No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Friday, October 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಸಹ್ಯಾದ್ರಿ ನಾರಾಯಣ ಆಸ್ಪತ್ರೆ ವೈದ್ಯರ ಸಾಧನೆ | 11 ವರ್ಷದ ಬಾಲಕನ 6 ಸೆಂ.ಮೀ ದವಡೆ ಗಡ್ಡೆ ಸರ್ಜರಿ

kalpa News by kalpa News
August 29, 2026
in ಶಿವಮೊಗ್ಗ
0
Shivamogga 11 Year Boy Rare Jaw Cyst Surgery In SN Hospital
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  | 

ಮಕ್ಕಳಲ್ಲಿ ಅತ್ಯಂತ ವಿರಳವಾಗಿ ಕಂಡುಬರುವ ದವಡೆಯ ಗಡ್ಡೆ (Dentigerous Odontogenic Cyst) ಸಮಸ್ಯೆಯಿಂದ ಬಳಲುತ್ತಿದ್ದ 11 ವರ್ಷದ ಬಾಲಕನಿಗೆ (Shivamogga) ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ (Sahyadri Narayana Hospital) ವೈದ್ಯರು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ.

ಸಂಕೀರ್ಣವಾಗಿದ್ದ ಈ ಪ್ರಕರಣದಲ್ಲಿ ದವಡೆಯ ಮೂಳೆಗೆ ಹಾನಿಯಾಗದಂತೆ ಗಡ್ಡೆಯನ್ನು ಹೊರತೆಗೆಯುವ ಮೂಲಕ ಬಾಲಕನ ಮುಖದ ಸ್ವರೂಪ ಹಾಗೂ ದವಡೆಯ ಕಾರ್ಯಕ್ಷಮತೆಯನ್ನು ವೈದ್ಯರು ಉಳಿಸಿದ್ದಾರೆ.

ಈ ರೀತಿಯ ಡೆಂಟಿಜೆರಸ್ ಸಿಸ್ಟ್‌ಗಳು ಸಾಮಾನ್ಯವಾಗಿ 20ರಿಂದ 40 ವರ್ಷ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಆದರೆ 11 ವರ್ಷದ ಬಾಲಕನಲ್ಲಿ ಇಷ್ಟು ದೊಡ್ಡ ಗಾತ್ರದ ಗಡ್ಡೆ ಕಾಣಿಸಿಕೊಂಡಿರುವುದು ವೈದ್ಯಕೀಯವಾಗಿ ಅಪರೂಪದ ಪ್ರಕರಣವಾಗಿದ್ದು, ವಿಶೇಷ ಗಮನ ಸೆಳೆದಿದೆ.

ನಿರಂತರ ನೋವು, ಮುಖದ ಊತ

ಬಾಲಕ (ಹೆಸರು ಪ್ರಕಟಿಸಲಾಗಿಲ್ಲ) ಬಲಭಾಗದ ದವಡೆಯಲ್ಲಿ ನಿರಂತರ ನೋವು ಹಾಗೂ ಮುಖದ ಊತದಿಂದ ಬಳಲುತ್ತಿದ್ದನು. ಸಮಸ್ಯೆ ಕ್ರಮೇಣ ಉಲ್ಬಣಗೊಂಡು ಗಡ್ಡೆಯು ಕೆಳ ದವಡೆಯ ಅಗಲಕ್ಕೂ ಹರಡಿಕೊಂಡಿತ್ತು.

ವೈದ್ಯಕೀಯ ತಪಾಸಣೆ ನಡೆಸಿದಾಗ ಬಲಭಾಗದ ರೆಟ್ರೊಮೋಲಾರ್ ಟ್ರಿಗೋನ್ (RMT) ಪ್ರದೇಶದಲ್ಲಿ ಊತ, ಕೆನ್ನೆ ಉಬ್ಬಿರುವುದು ಹಾಗೂ ಹಲ್ಲುಗಳ ಸ್ಥಾನ ಪಲ್ಲಟದಿಂದಾಗಿ ಬಾಯಿ ಸಂಪೂರ್ಣವಾಗಿ ಮುಚ್ಚಲು ಸಾಧ್ಯವಾಗದಿರುವುದು (Open Bite) ಕಂಡುಬಂದಿತ್ತು.PES Shivamogga

ವೈದ್ಯರು ಕೋನ್ ಬೀಮ್ ಕಂಪ್ಯೂಟೆಡ್ ಟೊಮೊಗ್ರಫಿ (CBCT) ಸ್ಕ್ಯಾನ್ ನಡೆಸಿದಾಗ, ಕೆಳ ದವಡೆಯ ಮೂರನೇ ಹಲ್ಲು ಅಥವಾ ಬುದ್ಧಿಹಲ್ಲಿಗೆ ಹೊಂದಿಕೊಂಡಂತೆ ಡೆಂಟಿಜೆರಸ್ ಸಿಸ್ಟ್ ಬೆಳೆದಿರುವುದು ದೃಢಪಟ್ಟಿತು.

