ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಗಿಗುಡ್ಡದಲ್ಲಿ ಎಲೆ ಎತ್ತುತ್ತಿರುವ ಹಲವು ಕಟ್ಟಡಗಳನ್ನು ತಡೆಗಟ್ಟಿ ಇದನ್ನು ಉಳಿಸಬೇಕು ಎಂದು ಒತ್ತಾಯಿಸಿ ರಾಗಿಗುಡ್ಡ ಉಳಿಸಿ ಎಂದು ನಗರದಲ್ಲಿ ಇಂದು ಆಯೋಜಿಸಲಾಗಿದ್ದ ಬೃಹತ್ ಜಾಥಾ ಯಶಸ್ವಿಯಾಗಿದೆ.
ಇಎಸ್’ಐ ಆಸ್ಪತ್ರೆಯಿಂದ ಹೊರಟ ಜಾಥಾ 4.5 ಕಿಮೀ ದೂರ ಕ್ರಮಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು ತಲುಪಿತು.
ರಾಗಿಗುಡ್ಡವನ್ನು ಉಳಿಸುವಂತೆ ಜಾಥಾದ ಉದ್ದಕ್ಕೂ ಘೋಷಣೆಗಳನ್ನು ಕೂಗಲಾಯಿತು. ಗುಡ್ಡ ಇರುವುದು ಏರುವುದಕ್ಕೆ ಮಾರುವುದಕ್ಕಲ್ಲ, ರಾಗಿಗುಡ್ಡ ನಮ್ಮದು, ಬಡವಾಯಿತು ಕಾಡು ಬಡವಾಯಿತು ನಾಡು, ಪರಿಸರ ಅರಳಿದರೆ ಜೀವ ಪರಿಸರ ಕೆರಳಿದರೆ ನಿರ್ಜೀವ! ಹಸಿರಾಗಲಿ ರಾಗಿಗುಡ್ಡ, ಉಸಿರಾಗಲಿ ಜೀವ ಸಂಕುಲ, ಉಳಿಸಿ ಉಳಿಸಿ ರಾಗಿಗುಡ್ಡುಳಿಸಿ, ಬೆಳಸಿ ಬೆಳಸಿ ಗಿಡಮರ ಬೆಳಸಿ, ಯಾರಿಗಾಗಿ ರಾಗಿಗುಡ್ಡ ಪರಿಸರಕ್ಕಾಗಿ ರಾಗಿಗುಡ್ಡ ಎಂದು ಘೋಷಣೆ ಕೂಗಲಾಯಿತು.
ರಾಗಿಗುಡ್ಡದ ಸರ್ವೇ 112ನ್ನು ಜೀವ ವೈವಿಧ್ಯ ಸಂಕುಲ ಎಂದು ಘೋಷಿಸಬೇಕು ಎಂದು ಈ ಸಂದರ್ಭದಲ್ಲಿ ಆಗ್ರಹಿಸಲಾಯಿತು.
ಯಾವ ಸಂಘಟನೆಗಳ ಬೆಂಬಲ?
ರಾಜ್ಯ ರೈತ ಸಂಘ, ಜ್ಯೂನಿಯರ್ ಚೇಂಬರ್ ಇಂಟರ್ ನ್ಯಾಷನಲ್, ರೋಟರಿ ಸಂಸ್ಥೆಗಳು, ಫ್ರೆಂಡ್ಸ್ ಸೆಂಟರ್, ಅರ್ಪಿತಾ ಸಂಗೀತ , ಶಿವಮೊಗ್ಗ ಬಾರ್ ಅಸೋಸಿಯೇಷನ್, ಅಣ್ಣ ಹಜಾರೆ ಹೋರಾಟ, ರವೀಂದ್ರ ನಗರ, ನಿವಾಸಿಗಳ ಸಂಘ, ಶಿವಮೊಗ್ಗ ಸೈಕಲ್ ಕ್ಲಬ್ ಹೀಗೆ 28 ಸಂಘ ಸಂಸ್ಥೆಗಳು ಭಾಗಿಯಾಗಿದ್ದವು.
Also read: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಇಂದು ಹೆಚ್ಚಿನ ಭದ್ರತೆ! ಕಾರಣವೇನು?
ಜಾಥಾದಲ್ಲಿ ವೇದಿಕೆಯ ವಸಂತ್ ಕುಮಾರ್, ರಾಜ್ಯ ರೈತ ಸಂಘದ ಅಧ್ಯಕ್ಷ ಬಸವರಾಜಪ್ಪ, ಪರಿಸರವಾದಿ ಕುಮಾರಸ್ವಾಮಿ, ಜೆಡಿಎಸ್ ಶಾಂತ ಸುರೇಂದ್ರ, ಎಎಪಿ ಅಭ್ಯರ್ಥಿ ನೇತ್ರಾವತಿ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post