ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಿನ್‌ಲೈಫ್, ಮೆಟ್ರೋ ಆಸ್ಪತ್ರೆ, ಡಯಾಬಿಟಿಸ್, ವೆಲ್‌ನೆಸ್ ಸೆಂಟರ್ ಹಾಗೂ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಇವರ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ನ.12ರ ನಾಳೆ ಬೆಳಿಗ್ಗೆ 10ರಿಂದ ಮಧ್ಯಾಹ್ನ 1ಗಂಟೆಯವರೆಗೆ ಕುವೆಂಪು ರಂಗಮAದಿರದಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ತರಬೇತಿ ಮತ್ತು ಕಾರ್ಯಗಾರ ಏರ್ಪಡಿಸಲಾಗಿದೆ ಎಂದು ವಿನ್‌ಲೈಫ್‌ನ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಮೆಟ್ರೋ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಬಿ.ಸಿ. ಪೃಥ್ವಿ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಗಾರದಲ್ಲಿ ‘ಮಧುಮೇಹ @360 ಎಲ್ಲಾ ಆಯಾಮದಲ್ಲೂ ಮಧುಮೇಹದೊಂದಿಗೆ 100 ವರ್ಷ ಬಾಳಿ. ಇದರ ಬಗ್ಗೆ ಸಮಾಲೋಚನೆ, ಉಪನ್ಯಾಸ, ತುರ್ತು ಜೀವರಕ್ಷಕ ತರಬೇತಿ, ಸಮತೋಲನ ಆಹಾರ ಪದ್ದತಿ, ಮೆಡಿಕಲ್ ಯೋಗ ಥೆರೆಪಿ ಬಗ್ಗೆ ಸವಿಸ್ತಾರವಾಗಿ ತಿಳಿಸಲಾಗುವುದು. ಸಕ್ಕರೆ ಖಾಯಿಲೆಗೆ ಸಂಬಂಧಪಟ್ಟ ಎಲ್ಲಾ ಆಧುನಿಕ ಅವಿಷ್ಕಾರವನ್ನು ಪ್ರತ್ಯಕ್ಷಿಕವಾಗಿ ಆಸ್ಪತ್ರೆಯ ನಮ್ಮ ತಂಡದಿAದ ತೋರಿಸಲಾಗವುದು ಎಂದರು.
Also read: ಸಾರ್ವಜನಿಕರೇ, ತುಂಗಾ ನದಿ ಉಳಿವಿಗೆ ಸರ್ಕಾರವನ್ನು ದೂಷಿಸದೇ ನೀವೇ ಕೈಜೋಡಿಸಿ: ವಿವೇಕ್ ತ್ಯಾಗಿ ಕರೆ
ಇದೀಗ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಡಯಾಬಿಟಿಸ್‌ನ ಕುರಿತು ಸಂಪೂರ್ಣ ಮತ್ತು ನಿರಂತರ ಮಾಹಿತಿಗಾಗಿ ‘ಕ್ಯೂಆರ್ ಸ್ಕಾನರ್ ಕೋಡ್ನ್ನು ಬಿಡುಗಡೆ ಮಾಡಲಾಗುವುದು ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಜಿಲ್ಲಾ ರಕ್ಷಣಾಧಿಕಾರಿ ಬಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಆರೋಗ್ಯ ಮತ್ತಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಸ್.ನಟರಾಜ್, ಆರ್‌ಸಿಹೆಚ್ ಅಧಿಕಾರಿ ಡಾ.ಓ.ಮಲ್ಲಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರಾಜ್ ನಾಯಕ್ ಎಲ್. ಮೆಟ್ರೋ ಆಸ್ಪತ್ರೆ ಅಧ್ಯಕ್ಷ ಡಾ.ಪಿ.ಲಕ್ಷ್ಮೀನಾರಾಯಣ ಆಚಾರ್ ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿನ್‌ಲೈಫ್‌ನ ನಿರ್ದೇಶಕರುಗಳಾದ ಡಾ. ಶಂಕರ್, ಡಾ.ವಿಜಯ್‌ಕುಮಾರ್ ಪಾಟೀಲ್, ರೆಹಮತ್, ಬದ್ರಿನಾಥ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post