6 ಸೆಂ.ಮೀ ಗಾತ್ರದ ಗಡ್ಡೆ

ತಪಾಸಣೆಯಲ್ಲಿ ಗಡ್ಡೆಯು ಸುಮಾರು 6 ಸೆಂ.ಮೀ ಉದ್ದ ಮತ್ತು 3 ಸೆಂ.ಮೀ ಅಗಲವಿರುವುದು ಪತ್ತೆಯಾಯಿತು. ದೊಡ್ಡ ಗಾತ್ರದ ಜೊತೆಗೆ ದವಡೆಯ ಪ್ರಮುಖ ಭಾಗಕ್ಕೆ ಹರಡಿಕೊಂಡಿದ್ದರಿಂದ ಪ್ರಕರಣವು ಸಂಕೀರ್ಣವಾಗಿತ್ತು.

ಗಡ್ಡೆಗೆ ತಕ್ಷಣ ಚಿಕಿತ್ಸೆ ನೀಡದೆ ನಿರ್ಲಕ್ಷಿಸಿದ್ದರೆ ದವಡೆಯ ಮೂಳೆ ಮತ್ತಷ್ಟು ದುರ್ಬಲಗೊಂಡು, ಪ್ಯಾಥಲಾಜಿಕಲ್ ಫ್ರ್ಯಾಕ್ಚರ್ (ರೋಗದಿಂದಾಗಿ ದವಡೆಯ ಮೂಳೆ ಮುರಿಯುವುದು) ಉಂಟಾಗುವ ಗಂಭೀರ ಅಪಾಯವಿತ್ತು. ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಕೂಡ ದವಡೆಯ ಮೂಳೆ ಮುರಿಯುವ ಸಾಧ್ಯತೆ ಇದ್ದ ಹಿನ್ನೆಲೆಯಲ್ಲಿ ವೈದ್ಯರು ಅತ್ಯಂತ ಎಚ್ಚರಿಕೆಯಿಂದ ಶಸ್ತ್ರಚಿಕಿತ್ಸೆಗೆ ಮುಂದಾದರು.

Also Read>> ರಾಷ್ಟ್ರೀಯ ಕ್ರೀಡಾ ದಿನಾಚರಣೆ | ವಿಶೇಷಚೇತನ ರೈಲ್ವೆ ನೌಕರರಿಗೆ ವಿಶೇಷ ಕ್ರೀಡಾಕೂಟ

Shivamogga : ದವಡೆಯ ಸ್ವರೂಪ ಉಳಿಸಿಕೊಂಡು ಗಡ್ಡೆ ತೆರವು

ತಲೆ ಮತ್ತು ಕುತ್ತಿಗೆಯ ಆಂಕೊಸರ್ಜನ್ ಡಾ. ದೀಪಕ್ ಸಿ. ಕಿತ್ತೂರು ಅವರ ನೇತೃತ್ವದ ವೈದ್ಯಕೀಯ ತಂಡ ಬಾಲಕನಿಗೆ ಸಾಮಾನ್ಯ ಅರಿವಳಿಕೆ ನೀಡಿ ಶಸ್ತ್ರಚಿಕಿತ್ಸೆ ನಡೆಸಿತು.

ದವಡೆಯ ಮೂಳೆಗೆ ಯಾವುದೇ ಹಾನಿಯಾಗದಂತೆ ಗಡ್ಡೆಯನ್ನು ಸಂಪೂರ್ಣವಾಗಿ ಹೊರತೆಗೆಯುವುದು ವೈದ್ಯಕೀಯ ತಂಡದ ಮುಂದಿದ್ದ ಪ್ರಮುಖ ಸವಾಲಾಗಿತ್ತು. ಗಡ್ಡೆಯ ಪರಿಣಾಮದಿಂದ ದವಡೆಯ ಮೂಳೆ ಅತ್ಯಂತ ತೆಳುವಾಗಿ ಮತ್ತು ದುರ್ಬಲಗೊಂಡಿದ್ದರಿಂದ, ಶಸ್ತ್ರಚಿಕಿತ್ಸೆ ವೇಳೆ ಮೂಳೆ ಮುರಿಯುವ ಸಾಧ್ಯತೆ ಹೆಚ್ಚಿತ್ತು.

