ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಣ್ಣನಿಂದಲೇ ತಮ್ಮನ ಹತ್ಯೆಯಾಗಿರುವ ಘಟನೆ ಅನುಪಿನಕಟ್ಟೆಯಲ್ಲಿ ವರದಿಯಾಗಿದೆ.
ಗಿರೀಶ್ ನಾಯ್ಕ (30) ಮೃತಪಟ್ಟ ವ್ಯಕ್ತಿ. ಇಲ್ಲಿನ ಲಂಬಾಣಿ ತಾಂಡಾದ ಮನೆಯೊಳಗೆ ಲೋಕೇಶ್ ನಾಯ್ಕ ಎಂಬಾತ ತನ್ನ ಸಹೋದರ ಗಿರೀಶ್ನನ್ನು ಕೊಲೆ ಮಾಡಿದ್ದಾರೆ.
Also Read>> ಒಂದು ದಿನದ ಅಂತರದಲ್ಲಿ ಇಬ್ಬರು ಪತ್ರಕರ್ತರನ್ನು ಕಳೆದುಕೊಂಡ ಶಿವಮೊಗ್ಗ ಪತ್ರಿಕೋದ್ಯಮ
ವೈಯಕ್ತಿಕ ಕಾರಣಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿ ಹತ್ಯೆಯಾಗಿದೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ತುಂಗಾ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಲೋಕೇಶ್ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post