ಕುಂಸಿ: ಶಿವಮೊಗ್ಗ-ಸಾಗರ ನಡುವಿನ ಕುಂಸಿ ರೈಲು ನಿಲ್ದಾಣದಲ್ಲಿ ವಿವಿಧ ಕಾಮಗಾರಿಗಳಿಗೆ ಸಂಸದ ಬಿ.ವೈ. ರಾಘವೇಂದ್ರ ಇಂದು ಅಡಿಗಲ್ಲು ಹಾಕಿದರು.
ಇಂದು ಮುಂಜಾನೆ ಕುಂಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಲ್ದಾಣದಲ್ಲಿ ನೂತನ ಪಾದಚಾರಿ ಸೇತುವೆ ಕೆಲಸ ಮತ್ತು ಪ್ಲಾಟ್ ಫಾರ್ಮ್ ಶೆಲ್ಟರ್ ಕಾಮಗಾರಿಗಳ ಅಡಿಗಲ್ಲು ಪೂಜೆ ನೆರವೇರಿಸಿದರು.
ಈ ವೇಳೆ ಗ್ರಾಮಾಂತರ ಶಾಸಕ ಅಶೋಕ್ ನಾಯಕ್ ಮತ್ತು ಪ್ರಮುಖರಾದ ಆಯನೂರು ಮಂಜುನಾಥ್, ರೈಲ್ವೆ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಇನ್ನಿತರರು ಉಪಸ್ಥಿತರಿದ್ದರು.
