ಆದರೂ, ಅತ್ಯಂತ ನಿಖರವಾದ ಶಸ್ತ್ರಚಿಕಿತ್ಸಾ ವಿಧಾನವನ್ನು ಅನುಸರಿಸಿದ ವೈದ್ಯರು ದವಡೆಯ ಮೂಲ ಆಕಾರವನ್ನು ಉಳಿಸಿಕೊಂಡು ಗಡ್ಡೆಯನ್ನು ಯಶಸ್ವಿಯಾಗಿ ತೆರವುಗೊಳಿಸಿದರು.

ಮುಖದ ಬೆಳವಣಿಗೆಗೆ ಅಗತ್ಯವಾದ ‘ಗ್ರೋತ್ ಸೆಂಟರ್’ಗಳ ರಕ್ಷಣೆ

ಬಾಲಕ ಇನ್ನೂ ಬೆಳವಣಿಗೆಯ ಹಂತದಲ್ಲಿರುವುದರಿಂದ, ಭವಿಷ್ಯದಲ್ಲಿ ಮುಖದ ಬೆಳವಣಿಗೆ ಹಾಗೂ ದವಡೆಯ ಸ್ವಾಭಾವಿಕ ಕಾರ್ಯಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ಶಸ್ತ್ರಚಿಕಿತ್ಸೆ ನಡೆಸುವುದು ವೈದ್ಯರಿಗೆ ಅತ್ಯಂತ ಮುಖ್ಯವಾಗಿತ್ತು.

ಈ ಕುರಿತು ಡಾ. ದೀಪಕ್ ಸಿ. ಕಿತ್ತೂರು ಮಾತನಾಡಿ, ಬಾಲಕನ ಮುಖದ ಮುಂದಿನ ಬೆಳವಣಿಗೆಗೆ ಯಾವುದೇ ತೊಂದರೆಯಾಗದಂತೆ ದವಡೆಯ ಬೆಳವಣಿಗೆಯ ಕೇಂದ್ರಗಳನ್ನು (Growth Centres) ಸುರಕ್ಷಿತವಾಗಿ ರಕ್ಷಿಸುವುದು ಶಸ್ತ್ರಚಿಕಿತ್ಸೆಯ ಪ್ರಮುಖ ಆದ್ಯತೆಯಾಗಿತ್ತು ಎಂದು ತಿಳಿಸಿದ್ದಾರೆ.

ವೈದ್ಯಕೀಯ ತಂಡ ಕೈಗೊಂಡ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಬಾಲಕನ ಮುಖದ ಸೌಂದರ್ಯ, ದವಡೆಯ ಸ್ವರೂಪ ಹಾಗೂ ಚಲನೆಗೆ ಯಾವುದೇ ಧಕ್ಕೆಯಾಗಿಲ್ಲ.

ಆರಂಭಿಕ ಪತ್ತೆಹಚ್ಚುವಿಕೆ ಅತ್ಯಂತ ಮುಖ್ಯ

ದವಡೆಯ ಸಿಸ್ಟ್‌ಗಳು, ವಿಶೇಷವಾಗಿ ಬೆಳೆಯದ ಹಲ್ಲುಗಳ ಸುತ್ತ ಕಾಣಿಸಿಕೊಳ್ಳುವ ಡೆಂಟಿಜೆರಸ್ ಸಿಸ್ಟ್‌ಗಳು, ಆರಂಭಿಕ ಹಂತದಲ್ಲಿ ಹೆಚ್ಚಿನ ಲಕ್ಷಣಗಳನ್ನು ತೋರಿಸದೇ ಇರಬಹುದು. ಆದರೆ ಚಿಕಿತ್ಸೆ ಪಡೆಯದೆ ಮುಂದುವರಿದರೆ ಅವು ದೊಡ್ಡದಾಗಿ ವಿವಿಧ ಸಮಸ್ಯೆಗಳಿಗೆ ಕಾರಣವಾಗಬಹುದು.

ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಹಲ್ಲುಗಳ ಸ್ಥಾನಪಲ್ಲಟ, ದವಡೆಯ ಮೂಳೆ ಸವೆತ, ಸೋಂಕು ಹಾಗೂ ಮುಖದ ಆಕಾರದಲ್ಲಿ ಬದಲಾವಣೆ ಸೇರಿದಂತೆ ದೀರ್ಘಕಾಲೀನ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಮಕ್ಕಳಲ್ಲಿ ದವಡೆ ಅಥವಾ ಮುಖದ ಭಾಗದಲ್ಲಿ ನಿರಂತರ ನೋವು, ಊತ ಅಥವಾ ಹಲ್ಲುಗಳ ಅಸಹಜ ಬೆಳವಣಿಗೆ ಕಂಡುಬಂದರೆ ತಜ್ಞ ವೈದ್ಯರನ್ನು ಸಂಪರ್ಕಿಸಿ ಅಗತ್ಯ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ.

ಚಿಕಿತ್ಸೆಯ ಬಳಿಕ ಬಾಲಕನ ತ್ವರಿತ ಚೇತರಿಕೆ

ಶಸ್ತ್ರಚಿಕಿತ್ಸೆಯ ನಂತರ ಬಾಲಕನ ಆರೋಗ್ಯದಲ್ಲಿ ತ್ವರಿತ ಚೇತರಿಕೆ ಕಂಡುಬಂದಿದೆ. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದ ಮನ್ಸೂರ್‌ನ ಮುಖದ ಊತ ಹಾಗೂ ನೋವು ಗಣನೀಯವಾಗಿ ಕಡಿಮೆಯಾಗಿದ್ದು, ಆರೋಗ್ಯ ಸ್ಥಿರಗೊಂಡ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ದವಡೆಯ ಸಂಪೂರ್ಣ ಕಾರ್ಯಕ್ಷಮತೆಯನ್ನು ಕಾಪಾಡಿಕೊಳ್ಳಲು ವೈದ್ಯರು ನಿಯಮಿತವಾಗಿ ಅಗತ್ಯ ವ್ಯಾಯಾಮಗಳನ್ನು ಮುಂದುವರಿಸುವಂತೆ ಸಲಹೆ ನೀಡಿದ್ದಾರೆ.Kumadvathi College Shikariura

‘ದವಡೆಯ ಭಾಗವನ್ನೇ ತೆಗೆಯುವ ಅಗತ್ಯವಿಲ್ಲದೆ ಗಡ್ಡೆ ಮಾತ್ರ ತೆರವು’

ಈ ಪ್ರಕರಣದ ಕುರಿತು ಮಾತನಾಡಿದ ಡಾ. ದೀಪಕ್ ಕಿತ್ತೂರು, ಮಕ್ಕಳಲ್ಲಿಯೂ ಇಂತಹ ಸಂಕೀರ್ಣ ದವಡೆ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದರೆ ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ ಎಂದು ಹೇಳಿದರು.

ಬಾಲಕ ಈ ಆಸ್ಪತ್ರೆಗಿಂತ ಮೊದಲು ಬೇರೆ ಆಸ್ಪತ್ರೆಗಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದವಡೆಯ ಬಲಭಾಗವನ್ನು ತೆಗೆದುಹಾಕಬೇಕಾಗಬಹುದು ಎಂದು ತಿಳಿಸಲಾಗಿತ್ತು. ಆದರೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯ ವೈದ್ಯಕೀಯ ತಂಡವು ದವಡೆಯ ಭಾಗವನ್ನು ತೆಗೆದುಹಾಕದೆ, ಕೇವಲ ಗಡ್ಡೆಯನ್ನು ತೆರವುಗೊಳಿಸುವ ಮೂಲಕ ಬಾಲಕನ ಬಾಯಿ ಹಾಗೂ ಮುಖದ ಸ್ವರೂಪವನ್ನು ಉಳಿಸಲು ಸಾಧ್ಯವಾಯಿತು ಎಂದು ಅವರು ವಿವರಿಸಿದರು.

ಸ್ಥಳೀಯವಾಗಿಯೇ ಇಂತಹ ಸಂಕೀರ್ಣ ಪ್ರಕರಣಗಳನ್ನು ನಿರ್ವಹಿಸುವ ಸಾಮರ್ಥ್ಯ, ತಜ್ಞ ವೈದ್ಯರ ಆರೈಕೆ ಹಾಗೂ ಸಕಾಲಿಕ ಸ್ಕ್ಯಾನಿಂಗ್‌ನ ಮಹತ್ವವನ್ನು ಈ ಪ್ರಕರಣ ಮತ್ತೊಮ್ಮೆ ಎತ್ತಿಹಿಡಿದಿದೆ ಎಂದು ಡಾ. ಕಿತ್ತೂರು ತಿಳಿಸಿದರು.

