ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ವಿವಿಧ ಸಂಘ, ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಇ -ತ್ಯಾಜ್ಯ ಅರಿವು ಮತ್ತ್ತು ವಿಲೇವಾರಿ ಅಭಿಯಾನ ಆರಂಭಗೊಂಡಿದ್ದು, ಇ- ತ್ಯಾಜ್ಯವನ್ನು ಸಂಗ್ರಹಿಸಲು ಪ್ರತಿ ವಾರ್ಡ್‌ಗಳಲ್ಲೂ ವಾಹನಗಳು ಸಂಚರಿಸುತ್ತಿದ್ದು, ಸಾರ್ವಜನಿಕರು ಸಹಕರಿಸುವಂತೆ ವಿವಿಧ ಸಂಘ, ಸಂಘ ಸಂಸ್ಥೆಗಳು ಮನವಿ ಮಾಡಿವೆ.
ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಡೂಮೈಂಡ್ಸ್ ಡಿಸೈನ್ ಲ್ಯಾಬ್ ಶಿವಮೊಗ್ಗ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಸರ್ಜಿ ಫೌಂಡೇಷನ್, ಪರಿಸರ ಅಧ್ಯಯನ ಕೇಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿವಮೊಗ್ಗ ರೇಡಿಯೋ , ನಡೆಗೆ ಶಿಕ್ಷಣ ಪ್ರತಿಷ್ಠಾನ ಸಂಯುಕ್ತಾಶ್ರಯ ಹಾಗೂ, ಐ-ಸೆವೆನ್ ಬೆಂಗಳೂರು, ರೇಡಿಯೋ ಶಿವಮೊಗ್ಗ ಎಫ್.ಎಂ. 90.8, ಶಿವಮೊಗ್ಗ ಐಟಿ ಅಸೋಸಿಯೇಷನ್, ರಾಷ್ಟ್ರೀಯ ಶಿಕ್ಷಣ ಸಮಿತಿ ( ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ಸಮಿತಿ ) ರೋಟರಿ ಶಿವಮೊಗ್ಗ,ರೌಂಡ್ ಟೇಬಲ್ ಇಂಡಿಯಾ ಘಟಕ, ಜೆಸಿಐ ಶಿವಮೊಗ್ಗ ಸಹಕಾರ ನೀಡಿದ್ದು, ಅಭಿಯಾನ 15 ದಿನಗಳ ಕಾಲ ನಡೆಯಲಿದೆ. ವಾರ್ಡ್‌ವಾರು ವಾಹನ ಬರುವ ದಿನಾಂಕಗಳು ಈ ಕೆಳಕಂಡಂತಿವೆ.
ಅ.16 ರಂದು ಶಾಂತಿ ನಗರ, ಮಲ್ಲೇಶ್ವರ ನಗರ, 17 ವಿದ್ಯಾನಗರ, ಗಾಂಧಿ ನಗರ, 18 ಅರಮನೆ ಪ್ರದೇಶ, ಕೆಎಚ್‌ಬಿ ಗೋಪಾಳ, 19 ಜೆಪಿ ನಗರ, ಮಂಡ್ಲಿ, 20 ರಂದು ಟಿಪ್ಪು ನಗರ ಎಡಭಾಗ, 21 ರಂದು ಗಾಂಧಿಬಜಾರ್ (ಪಶ್ಚಿಮ), 22 ರಂದು ಗಾಂಧಿ ಬಜಾರ್ (ಪೂರ್ವ), 23 ರಂದು ಮಿಳ್ಳಘಟ್ಟ, ರವೀಂದ್ರ ನಗರ , 24 ರಂದು ಬಸವನಗುಡಿ, 25 ರಂದು ಶರಾವತಿ ನಗರ, ಮಲವಗೊಪ್ಪ , 26 ರಂದು ವಿದ್ಯಾನಗರ (ದಕ್ಷಿಣ), 27 ರಂದು ಸೂಳೆಬೈಲು, ಗೋಪಾಳಗೌಡ ಬಡಾವಣೆ, 28 ರಂದು ವಿನೋಬ ನಗರ (ದಕ್ಷಿಣ), ಅಶೋಕ ನಗರ, 29 ರಂದು ಆರ್‌ಎಂಎಲ್ ನಗರ , ಎನ್‌ಟಿ ರಸ್ತೆ, 30 ರಂದು ಸೀಗೆಹಟ್ಟಿ, ನ್ಯೂ ಮಂಡ್ಲಿ, ಹರಕೆರೆ, ಟ್ಯಾಂಕ್ ಮೊಹಲ್ಲಾ, 31 ರಂದು ದುರ್ಗಿಗುಡಿ ಅಶ್ವತ್ಥ ನಗರ,ಜೆಪಿಎನ್ ನಗರ, 01 ರಂದು ಹೊಸಮನೆ, ಗಾಡಿಕೊಪ್ಪ, ನವೆಂಬರ್ 02 ರಂದು ಸಹ್ಯಾದ್ರಿ ನಗರ, ಕಲ್ಲಳ್ಳಿ ಕಾಶಿಪುರ ಬಡಾವಣೆಗಳಲ್ಲಿ ಇ – ತ್ಯಾಜ್ಯ ವಾಹನಗಳು ಸಂಚರಿಸಲಿದ್ದು, ಸಾರ್ವಜನಿಕರು ತಮ್ಮ ಮನೆಯಲ್ಲಿರುವ, ಕಚೇರಿಯಲ್ಲಿರುವ ಇ- ತ್ಯಾಜ್ಯಗಳನ್ನು ನೀಡಿ ಸಹಕರಿಸುವಂತೆ ವಿವಿಧ ಸಂಘಟನೆಗಳು ಮನವಿ ಮಾಡಿವೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















