ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನೀರು ಕುಡಿಯಲು ಬಂದ ಜಿಂಕೆಯ ಮರಿಯೊಂದು ನೀರು ಪಾಲಾಗಿದ್ದು, ಶಿವಮೊಗ್ಗದ ಅಗ್ನಿಶಾಮಕದಳ ಸಾವಿನ ಅಪಾಯದಿಂದ ಬಚಾವ್ ಮಾಡಿದ್ದಾರೆ.
ಭದ್ರಾವತಿ ತಾಲೂಕು ಕೈಮರದ ಅಶೋಕ ನಗರದ ಭದ್ರಾ ಚಾನೆಲ್‌ಗೆ ನೀರು ಕುಡಿಯಲು ಬಂದಿದ್ದ ಜಿಂಕೆಯ ಮರಿಯೊಂದು ನೀರಿನಲ್ಲಿ ಸಿಲುಕಿಕೊಂಡಿತ್ತು. ಸ್ಥಳೀಯರು ನೋಡಿ ಶಿವಮೊಗ್ಗದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.
ಭದ್ರಾನಾಲೆಗಳಲ್ಲಿ ನದಿಯ ಒಳಹರಿವು ಹೆಚ್ಚಾಗಿದ್ದು, ಜಿಂಕೆಯೊAದು ನೀರಿಗೆ ಸಿಲುಕಿಕೊಂಡಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಈ ಘಟನೆ ಇಂದು ಬೆಳಗ್ಗೆ ನಡೆದಿದೆ.
ಈ ಕಾರ್ಯಾಚರಣೆಯಲ್ಲಿ ಶಿವಮೊಗ್ಗ ಅಗ್ನಿಶಾಮಕ ಠಾಣೆಯ ಮುಕ್ತುಂ ಉಸೇನ್, ಪ್ರಮುಖ ಅಗ್ನಿಶಾಮಕ ಠಾಣೆಯ ಚೇತನ್ ಕುಮಾರ್, ಚಾಲಕ-ಶರತ್ ಕುಮಾರ್ .ಕೆ, ನಿರಂಜನ್, ಸಂತೋಷ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ-ಬಿ.ಆರ್. ಅಶೋಕ್ ಕುಮಾರ್, ಚಾಲಕ ತಂತ್ರಜ್ಞ-ಗಣೇಶ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post