ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕ್ಯಾನ್ಸರ್ ನಂತಹ #Cancer ಮಾರಕ ಕಾಯಿಲೆ ಬಂದ ನಂತರ ಗುಣಪಡಿಸುವುದಕ್ಕಿಂತ, ಅದು ಬರದಂತೆ ತಡೆಯಲು ಜನರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಂಗಳೂರು ಕ್ಯಾನ್ಸರ್ ಆಸ್ಪತ್ರೆ (ಎಂಐಒ) ಯು ನಡೆಸುತ್ತಿರುವ ಅರಿವು ಆಭಿಯಾನ ಗಮನಾರ್ಹವಾದದ್ದು ಎಂದು ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್.ಎನ್ . ಚನ್ನಬಸಪ್ಪ ಅಭಿಪ್ರಾಯಪಟ್ಟರು.
ನಗರದ ಮಥುರಾ ಪ್ಯಾರಾಡೈಸ್ ಹೋಟೆಲ್ ನೆಲ ಮಹಡಿಯಲ್ಲಿ ಎಂಐಒ ಆಸ್ಪತ್ರೆ ಹಾಗೂ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್ ವತಿಯಿಂದ ನೂತನವಾಗಿ ಅರಂಭಗೊಂಡ ಕ್ಯಾನ್ಸರ್ ಮಾಹಿತಿ ಕೇಂದ್ರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮ ದೇಶ ಸೇವೆಗೆ ಹೆಸರುವಾಸಿ .ಸೇವಾ ಕಾರ್ಯವು ದೇಶದಲ್ಲಿ ಸಾಂಸ್ಕೃತಿಕ ವಾಗಿಯೇ ಬಂದಿದೆ. ದೇಶದ ಜನರ ಆಯುಷ್ಯ ಹೆಚ್ಚಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಇದು ದೇಶದ ಬಡ ಜನರಿಗೆ ಹೆಚ್ಚು ಅನುಕೂಲವಾಗಲಿದೆ ಎಂದ ಶಾಸಕರು, ಮಂಗಳೂರು ಕ್ಯಾನ್ಸರ್ ಆಸ್ಪತ್ರೆ ಈ ಜನಸೇವೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ಕ್ಯಾನ್ಸರ್ ಬಗೆಗಿನ ಅರಿವಿನ ಕೊರತೆಯಿದೆ. ಕ್ಯಾನ್ಸರ್ ಭೀಕರ ಕಾಯಿಲೆ, ಅದು ಬಂದರೆ ಗುಣ ಮುಖರಾಗುವುದಿಲ್ಲ ಎಂದು ಬಚ್ಚಿಡುವ ಯತ್ನ ಮಾಡಲಾಗುತ್ತದೆ. ಆದರೆ ನಾಲ್ಕನೇ ಹಂತದಲ್ಲೂ ಚಿಕಿತ್ಸೆಯಿಂದಪೂರ್ಣ ಪ್ರಮಾಣದಲ್ಲಿ ಗುಣಮುಖವಾದ ಎಂದಅವರು, ಅದಕ್ಕೆ ಅವರು ಇತ್ತೀಚಿನ ಎರಡು ಪ್ರಕರಣಗಳನ್ನು ಉದಾಹರಿಸಿದರು.

ಇದೇ ವೇಳೆ ಕ್ಯಾನ್ಸರನಿಂದ ಗುಣಮುಖರಾದ ಶಿವಮೊಗ್ಗ ಗ್ಯಾಲ್ಯಾಕ್ಸಿ ಲೈಬ್ರರಿಯ ಮಾಲೀಕ ಶಿವಶಂಕರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆಸ್ಪತ್ರೆಯ ವ್ಯವಸ್ಥಾಪಕ ದುರ್ಗಾಪ್ರಸಾದ್, ಯೂತ್ ಅಸೋಸಿಯೇಷನ್‍ನ ಎಸ್. ಎಸ್. ವಾಗೀಶ್, ಎಂ.ಎನ್. ಸುಂದರರಾಜ್, ಭಾನು, ಆಕಾಶ್ ಸೇರಿದಂತೆ ಮತ್ತಿತರರಿದ್ದರು. ದಿವ್ಯಾಶ್ರೀ ಸ್ವಾಗತಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















Discussion about this post