ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ದಿನದಿಂದ ದಿನಕ್ಕೆ ನಗರದಲ್ಲಿ ಕೊರೋನಾ ಪಾಸಿಟಿವ್ ಹೆಚ್ಚಾಗುತ್ತಿರುವಂತೆಯೇ, ಇಂದು ಮತ್ತೆ ಹಲವು ಪಾಸಿಟಿವ್ ಪ್ರಕರಣಗಳು ಘೋಷಣೆಯಾಗುವ ನಿರೀಕ್ಷೆಯಿದ್ದು, ಬಹಳಷ್ಟು ರಸ್ತೆಗಳು ಸೀಲ್ ಡೌನ್ ಆಗಿವೆ.
ಕೊರೋನಾ ಪಾಸಿಟಿವ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಬಿ ರಸ್ತೆಯ ಶ್ರೀ ಲಕ್ಷ್ಮೀ ನಾರಾಯಣ ದೇವಾಲಯದ ಮುಂಭಾಗದಲ್ಲಿ ಸೀಲ್ ಡೌನ್ ಮಾಡಲಾಗಿದೆ.
ಇನ್ನು, ಹೊಸಮನೆಯ 5ನೆಯ ಹಾಗೂ 3ನೆಯ ತಿರುವು, ಚೋರ್ ಬಜಾರ್ ರಸ್ತೆ, ಜ್ಯೋತಿ ನಗರದ 1ನೆಯ ತಿರುವು ಸೇರಿದಂತೆ ಹಲವು ರಸ್ತೆಗಳು ಸೀಲ್ ಡೌನ್ ಆಗಿದ್ದು, ಸ್ಯಾನಿಟೈಸ್ ಮಾಡಲಾಗಿದೆ.
Get In Touch With Us info@kalpa.news Whatsapp: 9481252093
















