ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಹೃದಯ ಮಿಡಿದ ಘಟನೆಯೊಂದು ನಿನ್ನೆ ಸಂಜೆ ದೊಡ್ಡಪೇಟೆ ಠಾಣೆಯಲ್ಲಿ ಅಧಿಕಾರಿಗಳ ಮತ್ತು ಸಾರ್ವಜನಿಕರ ಮುಂದೆ ಸಾಕ್ಷಿಯಾಯಿತು.
ಕೇವಲ ಎಂಟೂವರೆ ವರ್ಷದ ಹೃದಯ ಸಂಬಂಧಿ ಕಾಯಿಲೆಗ ಇರುವ ಬಾಲಕನೊಬ್ಬ ದೊಡ್ಡಪೇಟೆ ಠಾಣೆ ಇನ್‍ಸ್ಪೆಕ್ಟರ್ ಆಗಿ ಒಂದು ಗಂಟೆ ಕಾರ್ಯನಿರ್ವಹಿಸಿ ಹಲವು ವೈಶಿಷ್ಟ್ಯಗಳಿಗೆ ನಾಂದಿ ಹಾಡಿದ್ದಾನೆ.

ಮೂರು ತಿಂಗಳ ಮಗು ಇದ್ದಾಗಲೇ ಅಜಾನ್ ಖಾನ್‍ಗೆ ಈ ಕಾಯಿಲೆ ಕಂಡುಬಂದಿತ್ತು. ಸ್ಥಳೀಯ ವೈದ್ಯರ ಬಳಿ ತೋರಿಸಲಾಗಿತ್ತು. 8 ವರ್ಷದ ಬಳಿಕ ಮತ್ತೊಂದು ಆಪರೇಷನ್ ಮಾಡಬೇಕೆಂದು ವೈದ್ಯರು ಹೇಳಿದ್ದರು. ಅದರಂತೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಕೂಡ ಮಾಡಿಸಲಾಯಿತು. ಹೃದಯ ಮತ್ತು ಶ್ವಾಸಕೋಶವನ್ನು ಒಟ್ಟಿಗೆ ಕಸಿ ಮಾಡಬೇಕಿದೆ. ಆಜಾನ್ ಖಾನ್‍ನ ವಯಸ್ಸಿನ ದಾನಿಗಳಿಗೆ ಪಾಲಕರು ಹುಡುಕಾಟ ನಡೆಸುತ್ತಿದ್ದಾರೆ.
ಇದೀಗ ಬಾಲಕ ತನ್ನ ಆಸೆಯಂತೆ ಒಂದು ಗಂಟೆ ಖಾಕಿ ತೊಟ್ಟು ಸಂಭ್ರಮಪಟ್ಟಿದ್ದಾನೆ. ಇದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಇಲಾಖೆಯ ಅಧಿಕಾರಿಗಳು ಸಂಪೂರ್ಣ ಸಹಕಾರ ನೀಡಿದ್ದಾರೆ.

Also read: PESITM ಕಾಲೇಜಿನಲ್ಲಿ ಐದು ದಿನಗಳ ಫ್ಯಾಕಲ್ಟಿ ಡೆವಲಪ್‌ಮೆಂಟ್ ಪ್ರೋಗ್ರಾಂಗೆ ಚಾಲನೆ
ಚೆನ್ನಾಗಿ ಓದಿ ಮುಂದೆ ನಾನು ಪೊಲೀಸ್ ಇನ್‍ಸ್ಪೆಕ್ಟರ್ ಆಗುತ್ತೇನೆ. ಪೊಲೀಸ್ ಅಧಿಕಾರಿ ಆಗುವುದು ನನ್ನ ಕನಸು. ಪೊಲೀಸ್ ಇಲಾಖೆಗೆ ಸೇರಿ ಕಳ್ಳರನ್ನು ಮಟ್ಟಹಾಕುತ್ತೇನೆ. ಕಳ್ಳರು ಸಿಕ್ಕರೆ ಶಿಕ್ಷಿಸುತ್ತೇನೆ. ದೇಶಸೇವೆ ಮಾಡುವುದು ನನ್ನ ಕನಸು.ಇನ್‍ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಕ್ಕೆ ಖುಷಿಯಾಯಿತು. ರಿಯಲ್ ಪೊಲೀಸ್ ತರಹ ಕಾಣುತ್ತೇನೆ. ದೊಡ್ಡವನಾದ ಮೇಲೆ ಎಸ್ಪಿ ಆಗುತ್ತೇನೆ ಎಂದು ಆಜಾನ್ ಖಾನ್ ಮುಂದಿನ ಕನಸನ್ನು ಬಿಚ್ಚಿಟ್ಟ.

ಬಾಲಕನ ತಂದೆ ತಾಬ್ರೇಜ್ ಖಾನ್, ಮಗ ಇನ್‍ಸ್ಪೆಕ್ಟರ್ ಆಗುವ ಕನಸು ಕಂಡಿದ್ದ. ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ನಟ ಸುದೀಪ್ ಅವರನ್ನು ಭೇಟಿಯಾಗುವ ಕನಸು ಕಂಡಿದ್ದ. ಅವರ ಆಸೆಯಂತೆ ಸುದೀಪ್ ಮನೆಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದ್ದೆವು. ಇನ್‍ಸ್ಪೆಕ್ಟರ್ ಆಗಬೇಕು ಎಂದಿದ್ದ. ಹೃದಯ ಮತ್ತು ಶ್ವಾಸಕೋಶದ ಕಸಿ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.











Discussion about this post