No Result
View All Result
Interior / upgradation of Next-Generation Amrit Bharat Coaches. Sample coach ready
English Articles

Interior / upgradation of Next-Generation Amrit Bharat Coaches. Sample coach ready

by ಕಲ್ಪ ನ್ಯೂಸ್
April 6, 2026
0

Kalpa Media House  |  New Delhi  | The Hon’ble Minister of Railways inspected sample coaches developed with proposed interior design...

Read moreDetails
ಶ್ರೀ ಕೊಟ್ಟೂರೇಶ್ವರ ಜಾತ್ರೆ ಪ್ರಯುಕ್ತ | ಹೊಸಪೇಟೆ – ತೊಳಹುಣಸೆ ನಡುವೆ ವಿಶೇಷ ರೈಲು ಸಂಚಾರ

Special Train Between Bengaluru Cantt and Chennai

April 3, 2026
SWR Mysuru Division Excels with Record Passenger Revenue and Strong Commercial Growth

SWR Mysuru Division Excels with Record Passenger Revenue and Strong Commercial Growth

April 2, 2026
SWR to run special trains for Good Friday, Easter rush

Summer Special Train Between Tiruchchirappalli & SMVT Bengaluru

April 2, 2026
PESITM hosts Mock CET 2026 to Strengthen KCET Preparation

PESITM hosts Mock CET 2026 to Strengthen KCET Preparation

March 31, 2026
  • Advertise With Us
  • Grievances
  • About Us
  • Contact Us
Tuesday, April 7, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ತಮ್ಮನ್ನು ತಾವು ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳುವ ವ್ಯಕ್ತಿತ್ವ ಈಶ್ವರಪ್ಪನವರದ್ದು: ರಾಮಣ್ಣ ಬಣ್ಣನೆ

ಕೆ.ಎಸ್. ಈಶ್ವರಪ್ಪನವರ 77ನೇ ಹುಟ್ಟುಹಬ್ಬ ನಿಮಿತ್ತ ವಿಶೇಷ ಕಾರ್ಯಕ್ರಮ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
June 10, 2025
in ಶಿವಮೊಗ್ಗ
0
ವಾರಣಾಸಿ ತೀರ್ಪು ಸ್ವಾಗತಾರ್ಹ, ದೇಗುಲ ಮುಸ್ಲಿಮರ ವಶದಿಂದ ಶೀಘ್ರ ಮುಕ್ತವಾಗಲಿ: ಈಶ್ವರಪ್ಪ ಆಶಯ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ತಮ್ಮನ್ನು ತಾವು ರಾಷ್ಟ್ರಕ್ಕೆ ಸಮರ್ಪಿಸಿಕೊಳ್ಳುವ ವ್ಯಕ್ತಿತ್ವ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪನವರದ್ದು #K S Eshwarappa ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ ಬಣ್ಣಿಸಿದರು.

ಅವರು ಇಂದು ಶುಭಮಂಗಳ ಸಮುದಾಯ ಭವನದಲ್ಲಿ ಕೆ.ಎಸ್. ಈಶ್ವರಪ್ಪನವರ 77ನೇ ಹುಟ್ಟುಹಬ್ಬದ ನಿಮಿತ್ತ ಶ್ರೀಗಂಧ ಸಂಸ್ಥೆ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡುತ್ತಿದ್ದರು. ನಾವು ಗಳಿಸಿದ, ಗುರುತಿಸಿದ ಸದ್ಗುಣಗಳನ್ನು ಉಳಿಸಿಕೊಳ್ಳುತ್ತೇನೆ ಎಂಬ ಸಂಕಲ್ಪ ಮಾಡಬೇಕು. ಸಂಕಲ್ಪದ ಸಂಸ್ಕಾರದಿಂದ ಸಾರ್ಥಕ ಚೈತನ್ಯ ಬರುತ್ತದೆ. ವ್ಯಕ್ತಿ ಮೇಲೆ ಬರಬೇಕಾದರೆ ದುಡ್ಡಿನ ಆಧಾರದ ಮೇಲೆ ಬರುತ್ತಾನೆ. ಇಂದಿನ ರಾಷ್ಟ್ರೀಯ ನಾಯಕರೆನಿಸಿಕೊಂಡವರು ದುಡ್ಡು ಮತ್ತು ಜಾತಿ ಆಧಾರದ ಮೇಲೆ ನಡೆಯುತ್ತಿರುವುದು ರಾಜಕೀಯ ವಿಡಂಬನೆಯಾಗಿದೆ. ಈಶ್ವರಪ್ಪನವರು ಎಂದಿಗೂ ಜಾತಿಯನ್ನು ಏಣಿಯನ್ನಾಗಿ ಬಳಸಲಿಲ್ಲ. ಬದಲಾಗಿ ಹಿಂದುತ್ವ, ರಾಷ್ಟ್ರ, ಸಮಾಜ ಸೇವೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದಾರೆ ಎಂದರು.
ಹಿಂದುತ್ವ ಉಳಿದರೆ ಕುರುಬ, ದಲಿತ, ಬ್ರಾಹ್ಮಣ, ಮಠ-ಮಂದಿರಗಳು ಕುಟುಂಬಗಳು ಉಳಿಯುತ್ತವೆ. ಭಾರತ ಹಿಂದುತ್ವದ ತಳಹದಿಯ ಮೇಲೆ ಅಭಿವೃದ್ಧಿಯನ್ನು ಸಾಧಿಸುತ್ತಿದ್ದು, ಜಗತ್ತಿನ ಇತರ ರಾಷ್ಟ್ರಗಳನ್ನು ತನ್ನತ್ತ ಆಕರ್ಷಿಸುತ್ತಿದೆ ಎಂದರು.

