ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕನ್ನಡ ಚಿತ್ರರಂಗಕ್ಕೆ ಹಲವಾರು ಪ್ರತಿಭೆಗಳನ್ನು ನೀಡಿರುವ ಶಿವಮೊಗ್ಗ ಸ್ಯಾಂಡಲ್’ವುಡ್’ಗಾಗಿ Sandalwood ಕೊಡುಗೆಯಾಗಿ ಕೊಟ್ಟಿರುವ ಮತ್ತೊಂದು ಪ್ರತಿಭೆ `ಶಿವಮೊಗ್ಗ ಹರೀಶ್’.
ಈಗಾಗಲೇ ಚಿತ್ರರಂಗ ಹಾಗೂ ಕಿರುತೆರೆದಯಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಶಿವಮೊಗ್ಗ ಹರೀಶ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ `ನಮಸ್ತೆ ಗೋಸ್ಟ್’ ಚಿತ್ರ ತೆರೆಗೆ ಬರಲು ಸಿದ್ದವಾಗಿದ್ದು, ಇದು ಬಿಡುಗಡೆಗು ಮುನ್ನವೇ ದಾಖಲೆ ಬರೆದಿರುವುದು ಮಲೆನಾಡಿಗರ ಹೆಮ್ಮಯೂ ಹೌದು.
ಎಸ್… ಹೊಸಬರ ತಂಡವೇ ಸಿದ್ದಪಡಿಸಿರುವ ನಮಸ್ತೆ ಗೋಸ್ಟ್ Namaste Ghost ಚಿತ್ರ ಜುಲೈ 14ರಂದು ತೆರೆಗೆ ಬರಲಿದ್ದು, ಇದಕ್ಕೂ ಮುನ್ನವೇ ರಾಜ್ಯದ 30 ಕಾಲೇಜುಗಳಲ್ಲಿ ಸುಮಾರು 6000ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಿನೆಮಾ ತೋರಿಸಿ ಸ್ಯಾಂಡಲ್’ವುಡ್’ನಲ್ಲಿ ಹೊಸ ದಾಖಲೆಯನ್ನು ಬರೆದಿದೆ.
ಇದು ಭಯಾನಕ ಮತ್ತು ಹಾಸ್ಯಮಿಶ್ರಿತ ಚಿತ್ರವಾಗಿದೆ. ಇಯರ್’ಫೋನ್ ಬಳಕೆಯಿಂದ ಏನಾಗಬಹುದು ಎಂಬ ಸಂದೇಶ ಕೂಡ ಇದರಲ್ಲಿದೆ. ಯುವಕರನ್ನು ಹೆಚ್ಚಾಗಿ ಇದು ಆಕರ್ಷಿಸುತ್ತದೆ. ಮುಖ್ಯ ಪಾತ್ರದಲ್ಲಿ ನಿರ್ದೇಶಕ ಭರತ್ನಂದಾ, ನಾಯಕಿಯಾಗಿ ವಿದ್ಯಾರಾಜ್ ಕಾಣಿಸಿಕೊಂಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ನಾನೂ ಸೇರಿದಂತೆ ಬಾಲರಾಜ್ ವಾಡಿ, ಶಿವಕುರ್ಮಾ ಆರಾಧ್ಯ, ಅಖಿಲೇಶ್ ಮುಂತಾದವರು ನಟಿಸಿದ್ದಾರೆ. ತಂತ್ರಜ್ಞಾನದಲ್ಲೂ ಕೂಡ ಶಿವಮೊಗ್ಗದವರೇ ಹೆಚ್ಚಾಗಿದ್ದು, ರೂಪಾ ಹರೀಶ್ ಪ್ರಸಾದನ ಕೆಲಸ ಮಾಡಿದ್ದಾರೆ ಮಧುಸೂದನ್ ಅವರ ಛಾಯಾಗ್ರಹಣವಿದೆ. ಒಟ್ಟಾರೆ ಸಿನಿಮಾದಲ್ಲಿ ಶೇ.80ರಷ್ಟು ಶಿವಮೊಗ್ಗದವರೇ ಇದ್ದಾರೆ. ಶಿವಮೊಗ್ಗದ ಜನತೆ ಯುವಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು.
-ಶಿವಮೊಗ್ಗ ಹರೀಶ್
ಪೋಸ್ಟರ್ ಮೂಲಕವೇ ಸ್ಯಾಂಡಲ್’ವುಡ್’ನಲ್ಲಿ ಸದ್ದು ಮಾಡಿದ್ದ ನಮಸ್ತೆ ಗೋಸ್ಟ್’ದ ಟ್ರೇಲರ್ ಸಹ ಸಿನಿ ರಸಿಕರ ನಿರೀಕ್ಷೆಯನ್ನು ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ರಾಜ್ಯದ ಸುಮಾರು ಆರು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸಿನಿಮಾವನ್ನು ಬಿಡುಗಡೆಗೂ ಮುನ್ನವೇ ತೋರಿಸಿದ್ದು, ಇದೊಂದು ದಾಖಲೆಯೇ ಆಗಿದೆ.

