ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನ.18ರಂದು ಬೆಳಿಗ್ಗೆ ಮಥುರಾ ಪ್ಯಾರಡೈಸ್‍ನಲ್ಲಿ ಶ್ರೀಶಂಕರನಾರಾಯಣ ಕಾಶಿ ಟ್ರಸ್ಟ್ (ರಿ.,) ಶಿವಮೊಗ್ಗ ವತಿಯಿಂದ ಸವಾಲಾತ್ಮಕ ಸುಗಮ ಸಂಗೀತ (ಭಾವಗೀತೆ) ಗಾಯನ ಸ್ಪರ್ಧೆ ನಡೆಯಲಿದೆ ಎಂದು ಗುರುಗುಹ ಸಂಗೀತ ವಿದ್ಯಾಲಯದ ಪ್ರಾಚಾರ್ಯರಾದ ಹೆಚ್.ಎಸ್.ನಾಗರಾಜ್ ಹೇಳಿದ್ದಾರೆ.
ಅವರು ಇಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿ, ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರತಿಭಾವಂತ ಯುವ ಕಲಾವಿದರು ಕಂಡು ಬರುತ್ತಿದ್ದರೂ ಅವರಲ್ಲಿ ಬಹುಪಾಲು ಯುವರಿಗೆ ತಾವು ಹಾಡಲಿರುವ ಕವನ ಮತ್ತು ಅದರ ಕವಿಯ ಕುರಿತು ಅರಿವು ಇರುವುದಿಲ್ಲ, ಇದಕ್ಕಾಗಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಶಂಕರನಾರಾಯಣ ಕಾಶಿ ಹೆಸರಿನಲ್ಲಿ ಹಾಗೂ ಪ್ರಸ್ತುತ ಮಥುರಾ ಪ್ಯಾರಡೈಸ್‍ನ 25ನೇ ವರ್ಷದ ಸಂಭ್ರಮಾಚರಣೆಯ ಧ್ಯೋತಕವಾಗಿ ಭಾವಗೀತೆಗಳ ಜಿಲ್ಲಾಮಟ್ಟದ ವಿಶೇಷ ರೀತಿಯ ಗಾಯನ ಸ್ಪರ್ಧೆಯನ್ನು ನಡೆಸಲು ಸಂಸ್ಥೆ ನಿಶ್ಚಯಿಸಿದೆ. ಇದರಲ್ಲಿ ಕುವೆಂಪು, ದ.ರಾ.ಬೇಂದ್ರೆ, ಜಿ.ಎಸ್.ಶಿವರುದ್ರಪ್ಪ, ಎನ್.ಎಸ್.ಲಕ್ಷ್ಮೀನಾರಾಯಣ್ ಭಟ್ಟ, ಕೆ.ಎಸ್. ನಿಸಾರ್ ಅಹಮ್ಮದ್, ಬಿ.ಆರ್. ಲಕ್ಷ್ಮಣ್‍ರಾವ್ ಈ ಕವಿಗಳಲ್ಲಿ ಮೂವರು ಕವಿಗಳ ಒಂದೊಂದು ಕವನವನ್ನು ಆಯ್ದುಕೊಂಡು ಅದರಲ್ಲಿ ತೀರ್ಪುಗಾರರು ತಿಳಿಸಿದ ಒಂದು ಕವನವನ್ನು ಸ್ಪರ್ಧಿಯು ಹಾಡಬೇಕಾಗುತ್ತದೆ. ಪ್ರತಿಸ್ಪರ್ಧಿಗೂ 12 ನಿಮಿಷದ ಸಮಯಾವಕಾಶದಲ್ಲಿ ತೀರ್ಪುಗಾರರು ತಿಳಿಸಿದ ಒಂದು ಕವನವನ್ನು ಕುರಿತು ಕವಿಹೃದಯ, ಕವನ ಅಂತರಾಳ ಎಂದು ಎರಡು ಭಾಗದಲ್ಲಿ ಮಾತನಾಡಿ, ನಂತರ ಕವನ ಹಾಡಬೇಕಾಗುತ್ತದೆ ಎಂದರು.
Also read: ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಐಎಂಎ ಶಿವಮೊಗ್ಗ ಶಾಖೆ ಬೆಂಬಲ: ಡಾ. ಶ್ರೀಧರ್
ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಯ ವಯಸ್ಸು 16ರಿಂದ 26ರ ಒಳಗಿರಬೇಕು. ಪ್ರಥಮ ಬಹುಮಾನ ರೂ.8 ಸಾವಿರ, ದ್ವಿತೀಯ 6 ಸಾವಿರ, ತೃತೀಯ 4 ಸಾವಿರ ಜೊತೆಗೆ ಪಾರಿತೋಷಕ ಇರುತ್ತದೆ. ಸ್ಪರ್ಧೆಗೆ ಸಲ್ಲಿಸಬೇಕಾದ ಅರ್ಜಿಯ ಮಾದರಿ ಮತ್ತು ಸ್ಪರ್ಧೆಯ ನೀತಿ ನಿಬಂಧನೆಗಳ ಒಳಗೊಂಡ ಕರಪತ್ರವು ಮಥುರಾ ಪ್ಯಾರಡೈಸ್‍ನಲ್ಲಿ ನ.11ರಿಂದ ದೊರೆಯಲಿದ್ದು, ಈ ಸ್ಪರ್ಧೆಗೆ ಯಾವುದೇ ಶುಲ್ಕವಿರುವುದಿಲ್ಲ, ವಾಟ್ಸಾಪ್ ಮೂಲಕವು ದೊರೆತ ಅರ್ಜಿಯನ್ನು ಭರ್ತಿ ಮಾಡಿ, ಸ್ಪರ್ಧಿಗಳು ನ.14ರೊಳಗೆ ಮಥುರಾ ಪ್ಯಾರಡೈಸ್‍ನಲ್ಲಿ ನೀಡಿ, ಸ್ವೀಕೃತಿಯನ್ನು ಪಡೆಯತಕ್ಕದ್ದು, ಸ್ಪರ್ಧೆಗೆ ಯಾವುದೇ ವಾದ್ಯ ಸಹಕಾರ ಇರುವುದಿಲ್ಲ, ಶೃತಿ ವಾದ್ಯವನ್ನು ಬಳಸಬಹುದು. ಮುಂದೆ ಬಹುಮಾನ ವಿಜೇತರು ಈ ಸಂಸ್ಥೆ ನಡೆಸುವ ಬಹುಮಾನ ವಿತರಣಾ ಸಾರ್ವಜನಿಕ ಕಾರ್ಯಕ್ರಮದಲ್ಲಿ ಸ್ಪರ್ಧೆಗೆ ನೀಡಿದ ಕವನಗಳ ಗಾಯನವನ್ನು ಸಂಸ್ಥೆ ನೀಡುವ ಪಕ್ಕವಾದ್ಯದ ಸಹಕಾರದೊಂದಿಗೆ ನಡೆಸಿಕೊಡುವುದು. ಇದಕ್ಕೆ ಪ್ರತ್ಯೇಕ ಸಂಭಾವನೆ ಇರುವುದಿಲ್ಲ.
ಶಿವಮೊಗ್ಗಕ್ಕೆ ಹೊರಗಿನಿಂದ ಬಂದ ಬಹುಮಾನಿತರಿಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ; 9448241149,9480915777, 9448170369 ಸಂಪರ್ಕಿಸಬಹುದು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಿರ್ಮಲಾ ಕಾಶಿ, ಗೋಪಿನಾಥ್, ರವಿಕುಮಾರ್, ಸಂಯುಕ್ತ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post