ಕೆ.ಎಸ್. ಈಶ್ವರಪ್ಪನವರು ಎಂದೂ ಸಂಘದ ನಿಷ್ಠೆಯನ್ನು ಬಿಟ್ಟಿಲ್ಲ. ರಾಜಕೀಯದಲ್ಲಿ ಎಷ್ಟೇ ಏರುಪೇರಾದರೂ ಎಲ್ಲೂ ರಾಜೀ ಮಾಡಿಕೊಳ್ಳಲಿಲ್ಲ, ರಾಷ್ಟ್ರಜೀವನವನ್ನೇ ತಮ್ಮ ಜೀವನದುದ್ದಕ್ಕೂ ಸಮರ್ಥವಾಗಿ ಮುಂದುವರಿಸಿಕೊಂಡು ಬಂದಿದ್ದಾರೆ. ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ದೇಶ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಈಶ್ವರಪ್ಪನವರ ಗುಣಗಾನ ಮಾಡಿದರು. ಪ್ರತಿ ಮನೆಗಳು, ಭಾರತ ಭಕ್ತಿಯ ದೇವಾಲಯವಾಗಬೇಕು. ಭಾರತ ಭಕ್ತಿಯ ವಿದ್ಯಾಲಯ ಆಗಬೇಕು. ದರಿದ್ರ ವಿದೇಶಿ ಅಂಧಾನುಕರಣೆಗೆ ಅಂತಿಮ ಸಲಾಮ್ ಹೊಡೆಯಬೇಕು. ಬದಲಾಗುತ್ತಿರುವ ಭಾರತದ ಸಾಕ್ಷಿಗಳಾಗುವ ಅವಕಾಶ ನಮಗೆ ಸಿಕ್ಕಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕಳೆದ 10 ವರ್ಷಗಳಲ್ಲಿ ಭಾರತದ ಚಿತ್ರಣ ಸಂಪೂರ್ಣ ಬದಲಾಗಿದೆ. ಜಗತ್ತಿಗೆ ಭಾರತ ಆಪತ್ ಬಾಂಧವ ಆಗಿದೆ. ಸಾಹಸ, ಪರಾಕ್ರಮ, ವಿನಯಗಳಲ್ಲಿ ಜಗತ್ತಿಗೆ ಮಾದರಿಯಾಗಿದೆ. ಎಲ್ಲಾ ದೇಶಗಳನ್ನು ಹಿಂದಕ್ಕೆ ಹಾಕುತ್ತಿರುವ ದೇಶ ಭಾರತ ಆಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಗಳು, ಶ್ರೀರಾಮ ತೋರಿದ ಆದರ್ಶಗಳನ್ನು ಕೆ.ಎಸ್. ಈಶ್ವರಪ್ಪ ಅವರು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡು ಬರುತ್ತಿದ್ದಾರೆ. ಇದು ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಚಿತ್ರದುರ್ಗದ ಶ್ರೀ ಮಾದರಚನ್ನಯ್ಯ ಸ್ವಾಮಿಗಳು ಮಾತನಾಡಿ, ಈ ಕಾರ್ಯಕ್ರಮ ಅತ್ಯಂತ ಸರಳ, ಅರ್ಥಪೂರ್ಣ, ಸಮಾಜಮುಖಿಯಾಗಿ ನಡೆಯುವ ಕಾರ್ಯಕ್ರಮವಾಗಿದೆ. ವಿದ್ಯಾರ್ಥಿದೆಸೆಯಿಂದಲೇ ಈಶ್ವರಪ್ಪನವರು ರಾಷ್ಟ್ರಭಕ್ತಿ ಮೈಗೂಡಿಸಿಕೊಂಡವರು. ಜೀವನದಲ್ಲಿ ಎಷ್ಟೇ ರಾಜಕೀಯ ವಿಪ್ಲವವಾದರೂ ರಾಷ್ಟ್ರೀಯತೆಯಿಂದ ವಿಮುಖರಾಗಲಿಲ್ಲ. ಇವತ್ತಿಗೂ ರಾಷ್ಟ್ರಸೇವೆಗೆ ಕಟಿಬದ್ಧರಾಗಿದ್ದಾರೆ ಪತ್ನಿ ಜಯಲಕ್ಷ್ಮೀ, ಪುತ್ರ ಕಾಂತೇಶ್ ಅವರೊಡನೆ ಇರುವ ಅವಿನಾಭಾವ ಸಂಬಂಧ, ವಾತ್ಸಲ್ಯ, ಪ್ರೀತಿ ಇತರರಿಗೂ ಮಾದರಿ ಎಂದರು.

