No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಪ್ರಾಯೋಗಿಕ ಜ್ಞಾನ ಸಂಪಾದಿಸುವತ್ತ ಗಮನ ಹರಿಸಿ: ಡಾ. ಬಾಲಸುಬ್ರಹ್ಮಣ್ಯಮೂರ್ತಿ ಸಲಹೆ

ಪೆಸಿಟ್‌ನಲ್ಲಿ ಇಂಜಿನಿಯರಿಂಗ್ ಮತ್ತು ಎಂಬಿಎ ವಿಭಾಗದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭ

kalpa News by kalpa News
April 15, 2023
in ಶಿವಮೊಗ್ಗ
0
ಪ್ರಾಯೋಗಿಕ ಜ್ಞಾನ ಸಂಪಾದಿಸುವತ್ತ ಗಮನ ಹರಿಸಿ: ಡಾ. ಬಾಲಸುಬ್ರಹ್ಮಣ್ಯಮೂರ್ತಿ ಸಲಹೆ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಶಿವಮೊಗ್ಗ  |

ವೃತ್ತಿ ಜೀವನದಲ್ಲಿ ಗಳಿಸುವ ಯಶಸ್ಸಿಗಿಂತ, ಪಾರಿವಾರಿಕವಾಗಿ ಬೌದ್ಧಿಕ ಹಾಗೂ ಮಾನಸಿಕ ಮಟ್ಟದಲ್ಲಿ ಸಹಬಾಳ್ವೆಯೊಂದಿಗೆ ಜೀವಿಸುವುದೇ ನಿಜವಾದ ಯಶಸ್ಸು ಎಂದು ಬೆಂಗಳೂರಿನ ದಯಾನಂದ ಸಾಗರ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಎನ್. ಬಾಲಸುಬ್ರಹ್ಮಣ್ಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ 13ನೇ ಬ್ಯಾಚ್ ನ ಇಂಜಿನಿಯರಿಂಗ್ ಮತ್ತು ಎಂಬಿಎ ವಿಭಾಗದ ವಿದ್ಯಾರ್ಥಿ ವೃಂದದ ಪದವಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಇಂಜಿನಿಯರಿಂಗ್ ಹಾಗೂ ಎಂಬಿಎ ಪದವಿಯನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿ ಮುಂದಿನ ತಮ್ಮ ಭವ್ಯ ಭವಿತವ್ಯದ ಜೀವನವನ್ನು ರೂಪಿಸುವಲ್ಲಿ ತೀಕ್ಷ್ಣವಾದ ಹಾಗೂ ಕೌಶಲ್ಯ ಭರಿತ ಆಲೋಚನಾ ಲಹರಿಯನ್ನು ಅಳವಡಿಸಿಕೊಳ್ಳುವಲ್ಲಿ ವಿದ್ಯಾರ್ಥಿಗಳು ಕಾರ್ಯತತ್ಪರರಾಗಬೇಕೆಂದು ಮನಮುಟ್ಟುವಂತೆ ಹಲವು ಪುಸ್ತಕಗಳ ಹಾಗೂ ಪ್ರಾಯೋಗಿಕ ಉದಾಹರಣೆಗಳ ಸಮೇತ ತಿಳಿಸಿದರು.

Also read: ಕಾಂಗ್ರೆಸ್ 3ನೆಯ ಪಟ್ಟಿ: ಶಿವಮೊಗ್ಗಕ್ಕೆ ಯೋಗೀಶ್, ಗ್ರಾಮಾಂತರಕ್ಕೆ ಶ್ರೀನಿವಾಸ್ ಕರಿಯಣ್ಣ

