ಕಲ್ಪ ಮೀಡಿಯಾ ಹೌಸ್ | ಶಿರಾ |
ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಾಧೀಶರಾದ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ, ತುಮಕೂರು ಜಿಲ್ಲೆಯ ಶಿರಾ (Sira) ಪಟ್ಟಣದ ಆರ್.ಟಿ. ರಸ್ತೆಯಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ರಾಘವೇಂದ್ರ ಗುರುಸಾರ್ವಭೌಮರ 355ನೇ ಆರಾಧನಾ ಮಹೋತ್ಸವವನ್ನು (Sri Raghavendra Swamy Aradhana) ಆಗಸ್ಟ್ 28ರಿಂದ 31ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆಯೋಜಿಸಲಾಗಿದೆ.
ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿದಿನ ಬೆಳಗ್ಗೆ ಗುರುರಾಜರ ಬೃಂದಾವನಕ್ಕೆ ಫಲಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ಭಜನಾ ಕಾರ್ಯಕ್ರಮ, ರಥೋತ್ಸವ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
Sira : ನಾಲ್ಕು ದಿನಗಳ ಸಾಂಸ್ಕೃತಿಕ ಕಾರ್ಯಕ್ರಮ
ಆರಾಧನಾ ಮಹೋತ್ಸವದ ಅಂಗವಾಗಿ ಪ್ರತಿದಿನ ಸಂಜೆ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಆಗಸ್ಟ್ 28: ಬಾಗಲಕೋಟೆಯ ವಿದ್ವಾನ್ ಶ್ರೀ ಅನಂತ ಕುಲಕರ್ಣಿ ಮತ್ತು ಸಂಗಡಿಗರಿಂದ ‘ದಾಸವಾಣಿ’ ಕಾರ್ಯಕ್ರಮ ನಡೆಯಲಿದೆ.
Also read>> ಸೊರಬ ಪೊಲೀಸ್ ಠಾಣೆಯಲ್ಲಿ ರಕ್ತದಾನ ಶಿಬಿರ: 73 ಯೂನಿಟ್ ರಕ್ತ ಸಂಗ್ರಹ
ಆಗಸ್ಟ್ 29: ವಿದುಷಿ ಶ್ರೀಮತಿ ರಮ್ಯಾ ಸುಧೀರ್ ಅವರಿಂದ ‘ದಾಸರ ಪದಗಳ ರಸಧಾರೆ’ ಕಾರ್ಯಕ್ರಮ ನಡೆಯಲಿದ್ದು, ಕೀಬೋರ್ಡ್‌ನಲ್ಲಿ ಶ್ರೀ ಎಸ್. ಪ್ರವೀಣ್ ಹಾಗೂ ತಬಲಾದಲ್ಲಿ ಶ್ರೀ ರವಿಕುಮಾರ್ ಸಹಕರಿಸಲಿದ್ದಾರೆ.
ಆಗಸ್ಟ್ 30: ವಿದುಷಿ ಶ್ರೀಮತಿ ರಂಜಿತಾ ಪ್ರಸಾದ್ ಅವರಿಂದ ‘ಹರಿದಾಸ ಮಂಜರಿ’ ಕಾರ್ಯಕ್ರಮ ನಡೆಯಲಿದೆ. ಕೀಬೋರ್ಡ್‌ನಲ್ಲಿ ಶ್ರೀ ಪ್ರವೀಣ್ ಹಾಗೂ ತಬಲಾದಲ್ಲಿ ಶ್ರೀ ರವಿಕುಮಾರ್ ಸಹಕಾರ ನೀಡಲಿದ್ದಾರೆ.
ಆಗಸ್ಟ್ 31: ಏಕನಾಥೇಶ್ವರಿ ಗಾನ ವಿದ್ಯಾಲಯದ ಸದಸ್ಯರಿಂದ ದಾಸವಾಣಿ ಕಾರ್ಯಕ್ರಮ ನಡೆಯಲಿದೆ.
ನಾಲ್ಕು ದಿನಗಳ ಕಾಲ ನಡೆಯಲಿರುವ ಆರಾಧನಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುರಾಯರ ಕೃಪೆಗೆ ಪಾತ್ರರಾಗುವಂತೆ ಮಠದ ವತಿಯಿಂದ ಮನವಿ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