ಕಾಗೆನೆಲೆ ಮಠದ ಶ್ರೀ ಈಶ್ವರಾನಂದಪುರಿ ಶ್ರೀಗಳು ಮಾತನಾಡಿ, ಭಾರತ ಮಾತೆಯೇ ನನ್ನ ತಾಯಿ ಎಂದು ಭಾವಿಸಿಕೊಂಡವರು ಈಶ್ವರಪ್ಪನವರು. ಎಲ್ಲರೂ ಅಧಿಕಾರದ ಆಸೆಗಾಗಿ ಎಲ್ಲವನ್ನೂ ಮಾಡಿದ್ದಾರೆ. ಆದರೆ ಈಶ್ವರಪ್ಪನವರು ಪಕ್ಷಬಿಟ್ಟಿಲ್ಲ. ಅವರಿಗೆ ಪಕ್ಷಬಲ ಇರಲಿಲ್ಲ. ಆದರೆ ಗುರುಬಲ, ದೈವಬಲ, ಸದಾಕಾಲ ಅವರ ಮೇಲಿದೆ ಎಂದರು.

ಕೂಡಲಿ ಮಠದ ಶ್ರೀಗಳು ಮಾತನಾಡಿ, ಕುಟುಂಬ ಒಡೆದು ಹೋಗದೇ ಇರಲು ಪಿತೃಯಜ್ಞ ಬಹಳ ಮುಖ್ಯ. ಈಶ್ವರಪ್ಪನವರಿಗೆ ದೈವಬಲದ ಜೊತೆಗೆ ಕುಟುಂಬದ ಮತ್ತು ಹಿತೈಷಿಗಳ ಬಲವಿದೆ ಎಂದರು.
ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ಎಲ್ಲರ ಒಳಿತಿಗಾಗಿ ತನ್ನ ಜೀವನ ರೂಪಿಸಿಕೊಂಡ ವ್ಯಕ್ತಿಗೆ ಅಭಿಮಾನದ ಪ್ರತೀಕವಾಗಿ ಶುಭ ಹಾರೈಸುವುದು ನಮ್ಮೆಲ್ಲರ ಕರ್ತವ್ಯ. ಮನುಷ್ಯನಿಗೆ ದೇವರು ವಿವೇಕ ಕೊಟ್ಟಿದ್ದಾನೆ. ಅದನ್ನು ಬಳಕೆಮಾಡಿ, ಜೀವನದಲ್ಲಿ ಆದರ್ಶ ಗುರಿಯನ್ನು ಇಟ್ಟುಕೊಂಡು ಜೀವನ ಸಾರ್ಥಕತೆ ಸಾಧಿಸಬೇಕು ಎಂದರು.

ಧರ್ಮಸಭೆಗೂ ಮೊದಲು ಮಹಾವೀರ ಗೋಶಾಲೆಯ ನೂತನ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿದರು. ಬಳಿಕ ಶುಭ ಮಂಗಳ ಸಮುದಾಯ ಭವನದ ಆವರಣದಲ್ಲಿ ಲಿಲಿತ ಸಹಸ್ರನಾಮ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ರುದ್ರಹೋಮ, ಶತ ಚಂಡಿಹವನ, 1008 ಮಹಿಳೆಯರಿಗೆ ಬಾಗಿನ ಸಮರ್ಪಣೆ ನಡೆಯಿತು.

ಸಭಾ ಕಾರ್ಯಕ್ರಮದ ಕೊನೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದವತಿಯಿಂದ ನಡೆಯುವ ಸಾಮಾಜಿಕ ಕಾರ್ಯಗಳಿಗೆ ಈಶ್ವರಪ್ಪನವರ ಕುಟುಂಬದಿಂದ ಮಂಗಲ ನಿಧಿಯನ್ನು ಹಿರಿಯ ಪ್ರಚಾರಕರಾದ ಸು. ರಾಮಣ್ಣನವರಿಗೆ ಸಮರ್ಪಿಸಲಾಯಿತು.

