ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕೋಟೆ ಶ್ರೀ ಮಾರಿಕಾಂಬಾ ಜಾತ್ರೆಗೆ ಸಕಲ ಸಿದ್ದತೆ ನಡೆಯುತ್ತಿದ್ದು ದೇಗುಲದ ಅಮ್ಮನ ಮೂರ್ತಿಯು ವಿಶೇಷಾಲಂಕಾರವಾಗಿ ಈ ವರುಷ ಸುಮಾರು ಎರಡು ಕೆಜಿ ತೂಕದ ಬೆಳ್ಳಿ ಮುಖದೊಂದಿಗೆ ಕಂಗೊಳಿಸಲಿದೆ.
Also Read: ಪಠ್ಯಪುಸ್ತಕದಲ್ಲಿ ಪುನೀತ್ ರಾಜಕುಮಾರ್ ಬದುಕಿನ ಕಥೆ ಅಳವಡಿಕೆ!? ಸರ್ಕಾರ ಗಂಭೀರ ಚಿಂತನೆ
ಅಮ್ಮನ ವಿಗ್ರಹದ ಮುಖದ ಚಹರೆಯಲ್ಲಿ ಈ ಆಭರಣವನ್ನು ತಯಾರಿಸಿದ್ದು ಕೊಪ್ಪ ಮೂಲದ ಅಜಿತ್ ಎಂಬ ಕಲಾವಿದರಾಗಿದ್ದಾರೆ. ಮಾರಿಕಾಂಬೆಯ ಭಕ್ತರಾದ ಬೆಂಗಳೂರು ಮೂಲದ ಬ್ಯಾಂಕ್ ಉದ್ಯೋಗಿ ಅರ್ಚನಾ ಅವರು ಈ ಕಾಣಿಕೆ ನೀಡಿದ್ದಾರೆ.
Also Read: ಹಿಜಾಬ್ ತೀರ್ಪು ನೀಡಿದ ನ್ಯಾಯಾಧೀಶರಿಗೇ ಜೀವ ಬೆದರಿಕೆ: ಎಫ್’ಐಆರ್ ದಾಖಲು
ಇಂದು ದೇಗುಲಕ್ಕೆ ಮುಖವಾಡವನ್ನು ಕಲಾವಿದ ಅಜಿತ್ ಅವರು ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿ ಪದಾದಿಕಾರಿಗಳಿಗೆ ವಿತರಿಸಿದರು. ಸಮಿತಿ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಹಾಗೂ ಇತರರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post