ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ರಾಷ್ಟ್ರೀಯ ಸ್ವಾಭಿಮಾನಿ ಆಂಧೋಲನ, ಪರ್ಯಾವರಣ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ನ.6ರಂದು ಹಮ್ಮಿಕೊಳ್ಳಲಾದ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ #Nirmala TungaBhadra Campaign ಭಾರತೀಯ ವೈದ್ಯಕೀಯ ಸಂಘ ಶಿವಮೊಗ್ಗ ಶಾಖೆ ವತಿಯಿಂದ ಪೂರ್ಣ ಪ್ರಮಾಣದ ಸಹಕಾರ ನೀಡಲಾಗುವುದು ಎಂದು ಐಎಂಎ ಶಿವಮೊಗ್ಗ ಅಧ್ಯಕ್ಷ ಡಾ.ಶ್ರೀಧರ್ ಎಸ್. ಹೇಳಿದ್ದಾರೆ.
ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಶುದ್ಧ ನೀರು ಮನುಷ್ಯನಿಗೆ ಅತಿ ಮುಖ್ಯವಾಗಿದೆ. ಒಳಚರಂಡಿ ನೀರು ನದಿಯನ್ನು ಸೇರುವುದರಿಂದ ಕುಡಿಯುವ ನೀರು ಸೂಕ್ಷ್ಮಾಣುಗಳಿಂದ ಕಲುಷಿತಗೊಳ್ಳುತ್ತದೆ. ಇದರ ಸೇವನೆಯಿಂದ ಅತಿಸಾರ, ಕರುಳುಬೇನೆ, ಕಾಮಾಲೆ, ವಿಷಮಶೀತಜ್ವರ ಮೊದಲಾದ ಸೋಂಕುಗಳು ಜನರನ್ನು ಬಾಧಿಸುತ್ತವೆ.
Also read: ಸದ್ದಿಲ್ಲದೆ ರೈತರ ಜಮೀನು ಕಬಳಿಕೆ | ರಾಜ್ಯಾದ್ಯಂತ ದೊಡ್ಡ ಮಟ್ಟದ ಹೋರಾಟ | ಬಿಜೆಪಿ ಎಚ್ಚರಿಕೆ
ಪ್ಲಾಸ್ಟಿಕ್ ತ್ಯಾಜಗಳು ನದಿಯನ್ನು ಸೇರಿದಾಗ ಅದರಿಂದ ಬಿಡುಗಡೆಗೊಳ್ಳುವ ಮೈಕ್ರೋ ಪ್ಲಾಸ್ಟಿಕ್ ಅಂಶ ಶರೀರವನ್ನು ಸೇರಿ ಫಲವಂತಿಕೆಯ ಸಮಸ್ಯೆಗಳು, ಕ್ಯಾನ್ಸರ್ ಮನುಷ್ಯರಿಗೆ ಕಾಡಬಹುದು. ರಾಸಾಯನಿಕ ಗೊಬ್ಬರ, ಕೀಟ ನಾಶಕ ಮತ್ತು ಕೈಗಾರಿಕಾ ತ್ಯಾಜ್ಯಗಳು ನದಿಯನ್ನು ಸೇರಿದಾಗ ಇದರಿಂದ ಚರ್ಮರೋಗ, ಅಲರ್ಜಿ, ಅಂತರಿಕ ಅಂಗಾಗಳಾದ ಯಕೃತ್, ಕಿಡ್ನಿ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ರಾಸಾಯನಿಕಗಳ ದೀರ್ಘಕಾಲಿಕ ಸೇವನೆ, ನರ ಮತ್ತು ಮೆದುಳಿನ ಸಮಸ್ಯೆಗಳಾದ ಮರೆವಿನ ಕಾಯಿಲೆಗಳಿಗೆ ಕಾರಣವಾಗಬಹುದು. ಇವೆಲ್ಲವನ್ನು ಕೂಡ ನಾವು ಈ ಅಭಿಯಾನದಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಲಿದ್ದೇವೆ. 400 ಕಿ.ಮೀ. ಈ ಪಾದಯಾತ್ರೆಯ ಉದ್ದಕ್ಕೂ ಸ್ಥಳೀಯ ಐಎಂಎ ಸದಸ್ಯರು ಪಾಲ್ಗೊಂಡು, ವೈದ್ಯಕೀಯ ಅರಿವು ಮೂಡಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಡಾ. ವಿನಯ ಶ್ರೀನಿವಾಸ್, ಡಾ.ರಾಜಾರಾಮ್ ಮತ್ತು ಡಾ.ಶ್ರೀಪತಿ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post