ವೇದಿಕೆಯಲ್ಲಿ ಜಯಲಕ್ಷ್ಮೀ ಈಶ್ವರಪ್ಪ, ಪುತ್ರ ಕೆ.ಈ. ಕಾಂತೇಶ್, ನಟರಾಜ್ ಭಾಗವತ್, ಪದ್ಮನಾಭ ಭಟ್, ಮಹಾಲಿಂಗ ಶಾಸ್ತ್ರಿ, ಕೆ.ಜಿ. ಕೃಷ್ಣಾನಂದ, ಈ. ವಿಶ್ವಾಸ್ ಸೇರಿದಂತೆ ರಾಷ್ಟ್ರಭಕ್ತ ಬಳಗದ ಪ್ರಮುಖರು ಹಾಗೂ ಅಪಾರ ಅಭಿಮಾನಿಗಳು, ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

http://kalpa.news/wp-content/uploads/2025/02/Kumadvati-College-Shikaripura-2025-Video.mp4
http://kalpa.news/wp-content/uploads/2024/04/VID-20240426-WA0008.mp4

                                               

Tags: K S EshwarappaKannada_NewsKannada_News_LiveKannada_News_Online ShivamoggaKannada_WebsiteKannadaNewsWebsiteLatestNewsKannadaLocalNewsMalnadNewsNews_in_KannadaNews_KannadaShimogaShivamoggaNewsಕೆ.ಎಸ್. ಈಶ್ವರಪ್ಪಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share196Tweet123Send
Previous Post

ವಾಸವಿ ಮಹಿಳಾ ಸಂಘ ಸುವರ್ಣ ಮಹೋತ್ಸವ | ಜೂ.11-12ರಂದು ‘ಸಿಂಧೂರ ಭಜನಾರ್ಚನೆ’

Next Post

ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿವಿ ಸಮ್ಮೇಳನ ಸಂಯೋಜಕರಾಗಿ ಡಾ. ಮೀರಾಮಣಿ ಆಯ್ಕೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿವಿ ಸಮ್ಮೇಳನ ಸಂಯೋಜಕರಾಗಿ ಡಾ. ಮೀರಾಮಣಿ ಆಯ್ಕೆ

ಆಸ್ಟ್ರೇಲಿಯಾದ ಚಾರ್ಲ್ಸ್ ಡಾರ್ವಿನ್ ವಿವಿ ಸಮ್ಮೇಳನ ಸಂಯೋಜಕರಾಗಿ ಡಾ. ಮೀರಾಮಣಿ ಆಯ್ಕೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

ಸೊರಬದಲ್ಲೊಂದು ಅತಿ ಘೋರ | 5 ತಿಂಗಳ ಗರ್ಭಿಣಿ ಸೊಸೆಯನ್ನು ಜೀವಂತ ಸುಟ್ಟ ರಾಕ್ಷಸರು

April 3, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಭೀಕರ ಅಪಘಾತ | ಕಾರ್ಕಳ ಮೂಲದ ವಿದ್ಯಾರ್ಥಿನಿ ದುರ್ಮರಣ

March 12, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ಮೈಸೂರು ತಾಳಗುಪ್ಪ ರೈಲಿಗೆ ಇನ್ಮುಂದೆ LHB ಕೋಚ್ ಅಳವಡಿಕೆ | ಹೇಗಿರತ್ತೆ ಬೋಗಿ?

ಮೈಸೂರು ತಾಳಗುಪ್ಪ ರೈಲಿಗೆ ಇನ್ಮುಂದೆ LHB ಕೋಚ್ ಅಳವಡಿಕೆ | ಹೇಗಿರತ್ತೆ ಬೋಗಿ?

April 6, 2026
ಏ.7 ರಿಂದ 10 | ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ

ಏ.7 ರಿಂದ 10 | ಸೋಸಲೆ ಶ್ರೀ ವ್ಯಾಸರಾಜ ಮಠದಲ್ಲಿ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮ

April 6, 2026
ಗೋವಾ ವಿರುದ್ಧ ಬೆಂಗಳೂರು ಎಫ್‌ಸಿ ತಂಡಕ್ಕೆ 2-0 ಅಂತರದ ಜಯ!

ಗೋವಾ ವಿರುದ್ಧ ಬೆಂಗಳೂರು ಎಫ್‌ಸಿ ತಂಡಕ್ಕೆ 2-0 ಅಂತರದ ಜಯ!

April 6, 2026
Interior / upgradation of Next-Generation Amrit Bharat Coaches. Sample coach ready

Interior / upgradation of Next-Generation Amrit Bharat Coaches. Sample coach ready

April 6, 2026
SWR to run special trains for Good Friday, Easter rush

ಮೈಸೂರು – ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್‌ ಲಚ್ಯಾಣ ರೈಲು ನಿಲ್ದಾಣದಲ್ಲಿ ತಾತ್ಕಾಲಿಕ ನಿಲುಗಡೆ

April 6, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL