ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಶಿವಮೊಗ್ಗ ಮಹಾನಗರ ಪಾಲಿಕೆಯ Shivamogga Corporation ಮೇಯರ್ ಮತ್ತು ಉಪಮೇಯರ್ ಚುನಾವಣೆ ದಿನ ನಿಗಧಿಯಾಗಿದ್ದು, ಈ ಬಗ್ಗೆ ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಆದೇಶ ಹೊರಡಿಸಿದೆ.
10 ಮಹಾನಗರ ಪಾಲಿಕೆಗಳ ಮಹಾಪೌರ ಹಾಗೂ ಉಪಮಹಾಪೌರ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದ್ದ ಆಯುಕ್ತರ ಕಚೇರಿ ಈಗ ಸೆ.13 ರಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಚುನಾವಣೆಗೆ ದಿನಾಂಕ ನಿಗಧಿಪಡಿಸಿ ಆದೇಶ ಹೊರಡಿಸಿದೆ.
ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ದಿನಾಂಕ: 13-09-2022 (ಮಂಗಳವಾರ) ರಂದು ಮಧ್ಯಾಹ್ನ 3ಗಂಟೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ, ಪರಿಷತ್ ಸಭಾಂಗಣದಲ್ಲಿ ಆಯ್ಕೆ ನಡೆಯಲಿದ್ದು, ಚುನಾವಣೆಯ ಕಾರ್ಯಕಲಾಪಗಳನ್ನು ನಡೆಸುವುದಕ್ಕಾಗಿ ಸಭೆ ಕರೆಯಲಾಗಿದೆ. ಚುನಾವಣೆ ಸಭೆಗೆ ಗೊತ್ತುಪಡಿಸಿದ ಸಮಯದ 2 ಗಂಟೆ ಮೊದಲು (ಅಂದರೆ ದಿನಾಂಕ: 1-00 13-09-2022 ರಂದು ಮಧ್ಯಾಹ್ನ 12-00 ಗಂಟೆಯಿಂದ ಗಂಟೆಯ ಒಳಗಾಗಿ) ನಾಮನಿರ್ದೇಶನ ಪತ್ರ ಸಲ್ಲಿಸಬಹುದಾಗಿದೆ.
Also read: ಅಂತ್ಯಕ್ರಿಯೆ ವೇಳೆ ಎಚ್ಚರಗೊಂಡ ಬಾಲಕಿ! ಬಳಿಕ ನಡೆದಿದ್ದೇನು ಗೊತ್ತಾ? ಇಲ್ಲಿದೆ ಮಾಹಿತಿ
ಶಿವಮೊಗ್ಗ ಮಹಾನಗರ ಪಾಲಿಕೆಯ ಮೇಯರ್ ಸ್ಥಾನಕ್ಕೆ ಹಿಂದುಳಿದ ಆ ವರ್ಗ ಮತ್ತು ಉಪಮೇಯರ್ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಈಗಾಗಲೇ ಮೀಸಲಾತಿ ಪ್ರಕಟಿಸಲಾಗಿದೆ. ಕಾಂಗ್ರೆಸ್ ಸಹ ಈ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಭಾಗವಹಿಸುವುದಾಗಿ ತಿಳಿದುಬಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post