ಕಲ್ಪ ಮೀಡಿಯಾ ಹೌಸ್ | ಶಿರಾಳಕೊಪ್ಪ |
ತಾಲೂಕಿನ ಕೊಳಗಿ ಗ್ರಾಮದ ದಂಪತಿಗಳ ಮೇಲೆ ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿದ ನಾಲ್ವರಿಗೆ ಶಿಕಾರಿಪುರ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಘಟನೆ ಹಿನ್ನೆಲೆ:
ಕೊಳಗಿ ಗ್ರಾಮದ ವಾಸಿಗಳಾದ ಈಶ್ವರಪ್ಪ (55), ಗಣೇಶ (35), ರಾಘವೇಂದ್ರ (32), ರತ್ನಮ್ಮ (48) ಶಿಕ್ಷೆಗೊಳಗಾದ ಆರೋಪಿಗಳಾಗಿದ್ದು, ಇವರು ಕ್ಷುಲ್ಲಕ ಕಾರಣಕ್ಕಾಗಿ ಇದೇ ಗ್ರಾಮದ ಹನುಮಂತಮ್ಮ ಮತ್ತು ರಮೇಶಪ್ಪ ದಂಪತಿಗಳ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.
ಘಟನೆಗೆ ಸಂಬಂಧಪಟ್ಟಂತೆ ಹಲ್ಲೆಗೊಳಗಾದ ದಂಪತಿಗಳು ಶಿರಾಳಕೊಪ್ಪ ಠಾಣೆಯಲ್ಲಿ ದೂರು ದಾಖಲಿಸಿದ ಹಿನ್ನೆಲೆ ಕಾನೂನು ರೀತಿಯ ಕ್ರಮ ಕೈಗೊಂಡು ವಿಚಾರಣೆ ಬಳಿಕ ಶಿಕಾರಿಪುರ ನ್ಯಾಯಾಲಯ ಆರೋಪಿಗಳಿಗೆ ೩ವರ್ಷ ಶಿಕ್ಷೆ ಪ್ರಕಟಿಸಿ, 10ಸಾವಿರ ದಂಡ ವಿಧಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post