ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಿಂದ ತಮಿಳುನಾಡಿಗೆ ಓಂ ಶಕ್ತಿ ಯಾತ್ರೆಗೆ ತೆರಳಿ ಹಿಂತಿರುಗಿದವರಲ್ಲಿ 6 ಜನರಿಗೆ ಕೊರೋನಾ ದೃಢಪಟ್ಟಿದ್ದು, ಸೋಂಕಿತರನ್ನು ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇನ್ನುಳಿದವರನ್ನು ಹೋಂ ಐಸೋಲೆಶನ್‌ನಲ್ಲಿ ಇರಲು ಸೂಚಿಸಲಾಗಿದೆ.

ಯಾತ್ರೆ ಮುಗಿಸಿ ಹಿಂದಿರುಗಿದವರಿಗೆ ಡಿ.4ರಂದು ಬೈಪಾಸ್ ಹಾಗೂ ಸಹ್ಯಾದ್ರಿ ಕಾಲೇಜು ಬಳಿಯಲ್ಲಿ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗಿತ್ತು. ಸುಮಾರು 82 ಬಸ್‌ಗಳಲ್ಲಿ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ತಮಿಳುನಾಡಿನ ಓಂ ಶಕ್ತಿ ಯಾತ್ರೆಗೆ ತೆರಳಿದ್ದರು.

ಮೈಸೂರು, ನಂಜನಗೂಡು, ಶ್ರೀರಂಗಂ, ಕುಂಭಕೋಣಂ, ಮೇಲ್ಮರತ್ತೂರು, ತಿರುವಣ್ಣಾಮಲೈ ಸೇರಿದಂತೆ ಹಲವು ತೀರ್ಥಕ್ಷೇತ್ರಗಳಿಗೆ ಇವರು ತೆರಳಿದ್ದರು. ಇದೇ ರೀತಿಯ ಮಂಡ್ಯದಿಂದ ಯಾತ್ರೆಗೆ ತೆರಳಿದ್ದವರಲ್ಲಿ ೩೦ಕ್ಕೂ ಅಧಿಕ ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿತ್ತು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















