ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತುಂಗಾ ನದಿ ಮಲಿನ ಆಗುತ್ತಿದೆ. ಉಗಮ ಸ್ಥಾನದಿಂದ ಅಂತ್ಯದವರೆಗೆ ಸಾಕಷ್ಟು ಕಡೆ ಕೊಳಚೆ ನೀರು ಸೇರುತ್ತಿದೆ. ಅದನ್ನು ತಡೆಯುವ ಜತೆಗೆ ಹೊಸ ಸೆಲೆಗಳು ಬಂದು ನದಿಯನ್ನು ಸೇರಿಕೊಳ್ಳುವಂತೆ ಮಾಡಬೇಕು ಎಂದು ಕೂಡ್ಲಿ ಶೃಂಗೇರಿ ಮಠದ ಶ್ರೀ ಅಭಿನವ ಶಂಕರ ಭಾರತೀ ಸ್ವಾಮೀಜಿ #Shri Abhinava Shankara Bharathi of Koodli Shringeri Mutt ಹೇಳಿದರು.
ತುಂಗಾರತಿ #Tungarathi ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮುಚ್ಚಿ ಹೋಗಿರುವ ಸೆಲೆಗಳನ್ನೂ ಹುಡುಕಿ ನೀರು ನದಿಗೆ ಹರಿಯುವಂತೆ ಮಾಡಬೇಕಿದೆ. ಈ ಒಂದು ಸತ್ಕಾರ್ಯಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಹೇಳಿದರು.
ರಾಸಾಯನಿಕ ಬಳಕೆಯಿಂದ ಮಳೆ ನೀರನ್ನು ಮಣ್ಣು ಹಿಡಿದುಕೊಳ್ಳುತ್ತಿಲ್ಲ. ಮಣ್ಣು ಸಾರವನ್ನು ಕಳೆದುಕೊಳ್ಳುತ್ತಿದೆ. ನದಿ ಪಾತ್ರದಲ್ಲಿ ಗಿಡಮರಗಳನ್ನು ಬೆಳೆಸದಿರುವುದು ಇದಕ್ಕೆ ಮುಖ್ಯ ಕಾರಣ. ಹಾಗಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಗಿಡಮರಗಳನ್ನು ಬೆಳೆಸಬೇಕು. ಸುತ್ತಮುತ್ತಲಿನ ಪರಿಸರವನ್ನು ಕಾಪಾಡಿಕೊಳ್ಳಲು ಎಲ್ಲರೂ ಮುಂದಾಗ ಬೇಕಿದೆ ಎಂದರು.
Also read: `ಕರಿಯ ಕುಮಾರಸ್ವಾಮಿ’ ನಿನ್ನ ರೇಟ್ ಹೇಳು, ಮುಸಲ್ಮಾನರು ಖರೀದಿಸುತ್ತಾರೆ: ಜಮೀರ್ ಜನಾಂಗೀಯ ನಿಂದನೆ
ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮಾಜಿ ಎಂಎಲ್‌ಸಿ ಆರ್. ಕೆ.ಸಿದ್ದರಾಮಣ್ಣ, ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ಕಾರ್ಯಕಾರಿ ಸಮಿತಿ ಸದಸ್ಯ ವಿವೇಕ್ ತ್ಯಾಗಿ, ಅಭಿಯಾನದ ಪ್ರಮುಖರಾದ ಪ್ರೊ. ಬಿ.ಎಂ. ಕುಮಾರಸ್ವಾಮಿ, ಎಂ. ಶಂಕರ್ ಇತರರಿದ್ದರು.
ತುಂಗಾ ಆರತಿ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿನ ಕೋರ್ಪಲಯ್ಯನ ಮಂಟಪ, ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದವು. ತುಂಗೆ, ಸಾಲು ಸಾಲು ಹಣತೆಗಳ ಬೆಳಕು, ಕಣ್ಮನ ಸೆಳೆದ ಬಾಣ ಬಿರುಸುಗಳ ಪ್ರದರ್ಶನ, ಋತ್ವಿಜರಿಂದ ತುಂಗೆಗೆ ಆರತಿ ಕಾರ್ಯಕ್ರಮ ಕಣ್ಮನ ಸೆಳೆಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post