ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಮಲೆನಾಡಿನ ತವರೂರು, ಕಲೆ-ಸಾಹಿತ್ಯಗಳ ನೆಲೆಬೀಡು, ಚಳುವಳಿಗಳ ನೆಲೆ, ಸಾಮಾಜಿಕ ಹೋರಾಟಗಳ ಮೂಲಕ ರಾಜ್ಯದ ಗಮನ ಸೆಳೆದ ಶಿವಮೊಗ್ಗ ನಗರದಲ್ಲಿ ವಿಮಾನ ನಿಲ್ದಾಣ ಬಹುದಿನದ ಕನಸು ಆಗಿದೆ. ಇದರ ಹಿಂದೆ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ಶ್ರಮ ಹಾಗೂ ಪ್ರಯತ್ನಗಳು ಶ್ಲಾಘನೀಯ ಹಾಗೂ ಸ್ವಾಗತಾರ್ಹ ವಿಷಯವೂ ಆಗಿದೆ. ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಸರಕಾರವು ಅಂತಿಮಗೊಳಿಸಬೇಕೆಂದು ಹೆಚ್ಡಿಕೆ ಮಲ್ನಾಡ್ ಬ್ರಿಗೇಡ್ ಒತ್ತಾಯಿಸಿದೆ.

ವಿಮಾನ ನಿಲ್ದಾಣಕ್ಕೆ ಅಂತರಾಷ್ಟ್ರೀಯ ಮೆರಗು ನೀಡಿ ಮರು ಯೋಜನೆ ರೂಪಿಸಿ ಕಾಮಗಾರಿಗೆ ತ್ವರಿತಗತಿಯಲ್ಲಿ ಚಾಲನೆ ನೀಡಿರುವುದರ ನಡುವೆಯೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಮಾಂಕಿತಗೊಳಿಸುವ ಅನೇಕ ಪ್ರಸ್ತಾಪಗಳು ಭಾರಿ ಚರ್ಚೆಯಲ್ಲಿವೆ. ಕುವೆಂಪು ಅವರ ಹೆಸರಿಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆಯಬೇಕು ಹಾಗೂ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಶಾಶ್ವತ ಕನ್ನಡ ಧ್ವಜಸ್ತಂಭದ ಸ್ಥಾಪನೆ ಮಾಡಿ ಕನ್ನಡದ ಸ್ವಾಭಿಮಾನ ಭಾವುಟವನ್ನು ಸದಾ ಹಾರಾಡುವಂತಾಗಬೇಕೆಂದು ಹೆಚ್ಡಿಕೆ ಮಲ್ನಾಡ್ ಬ್ರಿಗೇಡ್ ಆಗ್ರಹಿಸಿದೆ.

ಯಾವುದೇ ಜಾತಿ-ಮತ-ಪಂಥಗಳ ಬೇದವಿಲ್ಲದೆ ಸೌಹಾರ್ಧಯುತವಾಗಿ ಸೇರಿಕೊಳ್ಳುವ ಕನ್ನಡ ಈ ನೆಲದ ಅಸ್ಮಿತೆಯಾಗುತ್ತದೆ ಹಾಗೂ ಮಾದರಿಯೂ ಆಗುತ್ತದೆ ಅಲ್ಲದೆ ಕನ್ನಡದ ಭಾಷೆ, ಸ್ವಾಭಿಮಾನ, ಏಕತೆ. ವಿಶ್ವಮಾನವತಾ ವಾದ ಈ ಮೂಲಕ ಪಸರಿಸಲು ಮತ್ತಷ್ಟು ಸಹಕಾರಿಯಾಗಲಿದೆ ಎಂದು ತಿಳಿಸಿದೆ.

ಹೆಸರಿಡುವುದೇ ವಿವಾದವಾಗದಿರಲಿ ಎನ್ನುವ ಕಾರಣಕ್ಕೆ ಮಲೆನಾಡಿನ ಈ ನೆಲೆಯನ್ನು ವಿಶ್ವಮಟ್ಟಕ್ಕೆ ಕೊಂಡೋಯ್ದು ಸಾಹಿತ್ಯದ ನೆಲೆಯನ್ನಾಗಿಸಿದ ಅಗ್ರಗಣ್ಯರು ಮಾನವತಾವಾದದ ಕವಿ ಕುವೆಂಪುರವರ ಹೆಸರು ಎಲ್ಲಾ ಸಂಘಟಿತ ವೇದಿಕೆಗಳು ಸೂಚಿಸಲಿ ಎನ್ನುವುದು ಹೆಚ್ಡಿಕೆ ಮಲ್ನಾಡ್ ಬ್ರಿಗೇಡ್ ತಿಳಿಸುತ್ತದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















