ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ತಾಲ್ಲೂಕಿನ ಕುಂಸಿ ಗ್ರಾಮ ಪಂಚಾಯಿತಿಗೆ ಕುಂಸಿ 5ನೇ ವಾರ್ಡಿನಿಂದ ಸ್ಪರ್ಧಿಸಿದ್ದ ಗೌಡ್ರು ಬಿ. ಶ್ರೀನಿವಾಸ ಅವರು 352 ಮತಗಳನ್ನು ಪಡೆದು ಜಯಶಾಲಿಯಾಗಿದ್ದಾರೆ.
ಸಾಮಾನ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಟ್ರ್ಯಾಕ್ಟರ್ ಗುರುತಿನೊಂದಿಗೆ ಸ್ಪರ್ಧಿಸಿದ್ದ ಗೌಡ್ರು ಬಿ. ಶ್ರೀನಿವಾಸ್ ಇದೇ ಪ್ರಥಮ ಬಾರಿಗೆ ಕುಂಸಿ ಗ್ರಾಮ ಪಂಚಾಯಿತಿಯನ್ನು ಪ್ರವೇಶಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಜನಪ್ರಿಯ ವ್ಯಕ್ತಿಯಾಗಿ ಹೊರಹೊಮ್ಮಿದ್ದರು. ಗ್ರಾಮದಲ್ಲಿ ನಡೆಯುವಂತಹ ಯಾವುದೇ ಕಾರ್ಯಕ್ರಮಗಳಿಗೆ ಮುಂಚೂಣಿಯಲ್ಲಿರುತ್ತಿದ್ದ ಇವರು, ಇದೀಗ ಗ್ರಾಮ ಪಮಚಾಯಿತಿ ಚುನಾವಣೆಗೆ ಸ್ಪರ್ಧಿಸಿ ವಿಜೇತರಾಗುವ ಮೂಲಕ ಜನ ