ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಉಚಿತ ಆರೋಗ್ಯ ಶಿಬಿರಗಳು ಬಡವರ ಪಾಲಿಗೆ ವರದಾನವಾಗುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ #D S Arun ಹೇಳಿದರು.
ಅವರು ಇಂದು ಸವಿತಾ ಕೋ-ಆಪರೇಟಿವ್ ಸೊಸೈಟಿ ಮ್ಯಾಕ್ಸ್ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯವರ ಸಹಯೋಗದೊಂದಿಗೆ ಸಾಗರ ರಸ್ತೆಯಲ್ಲಿರುವ ಪುಟ್ಟರಾಜ ಗವಾಯಿಗಳ ಸಭಾಂಗಣದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ಒತ್ತಡದ ಜೀವನದ ನಡುವೆ ಸಾಮಾನ್ಯ ಜನರು ತಮ್ಮ ಆರೋಗ್ಯವನ್ನೇ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಆರೋಗ್ಯವೇ ಭಾಗ್ಯ ಎಂಬುದನ್ನು ಮರೆತ್ತಿದ್ದಾರೆ. ತಪಾಸಣೆ ಮಾಡಿಸುವುದೇ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಕೋ-ಆಪರೇಟಿವ್ ಸೊಸೈಟಿಗಳು, ಆಸ್ಪತ್ರೆಗಳ ನೆರವಿನೊಂದಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುವುದು ಉತ್ತಮ ಕಾರ್ಯವಾಗಿದೆ. ಸದಸ್ಯರುಗಳು ಇದರ ಪ್ರಯೋಜನ ಪಡೆಯಬೇಕು ಮತ್ತು ಆಗಾಗ ಇಂತಹ ಶಿಬಿರಗಳನ್ನು ನಡೆಸಬೇಕು ಎಂದರು.
ಕಾರ್ಯಕ್ರಮವನ್ನು ಸೊಸೈಟಿಯ ಅಧ್ಯಕ್ಷ ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಆರ್. ಕೃಷ್ಣ, ನಿರ್ದೇಶಕರುಗಳಾದ ಎಂ.ಜಿ. ಬಾಲು, ಜಿ. ರವಿ, ಬಿ.ಎಸ್. ಧರ್ಮರಾಜ್, ಶ್ರೀಧರ್, ಎನ್. ಮುರುಗೇಶ್, ವೆಂಕಟೇಶ್, ಗಂಗಪ್ಪ, ವೀಣಾ, ಮಂಜುಳಾ, ಶಬರಿಗಿರೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಶಿಬಿರದಲ್ಲಿ ಕಣ್ಣು, ಸ್ತ್ರೀಯರಿಗೆ ಸಂಬಂಧಪಟ್ಟ ತೊಂದರೆಗಳು, ಹೃದಯ ಸಂಬಂಧಿತ ತಪಾಸಣೆಗಳನ್ನು ನಡೆಸಲಾಯಿತು. ಸಮಾಜ ಬಾಂಧವರು ಇದರ ಪ್ರಯೋಜನ ಪಡೆದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post