ಚರಂಡಿಗೆ ಉರುಳಿದೆ ಎಂದು ತಿಳಿದುಬಂದಿದೆ.
ಉರುಳಿಬಿದ್ದ ಬಸ್’ನಲ್ಲಿ 20 ಮಂದಿ ಇದ್ದರು ಎನ್ನಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post