ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನವದೆಹಲಿಯ ಗ್ಲೋಬಲ್ ಎಕಾನಮಿಕ್ ಪ್ರೊಗ್ರೆಸ್ & ರಿಸರ್ಚ್ ಅಸೋಸಿಯೇಷನ್ ಸಂಸ್ಥೆಯು ಲೇಖಕ, ಪ್ರಾಧ್ಯಾಪಕ ಪ್ರೊ. ಸತ್ಯನಾರಾಯಣ ಅವರಿಗೆ ಭಾರತ ರತ್ನ ರಾಜೀವಗಾಂಧಿ ಗೋಲ್ಡ್ ಮೆಡಲ್ ಅವಾರ್ಡ್ ನೀಡಿ ಗೌರವಿಸಿದೆ.
ಶಿಕ್ಷಣ, ಸಾಹಿತ್ಯ ಮತ್ತು ಸೇವಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರೊ.ಸತ್ಯ ನಾರಾಯಣ ಅವರು ದೆಹಲಿಯಲ್ಲಿ ಈ ಪ್ರಶಸ್ತಿ ಸ್ವೀಕರಿಸಿದರು.
ಕಮಲಾ ನೆಹರೂ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿದ್ದ ಅವರು, ನೂರಾರು ಲೇಖನ, ಸಂಶೋಧನಾ ಕೃತಿಗಳನ್ನು ರಚಿಸಿ ಹಲವು ಪ್ರಶಸ್ತಿ ಮತ್ತು ಸನ್ಮಾನಗಳನ್ನು ಸ್ವೀಕರಿಸಿದ್ದಾರೆ. ಗಂಗಾಮತ ಸಮಾಜದ ಪ್ರಮುಖರಾಗಿದ್ದು, ಸಂಘದ ಚಟುವಟಿಕೆಗಳಲ್ಲಿ ಭಾಗವಹಿಸಿ ಉತ್ತಮ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ.
ಇವರಿಗೆ ಗಂಗಾಮತ ಸಮಾಜದ ಮುಖಂಡರು ಮತ್ತು ಅವರ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದೆ ಎಂದು ಪ್ರಕಟಣೆ ತಿಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post