ಈ ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜತೆಗೆ ನಿರ್ದೇಶನವನ್ನೂ ಮಾಡಿz್ದÁರೆ ಭರತ್ ನಂದ. ವಿದ್ಯಾ ರಾಜ್ ನಾಯಕಿಯಾಗಿದ್ದು, ಬಾಲ ರಾಜವಾಡಿ, ಶಿವಕುಮಾರ್ ಆರಾಧ್ಯ, ಶಿವಮೊಗ್ಗ ಹರೀಶ್ ಸೇರಿ ಹಲವು ಕಲಾವಿದರು ನಟಿಸಿದ್ದಾರೆ. ಹಾರರ್ ಥ್ರಿಲ್ಲರ್ ಶೈಲಿಯಲ್ಲಿ ತಯಾರಾಗಿರುವ ಈ ಸಿನಿಮಾದ ಕೆಲಸಗಳೆಲ್ಲವೂ ಮುಗಿದಿದ್ದು, ಇನ್ನೇನು ಶೀಘ್ರದಲ್ಲಿ ಪ್ರೇP್ಷÀಕರ ಮುಂದೆ ಬರಲು ಸಿದ್ಧತೆಯಲ್ಲಿದೆ. ರಮೇಶ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಯದುನಂದನ್ ಸಂಗೀತ, ವಿನಯ್ ಕುರ್ಮಾ ಸಂಕಲನ ಈ ಚಿತ್ರಕ್ಕಿದೆ.

ಈಗಾಗಲೇ ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯಲ್ಲಿ ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡು ಸೈ ಎನಿಸಿಕೊಂಡಿರುವ ಶಿವಮೊಗ್ಗ ಹರೀಶ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
Also read: ವಿದ್ಯಾರ್ಥಿಗಳಲ್ಲಿ ಮಾದಕ ಪದಾರ್ಥ ಸೇವನೆ, ಗಾಂಜಾ ಬೆಳೆ ನಿಗ್ರಹ ಕುರಿತು ಡಿಸಿ ಹೇಳಿದ ಪ್ರಮುಖ ಅಂಶಗಳಿವು
ರಂಗಭೂಮಿ ಕಲಾವಿದರಾದ ಹರೀಶ್, ಕನ್ನಡ ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಿಷ್ಣು ದಶಾವತಾರದಲ್ಲಿ ಬ್ರಾಹ್ಮಣರಾಗಿ, ರಕ್ಷಾಬಂಧನದಲ್ಲಿ ಭಲ್ಲಾಳನಾಗಿ, ಯಜಮಾನಿಯಲ್ಲಿ ಮಾದೇಶನಾಗಿ, ಗಿಣಿರಾಮದಲ್ಲಿ ವಿನೀತ್ ಆಗಿ, ಸರಸು ಧಾರವಾಹಿಯಲ್ಲಿ ಸಂಜೀವನಾಗಿ ಮನೆಮಾತಾದ ಹರೀಶ್ ಅತ್ಯಂತ ಪ್ರಮುಖವಾಗಿ ಶನಿ ಧಾರವಾಹಿಯಲ್ಲಿ ಕಾಕರಾಜನಾಗಿ ಕನ್ನಡಿಗರ ಮನಗೆದ್ದ ಮಲೆನಾಡ ಪ್ರತಿಭೆ.












Discussion about this post