‘ಸಂಕೀರ್ಣ ಚಿಕಿತ್ಸೆಗಳಿಗಾಗಿ ದೊಡ್ಡ ನಗರಗಳಿಗೆ ತೆರಳುವ ಅಗತ್ಯವಿಲ್ಲ’

ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ನಿರ್ದೇಶಕ ಡಾ. ಉತ್ತಮ ಶರ್ಮ ಅವರು ಶಸ್ತ್ರಚಿಕಿತ್ಸಾ ತಂಡವನ್ನು ಅಭಿನಂದಿಸಿದರು.

ಸಣ್ಣ ವಯಸ್ಸಿನ ಮಗುವಿನಲ್ಲಿ ಕಾಣಿಸಿಕೊಂಡ ಅಪರೂಪದ ದವಡೆ ಗಡ್ಡೆಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿರುವುದು ಆಸ್ಪತ್ರೆಯ ವೈದ್ಯರ ಅಸಾಧಾರಣ ಕೌಶಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಅತ್ಯಾಧುನಿಕ ಶಸ್ತ್ರಚಿಕಿತ್ಸಾ ಸೌಲಭ್ಯಗಳು ಇದೀಗ ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜನರಿಗೂ ಲಭ್ಯವಿದ್ದು, ಸಂಕೀರ್ಣ ಚಿಕಿತ್ಸೆಗಳಿಗಾಗಿ ರೋಗಿಗಳು ದೊಡ್ಡ ನಗರಗಳಿಗೆ ತೆರಳುವ ಅಗತ್ಯವಿಲ್ಲ ಎಂಬುದನ್ನು ಈ ಯಶಸ್ವಿ ಚಿಕಿತ್ಸೆ ತೋರಿಸಿಕೊಟ್ಟಿದೆ ಎಂದು ಡಾ. ಉತ್ತಮ ಶರ್ಮ ಅಭಿಪ್ರಾಯಪಟ್ಟರು.

ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜನರಿಗೆ ಉತ್ತಮ ಗುಣಮಟ್ಟದ ಹಾಗೂ ಪರಿಣಿತ ವೈದ್ಯಕೀಯ ಸೇವೆಗಳನ್ನು ಒದಗಿಸಲು ಆಸ್ಪತ್ರೆ ಸದಾ ಬದ್ಧವಾಗಿದೆ ಎಂದು ಅವರು ತಿಳಿಸಿದರು.

11 ವರ್ಷದ ಬಾಲಕನ ದವಡೆಯನ್ನು ಉಳಿಸಿಕೊಂಡು ದೊಡ್ಡ ಗಾತ್ರದ ಅಪರೂಪದ ಸಿಸ್ಟ್‌ನ್ನು ಯಶಸ್ವಿಯಾಗಿ ತೆರವುಗೊಳಿಸಿರುವುದು ಶಿವಮೊಗ್ಗದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿ ಗುರುತಿಸಿಕೊಂಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     Kalpa News Advertising DisclaimerKalahamsa Infotech private limited

Tags: Dentigerous Odontogenic CystHealth NewsRetromolar TrigoneSahyadri Narayana HospitalShivamoggaದವಡೆಯ ಗಡ್ಡೆರೆಟ್ರೊಮೋಲಾರ್ ಟ್ರಿಗೋನ್ಶಸ್ತ್ರಚಿಕಿತ್ಸೆಶಿವಮೊಗ್ಗಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ
Share209Tweet131Send
Aniruddha Vasishta S R

Aniruddha Vasishta S R

Editor-in-Chief

Previous Post

ರಾಷ್ಟ್ರೀಯ ಕ್ರೀಡಾ ದಿನಾಚರಣೆ | ವಿಶೇಷಚೇತನ ರೈಲ್ವೆ ನೌಕರರಿಗೆ ವಿಶೇಷ ಕ್ರೀಡಾಕೂಟ

Next Post

ರಕ್ಷಾ ಬಂಧನವು ಸಹೋದರ–ಸಹೋದರಿಯರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ: ವಿಶ್ವನಾಥ

kalpa News

kalpa News

Next Post
Shikaripura Raksha Bandhan In Mytri Kumadvathi School

ರಕ್ಷಾ ಬಂಧನವು ಸಹೋದರ–ಸಹೋದರಿಯರ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ: ವಿಶ್ವನಾಥ

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL