ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶ್ರೀವಿಜಯ ಕಲಾನಿಕೇತನದ ವತಿಯಿಂದ ಜನವರಿ 1, 2 ರಂದು ಸಂಜೆ 6 ಗಂಟೆಗೆ ರಾಜೇಂದ್ರನಗರದ ಪವಿತ್ರಾಂಗಣದಲ್ಲಿ 17 ನೇ ವರ್ಷದ ವರ್ಷ ವೈಭವ -2022 ಶಾಸ್ತ್ರೀಯ ನೃತ್ಯ ಮಹೋತ್ಸವ ನಡೆಯಲಿದೆ.
ಜ. 1ರ ಬುಧವಾರದಂದು ‘ಶ್ರೀವಿಜಯ’ ದ ವಿದ್ಯಾರ್ಥಿಗಳಿಂದ ಮಾರ್ಗಂಎಂಬ ಸಾಂಪ್ರದಾಯಿಕ ಶೈಲಿಯನ್ನಾಧರಿಸಿದ ಭರತನಾಟ್ಯ ನೃತ್ಯವನ್ನು ಪ್ರದರ್ಶಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಂದೇಶ್ ಜವಳಿ, ನಿರ್ದೇಶಕರು, ರಂಗಾಯಣ, ಶಿವಮೊಗ್ಗ. ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಹಕಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಡಾ. ಕೆ.ಆರ್. ಶ್ರೀಧರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಜ.2ರ ಗುರುವಾರದಂದು ಕೇಂದ್ರ ಸಂಗೀತ ನಾಟಕ ಅಕಾಡೆಮಿ, ನವದೆಹಲಿ ಅವರ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಡಾ. ಕೆ.ಎಸ್. ಪವಿತ್ರಾ ಅವರು ‘ಮಧುರ ಮೀರಾ’ ಎಂಬ ಏಕ ವ್ಯಕ್ತಿ ಭರತನಾಟ್ಯ ಕಾರ್ಯಕ್ರಮವನ್ನು ಪ್ರದರ್ಶಿಸಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ. ಬಸವ ಮರುಳಸಿದ್ದ ಸ್ವಾಮೀಜಿಗಳು, ಶ್ರೀ ಬಸವತತ್ವ ಪೀಠ, ಚಿಕ್ಕಮಗಳೂರು, ಬಸವಕೇಂದ್ರ ಶಿವಮೊಗ್ಗ, ಭಾಗವಹಿಸಲಿದ್ದಾರೆ. ಕರ್ನಾಟಕ ಸಂಘದ ಪೂರ್ವಾಧ್ಯಕ್ಷರೂ ಹಾಗೂ ಸಾಹಿತಿಗಳಾದ ವಿಜಯಾ ಶ್ರೀಧರ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.
ಈ ಎರಡೂ ಕಾರ್ಯಕ್ರಮಗಳು ನೇರ ಹಿಮ್ಮೇಳ ಸಂಗೀತವನ್ನು ಒಳಗೊಂಡಿರುತ್ತದೆ. ನೃತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ. ಕೆ.ಎಸ್.ಪವಿತ್ರ ಕೋರಿದ್ದಾರೆ. ಕೋವಿಡ್ ನಿಯಮಾನುಸಾರ ಕಾರ್ಯಕ್ರಮ ನಡೆಯಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post