ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗದ PES ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ (PESITM), ಶಿಕ್ಷಣ ಸಂಸ್ಥೆಯು, ಅಮೇರಿಕಾದ ಪ್ರತಿಷ್ಠಿತ ಸಾಫ್ಟವೆರ್ ಕಂಪೆನಿಯಾದ MongoDB Inc ನಿಂದ ದೊರಕುವ ಅಕಾಡೆಮಿಯ ಪಾರ್ಟನರ್ಶಿಪ್ ಪ್ರಮಾಣಪತ್ರವನ್ನು ಪಡೆಕೊಂಡಿದೆ.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ MongoDB ಯ ಸ್ಥಳೀಯ ಅಕಾಡೆಮಿ ಶೃಂಗಸಭೆ 2024 ರ ಸಂದರ್ಭದಲ್ಲಿ ಈ ಪ್ರಮಾಣಪತ್ರವನ್ನು, PES ನ ಕೆರಿಯರ್ ಡೆವೆಲಪಮೆಂಟ್ ಸೆಂಟರ್ ನ ಮುಖ್ಯಸ್ಥರಾದ ಡಾ. ಪ್ರಸನ್ನ ಕುಮಾರ್ ಟಿ ಎಂ ಅವರು ಸ್ವೀಕರಿಸಿದರು.
Also read: ನಾಗಮಂಗಲ | ಗಣೇಶ ಮೆರವಣಿಗೆ ಮೇಲೆ ಕಲ್ಲು ತೂರಿ, ತಲ್ವಾರ್ ತೋರಿಸಿದ ಮುಸ್ಲಿಂ ಯುವಕರು | ಪ್ರಿಪ್ಲಾನ್ ದಾಳಿಯೇ?
ಈ ಪಾಲುದಾರಿಕೆಯು ಶೈಕ್ಷಣಿಕ ಸಂಸ್ಥೆಗಳು ಮತ್ತು ಉದ್ಯಮದ ನಡುವೆ ಸಹಯೋಗವನ್ನು ಬೆಳೆಸುವ ಗುರಿಯನ್ನು ಹೊಂದಿದೆ. PESITM ತನ್ನ ವಿದ್ಯಾರ್ಥಿಗಳನ್ನು ಅತ್ಯಾಧುನಿಕ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ಸಜ್ಜುಗೊಳಿಸುವ ಬದ್ಧತೆಯನ್ನು ಇದು ಸೂಚಿಸುತ್ತದೆ, ವೇಗವಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಇನ್ನಷ್ಟು ಉತ್ಕೃಷ್ಟಗೊಳಿಸಲು ಬೇಕಾಗುವ ಎಲ್ಲ ತರಹದ ಪ್ರಯತ್ನಗಳನ್ನು PES ಸಂಸ್ಥೆ ಮಾಡುತ್ತಲೇ ಬಂದಿದೆ. PESನ ಈ ಮತ್ತೊಂದು ಸಾಧನೆಗೆ PES ಟ್ರಸ್ಟ್ ನ ಆಡಳಿತ ಮಂಡಳಿಯವರು ಶುಭ ಹಾರೈಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post