ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಗಮಕ ಗಂಧರ್ವ ಹೊಸಳ್ಳಿ ಕೇಶವ ಮೂರ್ತಿಗಳಂತಹ ಕಲಾವಿದರಿಗೆ ಭಾರತ ಸರ್ಕಾರದ ಪದ್ಮಶ್ರಿ ಪ್ರಶಸ್ತಿ ಸಂದಿರುವುದು ಅತ್ಯಂತ ಸೂಕ್ತವಾಗಿದೆ. ಇದು ಒಂದು ಅಪರೂಪದ ಕಲೆಗೆ ದೊರೆತ ಗೌರವ, ಒಂದು ಪರಂಪರೆಗೆ ಸಂದ ಗೌರವ. ಹೊಸಳ್ಳಿಯಲ್ಲಿ ಹೆಮ್ಮೆಯಿಂದ ತಲೆ ಎತ್ತಿ ನಿಂತಿರುವ ಗಮಕ ಭವನಕ್ಕೊಂದು ಹೊನ್ನಿನ ಕಳಶ. ಇದು ಭಾರತೀಯ ಪರಂಪರೆ, ಕಲಾ ಪ್ರಕಾರಗಳನ್ನು ಆರಾಧಿಸುವ ಪ್ರತಿಯೊಬ್ಬರು ಸಂಭ್ರಮಿಸಬೇಕಾದ ಕ್ಷಣ ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಹೊಸಳ್ಳಿ ಗ್ರಾಮದಲ್ಲಿ ಶ್ರೇಷ್ಠ ಗಮಕ ಕಲಾವಿದ ಕೇಶವ ಮೂರ್ತಿ ಅವರ ಮನೆಗೆ ಸಂಸದರು ಮತ್ತು ನೂತನ ಜಿಲ್ಲಾ ಉಸ್ತುವಾರಿ ಮಂತ್ರಿ ನಾರಾಯಣ ಗೌಡ ಅವರು ತೆರಳಿ ಕೆಲ ಸಮಯ ಗಮಕದವನ್ನು ಕೇಳಿ ನಂತರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿರುವ ಹೊಸಳ್ಳಿ ಕೇಶವ ಮೂರ್ತಿ ಅವರಿಗೆ ಸನ್ಮಾನಿಸಲಾಯಿತು.
ರಾಷ್ಟೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಸಹಕಾರ್ಯವಾಹಕ ಪಟ್ಟಾಭಿರಾಮ್ ಅವರು ಶಾಸಕರಾದ ಅಶೋಕ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ರುದ್ರೇಗೌಡರು, ಡಿ. ಎಸ್. ಅರುಣ್, ಮಧುಕರ ಮತ್ತೂರು, ಜಿಲ್ಲಾಡಳಿತ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post