ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಭಾರತೀಯ ವೈದ್ಯಕೀಯ ಸಂಘ ಹಾಗೂ ಶಿವಮೊಗ್ಗ ಪ್ರಸೂತಿಶಾಸ್ತ್ರ ಮತ್ತು ಸ್ತ್ರೀರೋಗ ವಿಜ್ಞಾನ ಸೊಸೈಟಿ ಇವರ ಸಂಯುಕ್ತಾಶ್ರಯದಲ್ಲಿ ಭಾರತೀಯ ವೈದ್ಯಕೀಯ ಸಂಘದ 75 ನೇ ವಾರ್ಷಿಕೋತ್ಸವದ ಅಂಗವಾಗಿ ಮಾ.22 ಮತ್ತು ಮಾ.23 ರಂದು ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಅಪೂರ್ವ ಫೆಟಲ್ ಮೆಡಿಸನ್ ಸೆಂಟರ್ ಮಾಲೀಕರಾದ ಡಾ. ಅಪೂರ್ವ ತಿಳಿಸಿದರು.
ಇಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾ.22 ರ ಸಂಜೆ 7.00 ಗಂಟೆಗೆ ಗಂಟೆಗೆ ನಗರದ ರಾಯಲ್ ಆರ್ಕಿಡ್ ಹೋಟೆಲ್‍ನಲ್ಲಿ ಭ್ರೂಣ ತಪಾಸಣಾ ವಿಧಾನಗಳ ಪಿತಾಮಹರಾದ ಡಾ. ಸುರೇಶ್ ಶೇಷಾದ್ರಿ ಹಾಗೂ ಡಾ. ಇಂದ್ರಾಣಿ ಸುರೇಶ್‍ರವರು ಅತಿಥಿ ಉಪನ್ಯಾಸ ನೀಡಲಿದ್ದಾರೆ. ಭ್ರೂಣ ವೈದ್ಯಕೀಯ ಕ್ಷೇತ್ರದ ಮಹತ್ವವನ್ನು ಹತ್ತಿರವಾಗಿ ಅರ್ಥೈಸಿಕೊಳ್ಳುವ ಮತ್ತು ತಜ್ಞರ ಮಾರ್ಗದರ್ಶನ ಪಡೆಯುವ ಅಪೂರ್ವ ಅವಕಾಶ ಇದಾಗಿದೆ ಎಂದರು.
ಮಾ.23 ರಂದು ಬೆಳಿಗ್ಗೆ 10.00 ಗಂಟೆಗೆ ನಗರದ ಅಚ್ಯುತ್ ರಾವ್ ಲೇಔಟ್‍ನಲ್ಲಿ ನೂತನ ಅಪೂರ್ವ ಮೆಡಿಸನ್ ಸೆಂಟರ್‍ನ್ನು ಉದ್ಘಾಟನೆ ಮಾಡಲಿದ್ದೇವೆ. ಫೆಟಲ್ ಮೆಡಿಸನ್ ಎಂದರೆ ತಾಯಿಯ ಗರ್ಭದೊಳಗಿರುವ ಮಗುವಿನ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳುವ ಒಂದು ಪ್ರಕ್ರಿಯೆ. ಇತ್ತೀಚೆಗೆ ಮಕ್ಕಳು ಹುಟ್ಟುವ ಮುನ್ನಾ ನಾನಾ ಖಾಯಿಲೆಗಳಿಗೆ ಒಳಪಟ್ಟಿರುತ್ತಾರೆ. ಅವುಗಳು ಹುಟ್ಟಿದ ತಕ್ಷಣ ಅವುಗಳಿಗೆ ಸೂಕ್ತವಾದ ಔಷದಿಗಳನ್ನು ನೀಡಿ ಗುಣಪಡಿಸಿದಾಗ ಮಾತ್ರ ಮಕ್ಕಳ ಆರೋಗ್ಯ ವೃದ್ದಿಸಲು ಸಾಧ್ಯವಾಗುತ್ತದೆ. ಈ ಹಿಂದೆಲ್ಲಾ ಭ್ರೂಣದ ಆರೋಗ್ಯವನ್ನು ತಿಳಿದುಕೊಳ್ಳಲು 5 ತಿಂಗಳು ಕಾಯಬೇಕಿತ್ತು. ಆದರೆ ಈಗ ಮುಂದುವರೆದ ತಂತ್ರಜಾÐನದಿಂದ 3 ತಿಂಗಳಲ್ಲಿ ಮುಗುವಿನ ಆರೋಗ್ಯ ಹೇಗಿದೆ ಎಂದು ತಿಳಿದುಕೊಳ್ಳಬಹುದು ಎಂದರು.
Also read: ಅಧಿಕಾರಿಗಳ ನಿರ್ಲಕ್ಷ | ಕರ್ತವ್ಯ ಲೋಪದಡಿ ಸ್ವಯಂಪ್ರೇರಿತ ದೂರು ದಾಖಲು
ಭ್ರೂಣ ತಪಾಸಣಾ ವಿಧಾನಗಳ ಪಿತಾಮಹರಾದ ಡಾ. ಸುರೇಶ್ ಶೇಷಾದ್ರಿ ಹಾಗೂ ಡಾ. ಇಂದ್ರಾಣಿ ಸುರೇಶ್ ನಮ್ಮ ಈ ಅಪೂರ್ವ ಫೆಟಲ್ ಮೆಡಿಸನ್ ಸೆಂಟರ್ ಉದ್ಘಾಟನೆ ಮಾಡಲಿದ್ದಾರೆ. ಅವರು ನನಗೆ ಗುರುಗಳಾಗಿದ್ದು, ಡಾ. ಇಂದ್ರಾಣಿ ಸುರೇಶ್ ಅವರು 41 ವರ್ಷಗಳ ಅನುಭವ ಹೊಂದ್ದಾರೆ, ಭ್ರೂಣ ಹೃದಯ ಚಿಕಿತ್ಸೆಯಲ್ಲಿ ಪ್ರಮುಖ ಕೊಡುಗೆ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ವೈದ್ಯಕೀಯ ಸಂಘದ ಡಾ. ಶ್ರೀಧರ.ಎಸ್, ಡಾ. ವಿನಯ್ ಶ್ರೀನಿವಾಸ್, ಡಾ. ರಜಾರಾಮ್.ಯು.ಹೆಚ್, ಪ್ರಸೂತಿಶಾಸ್ತ್ರ ಮತ್ತು ಸ್ತ್ರೀರೋಗ ವಿಜ್ಞಾನ ಸೊಸೈಟಿಯ ಡಾ. ಭಾರತಿ.ಹೆಚ್.ಜಿ, ಡಾ. ಪ್ರಿಯಂವಾದ, ಡಾ. ಶಶಿ ಕುಮಾರ್ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ. ಪಿ.ನಾರಾಯಣ, ಡಾ. ಕೃಷ್ಣ ಪ್ರಸಾದ್, ಡಾ. ವಿನಯ ಶ್ರೀನಿವಾಸ್, ಡಾ. ಭಾರತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post