ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಶಪಡಿಸಿಕೊಳ್ಳಲಾಗಿದ್ದ ಮಾದಕ ವಸ್ತು ಗಾಂಜಾವನ್ನು ಇಂದು ನಾಶ ಪಡಿಸಲಾಯಿತು.
ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಶಕ್ಕೆ ಪಡೆಯಲಾಗಿದ್ದ ರೂ. 29,30,310 ಅಂದಾಜು ಮೌಲ್ಯದ ಒಟ್ಟು 637 ಕೆಜಿ ಮಾದಕ ವಸ್ತು ಗಾಂಜಾವನ್ನು ಇಂದು ಅಂತಾರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆಯ ಅಂಗವಾಗಿ ಇಂದು ನಾಶ ಪಡಿಸಲಾಯಿತು.
ಮಾದಕ ವಸ್ತುಗಳ ವಿಲೇವಾರಿ ಸಮಿತಿಯ ಸದಸ್ಯರು, ಪರಿಸರ ಅಧಿಕಾರಿಗಳು ಮತ್ತು ಪಂಚರ ಉಪಸ್ಥಿತಿಯಲ್ಲಿ ಮಾಚೇನಹಳ್ಳಿಯ ಸುಶ್ರುತ ಬಯೋಮೆಡಿಕಲ್ ವೇಸ್ಟ್ ಮ್ಯಾನೇಜ್’ಮೆಂಟ್ ಸೊಸೈಟಿ ಹಾಗೂ ಕಾಮನ್ ಬಯೋ ಮೆಡಿಕಲ್ ವೇಸ್ಟ್ ಟ್ರೀಟ್ಮೆಂಟ್ ಅಂಡ್ ಡಿಸ್ಪೋಸಲ್ ಫೆಸಿಲಿಟಿಯಲ್ಲಿ ಈ ಕಾರ್ಯ ನಡೆಸಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post