ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ವಾಸವಿ ಮಹಿಳಾ ಸಂಘದಿಂದ ಸುವರ್ಣ ಮಹೋತ್ಸವದ ಅಂಗವಾಗಿ ಜೂನ್ 11 ಮತ್ತು 12 ರಂದು “ಸಿಂಧೂರ ಭಜನಾರ್ಚನೆ” ಎಂಬ “ಅಖಂಡ ಭಜನೆ” (ಅಹೋರಾತ್ರಿ ಭಜನೆ) ಕಾರ್ಯಕ್ರಮವನ್ನು ನಗರದ ಬಜಾರಿನಲ್ಲಿರುವ ಕನ್ಯಕಾಪರಮೇಶ್ವರಿ ದೇವಸ್ಥಾದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷೆ ಪ್ರತಿಭಾ ಅರುಣ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಮಹಿಳಾ ಸಂಘವು 1976ರಲ್ಲಿ ಆರಂಭವಾಯಿತು. ಕಳೆದ 50 ವರ್ಷಗಳಿಂದ ಸಮಾಜಮುಖಿ ಕೆಲಸ ಜೊತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಾವು ಮಾಡುತ್ತಾ ಬಂದಿದ್ದೇವೆ. ಹಳೆಯ ಕಾರ್ಯಕ್ರಮಗಳನ್ನೇ ಮುಂದುವರೆಸುತ್ತಾ, ನಾವು ಅಧಿಕಾರಕ್ಕೆ ಬಂದ ಮೊದಲ ಕಾರ್ಯಕ್ರಮವಾಗಿ ಸಿಂಧೂರ ಭಜನಾರ್ಚನೆ ಎಂಬ ಕಾರ್ಯಕ್ರಮವನ್ನು ನಮ್ಮ ದೇಶದ ಸೈನಿಕರಿಗಾಗಿ ಅರ್ಪಣೆ ಮಾಡುತ್ತಿದ್ದೇವೆ ಎಂದರು.
ಈ ಕಾರ್ಯಕ್ರಮವು ಜೂನ್ 11ರ ಬುಧವಾರ ಸಂಜೆ 6ಕ್ಕೆ ಪ್ರಾರಂಭವಾಗಿ ಜೂನ್ 12ರ ಗುರುವಾರ ಸಂಜೆ 8ರವರೆಗೆ ನಿರಂತರವಾಗಿ 24 ಗಂಟೆಗಳ ಕಾಲವೂ ಭಜನೆ ಕಾರ್ಯಕ್ರಮ ನಡೆಯಲಿದೆ. ಈ ಅಹೋರಾತ್ರಿ ಭಜನೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರದ 24 ತಂಡಗಳು ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ದೇಶದ ಸೈನಿಕರಿಗೆ ಬಲತುಂಬುವ ಸಲುವಾಗಿ ಮತ್ತು ಅಪರೇಶನ್ ಸಿಂಧೂರದ ವಿಜಯದ ಸಂಭ್ರಮಕ್ಕಾಗಿ ದೇವರ ಗೀತೆಗಳು ಹಾಗು ದೇಶಭಕ್ತಿ ಗೀತೆಗಳನ್ನು ಹಾಡಲಿದ್ದಾರೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕರಾದ ಎಸ್.ಎನ್. ಚನ್ನಬಸಪ್ಪ ಮತ್ತು ಡಿ.ಎಸ್. ಅರುಣ್ ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಭೂಪಾಳಂ, ಶಶಿಧರ್, ಅಶ್ವತ್ಥ್ ನಾರಾಯಣ ಶೆಟ್ಟಿ ಸೇರಿದಂತೆ ಜನಪ್ರತಿನಿಧಿಗಳು, ನಮ್ಮ ಸಮಾಜದ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದರು.
ಲಲಿತ ಸಹಸ್ರನಾಮ, ದೇವಿಯ ಉತ್ಸವ ಮೂರ್ತಿಯ ಮೆರವಣಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ. ಎರಡೂ ದಿನವೂ ದೇವಿಗೆ ಬಂಗಾರದ ಸೀರೆಯನ್ನು ಉಡಿಸಲಾಗುವುದು. ಸಮಾಜ ಭಾಂಧವರು ಹಾಗು ಸಾರ್ವಜನಿಕರು ಅತಿ ಹೆಚ್ಚನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕೋರಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಸಂಘದ ಪದಾಧಿಕಾರಿಗಳಾದ ಕವಿತಾ ಸಂತೋಷ್, ರಾಧಿಕಾ ಮಾಲ್ತೇಶ್, ನಮ್ರತಾ ಪ್ರಶಾಂತ್, ಅನಿತಾ ರಘು, ವಿಜಯಾ ದತ್ತಕುಮಾರ್, ಸುಷ್ಮಾ ಅರವಿಂದ್, ಗೀತಾ, ಸುಮಾ ನಟರಾಜ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post