ಕಲ್ಪ ಮೀಡಿಯಾ ಹೌಸ್ | ಸೊರಬ |
ಸೊರಬ (Soraba) ಪೊಲೀಸ್ ಠಾಣೆ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗ (Shivamogga) ರೆಡ್‌ಕ್ರಾಸ್ ಸಂಜೀವಿನಿ ರಕ್ತಕೇಂದ್ರದ ಸಹಯೋಗದೊಂದಿಗೆ ಪೊಲೀಸ್ ಠಾಣೆ ಆವರಣದಲ್ಲಿ ರಕ್ತದಾನ (Blood Donation) ಶಿಬಿರವನ್ನು ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ, ಮಹಿಳೆಯರು, ಸರ್ಕಾರಿ ನೌಕರರು, ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಸಾರ್ವಜನಿಕರು ಉತ್ಸಾಹದಿಂದ ಪಾಲ್ಗೊಂಡು ಒಟ್ಟು 73 ಯೂನಿಟ್ ರಕ್ತದಾನ ಮಾಡಿದರು. ವಿಶೇಷವಾಗಿ, ಇದೇ ಮೊದಲ ಬಾರಿಗೆ ರಕ್ತದಾನ ಮಾಡಿದವರೂ ಶಿಬಿರದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದು ಗಮನ ಸೆಳೆಯಿತು.
Soraba : ಪತ್ನಿಯೊಂದಿಗೆ ದಂಪತಿ ಸಮೇತ ರಕ್ತದಾನ
ಶಿಬಿರದಲ್ಲಿ ಅಜಯ್ ಕುಮಾರ್ ಅವರು ತಮ್ಮ ಪತ್ನಿಯೊಂದಿಗೆ ದಂಪತಿ ಸಮೇತರಾಗಿ ರಕ್ತದಾನ ಮಾಡಿದ್ದು ವಿಶೇಷವಾಗಿತ್ತು. ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಈ ರೀತಿಯ ಭಾಗವಹಿಸುವಿಕೆ ಮೆಚ್ಚುಗೆಗೆ ಪಾತ್ರವಾಯಿತು.
Also read>> ವಿಕಸಿತ ಭಾರತಕ್ಕೆ ಯುವಶಕ್ತಿ–ಕ್ರೀಡಾಶಕ್ತಿ ಸಂಯೋಜನೆ: ಕ್ರೀಡೆ ಕೇವಲ ಪದಕಗಳಿಗಲ್ಲ | ಪ್ರಧಾನಿ ಮೋದಿ
ಶಿಬಿರದಲ್ಲಿ ಸೊರಬ ವೃತ್ತ ನಿರೀಕ್ಷಕ ಮಹಾಂತೇಶ್ ಲಂಬಿ, ಪಿಎಸ್‌ಐ ನವೀನ್ ಕುಮಾರ್ ಎಂ.ಎಚ್. ಸೇರಿದಂತೆ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.
ಶಿವಮೊಗ್ಗ ರೆಡ್‌ಕ್ರಾಸ್ ಸಂಜೀವಿನಿ ರಕ್ತಕೇಂದ್ರದ ವತಿಯಿಂದ ಧರಣೇಂದ್ರ ದಿನಕರ್, ಹಿರಿಯ ಸಹಾಯಕ ಆಪ್ತ ಸಮಾಲೋಚಕರು, ಲಕ್ಷ್ಮಿ ಸಿಸ್ಟರ್, ಡಾ. ಅವಿನಾಶ್, ವೈದ್ಯಾಧಿಕಾರಿ, ಶುಭಾ, ಕೌಸುದ್ದಿನ್ ಲ್ಯಾಬ್ ಟೆಕ್ನಿಷಿಯನ್‌ಗಳು ಹಾಗೂ ಆನಂದ್, ಹೆಲ್ಪರ್ ಅವರು ಶಿಬಿರದ ಕಾರ್ಯದಲ್ಲಿ ಸಹಕರಿಸಿದರು.
ರಕ್ತದಾನ ಮಾಡಿದ ಎಲ್ಲ ದಾನಿಗಳಿಗೆ ಹಾಗೂ ಶಿಬಿರ ಯಶಸ್ವಿಯಾಗಲು ಸಹಕರಿಸಿದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ, ವಿವಿಧ ಸಂಘ-ಸಂಸ್ಥೆಗಳ ಸದಸ್ಯರು ಮತ್ತು ಸಾರ್ವಜನಿಕರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 