ಯಶಸ್ಸು ಎನ್ನುವುದು ಅವರವರ ಬುದ್ಧಿಮತ್ತೆಗೆ ಹಲವು ರೀತಿಯ ವಿವರಣೆಗಳನ್ನು ಪಡೆದುಕೊಂಡಿದ್ದು, ಸಾಮಾಜಿಕವಾಗಿ ಹಾಗೂ ದೇಶಕ್ಕೆ, ಪೋಷಕರಿಗೆ ಅನ್ಹೂಯವಾದ ಅನುಭವವನ್ನು ನೀಡುವಲ್ಲಿ  ಶ್ರಮಿಸುವಂತೆ ಪ್ರಯತ್ನಿಸುವುದೇ ಅತ್ಯುತ್ತಮ ವಿವರಣೆಗಳಲ್ಲಿ ಒಂದು. ತಮ್ಮ ಕಾರ್ಯ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಯನ್ನು ಪ್ರಾಯೋಗಿಕ ಮಟ್ಟದಲ್ಲಿ ಪ್ರಚುರಪಡಿಸಲು ಅತ್ಯವಶ್ಯವಿರುವ ಪ್ರಾಯೋಗಿಕ ಜ್ಞಾನಾರ್ಜನೆಯನ್ನು ಪಡೆದುಕೊಳ್ಳುವತ್ತ  ಚಿತ್ತವನ್ನು ಕೇಂದ್ರೀಕರಿಸುವಂತೆ ಸೂಚಿಸಿದರು.
ಆಲ್ಬರ್ಟ್ ಐನ್ಸ್ಟೀನ್ ವಿಜ್ಞಾನಿಯ ಒಂದು ಹೇಳಿಕೆಯನ್ನು ಸೂಚಿಸುತ್ತ, ಕಾಲಮಾನಕ್ಕೆ ತಕ್ಕಂತೆ ಒಂದು ಸಮಸ್ಯೆ ಅಥವಾ ವಿಚಾರಕ್ಕೆ ಅನುಗುಣವಾಗಿ ನಮ್ಮೆಲ್ಲರ ಪರಿಹಾರಾತ್ಮಕ ಆಲೋಚನಾ ಪರಿಯನ್ನು ಬದಲಿಸುವಲ್ಲಿ ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮನೋಸ್ಥೈರ್ಯ  ಬೆಳೆಸಿಕೊಳ್ಳುವಂತೆ ಸಲಹೆ ನೀಡಿದರು.

13ನೇ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗದ ಪಿಇಎಸ್ ಟ್ರಸ್ಟ್’ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್. ವೈ. ಉಮಾದೇವಿ ಮಾತನಾಡಿ, ಇಂಜಿನಿಯರಿಂಗ್ ಹಾಗೂ ಎಂಬಿಎ ಪದವಿಯನ್ನು ಸಂಪೂರ್ಣಗೊಳಿಸುತ್ತಿರುವ ಈ ಕ್ಷಣದಲ್ಲಿ ತಮ್ಮ ಜೀವನ ಪಯಣದಲ್ಲಿ ಪ್ರತ್ಯಕ್ಷವಾಗಿ ಹಲವಾರು ರೀತಿಯ ತ್ಯಾಗಗಳನ್ನು ಮಾಡಿದ ದೈವ ಸ್ವರೂಪಿ ಪೋಷಕರನ್ನು ತುಂಬು ಹೃದಯದಿಂದ ಸ್ಮರಿಸುವಂತೆ ವಿದ್ಯಾರ್ಥಿ ವೃಂದಕ್ಕೆ ಸೂಚಿಸಿದರು.

ಯಶಸ್ಸು ಎಂಬುದು ಜೀವನದಲ್ಲಿ ಹಲವಾರು ರೀತಿಯ ತ್ಯಾಗಗಳನ್ನು ನಿರೀಕ್ಷಿಸುತ್ತದೆ ಹಾಗೂ ಅದರ ಫಲಶ್ರುತಿಯೇ ಒಂದು ಸುಂದರ ಭವ್ಯ ಜೀವನದ ರೂಪಿಸುವಿಕೆ ಎನ್ನುವುದರಲ್ಲಿ ಯಾವುದೇ ಅನುಮಾನಗಳಿಲ್ಲ ಎಂಬುದನ್ನು ಹಲವಾರು ಪ್ರಾಯೋಗಿಕ ಉದಾಹರಣೆಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳ ಮನಮುಟ್ಟುವಂತೆ ವಿವರಿಸಿದರು.
Kalahamsa Infotech private limitedಪ್ರಸಕ್ತ ಶೈಕ್ಷಣಿಕ ಸಾಲಿನ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಇಂಜಿನಿಯರಿಂಗ್ ಹಾಗೂ ಎಂಬಿಎ ವಿಭಾಗದ ಒಟ್ಟಾರೆ 520 ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರದಾನ ಮಾಡಲಾಯಿತು. ಶೈಕ್ಷಣಿಕ ಕಾರ್ಯ ಕ್ಷೇತ್ರದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಅಗ್ರ ಶ್ರೇಣಿಯ ವಿದ್ಯಾರ್ಥಿಗಳನ್ನು ಡಾ.ಕೆ.ಎನ್. ಬಾಲಸುಬ್ರಮಣ್ಯ ಮೂರ್ತಿ ಮತ್ತು ಶ್ರೀಮತಿ ಎಸ್.ವೈ. ಉಮಾದೇವಿ ಸನ್ಮಾನಿಸಿದರು. ಈ ಸಮಾರಂಭದಲ್ಲಿ ಎಂಬಿಎ ವಿಭಾಗದ 60 ವಿದ್ಯಾರ್ಥಿಗಳು ಹಾಗೂ ಇಂಜಿನಿಯರಿಂಗ್ ನ ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಸೈನ್ಸ್, ಮತ್ತು ಕಮ್ಯುನಿಕೇಶನ್, ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್ ಹಾಗೂ ಸಿವಿಲ್ ವಿಭಾಗದ 460 ವಿದ್ಯಾರ್ಥಿಗಳಿಗೆ ಆಯಾ ವಿಭಾಗಗಳ ಮುಖ್ಯಸ್ಥರಿಂದ ಪದವಿ ಪ್ರಮಾಣ ಪತ್ರವನ್ನು ಪ್ರದಾನ ಮಾಡಲಾಯಿತು.

ಪಿಇಎಸ್ಐಟಿಎಂನ ಪ್ರಾಂಶುಪಾಲರಾದ ಡಾ. ಚೈತನ್ಯಕುಮಾರ್ ಎಂ.ವಿ. ಉಪಸ್ಥಿತರಿದ್ದ ವಿದ್ಯಾರ್ಥಿ ವೃಂದಕ್ಕೆ ಪ್ರಮಾಣವಚನ ಬೋಧಿಸಿದರು. ಕಾಲೇಜಿನ ಇನ್ಫರ್ಮೇಷನ್ ಸೈನ್ಸ್ ವಿಭಾಗದ ಆರನೇ ಸೆಮಿಸ್ಟರ್ ನ ವಿದ್ಯಾರ್ಥಿನಿ ಕುಮಾರಿ ಸುನಿಧಿ ಪ್ರಾರ್ಥಿಸಿದರು. ಈ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮ್ಯಾನೇಜ್ಮೆಂಟ್ ಕಾಲೇಜಿನ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳ ಪೋಷಕರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: KannadaNewsKannadaNewsLiveKannadaNewsOnline ShivamoggaKannadaNewsWebsiteKannadaWebsiteLatestNewsKannadaLocalNewsMalnadNewsNewsinKannadaNewsKannadaShimogaShivamoggaNewsಮಲೆನಾಡು_ಸುದ್ಧಿಶಿವಮೊಗ್ಗಶಿವಮೊಗ್ಗ_ನ್ಯೂಸ್
Share200Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಕಾಂಗ್ರೆಸ್ 3ನೆಯ ಪಟ್ಟಿ: ಶಿವಮೊಗ್ಗಕ್ಕೆ ಯೋಗೀಶ್, ಗ್ರಾಮಾಂತರಕ್ಕೆ ಶ್ರೀನಿವಾಸ್ ಕರಿಯಣ್ಣ

Next Post

ಸಾಗರದಿಂದ ನಾಮಪತ್ರ ಸಲ್ಲಿಸಿದ ಹಾಲಪ್ಪ: ಮೆರವಣಿಗೆಯಲ್ಲಿ ಜನಸ್ತೋಮ, ಪುಷ್ಪವೃಷ್ಠಿ

kalpa News

kalpa News

Next Post
ಸಾಗರದಿಂದ ನಾಮಪತ್ರ ಸಲ್ಲಿಸಿದ ಹಾಲಪ್ಪ: ಮೆರವಣಿಗೆಯಲ್ಲಿ ಜನಸ್ತೋಮ, ಪುಷ್ಪವೃಷ್ಠಿ

ಸಾಗರದಿಂದ ನಾಮಪತ್ರ ಸಲ್ಲಿಸಿದ ಹಾಲಪ್ಪ: ಮೆರವಣಿಗೆಯಲ್ಲಿ ಜನಸ್ತೋಮ, ಪುಷ್ಪವೃಷ್ಠಿ

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL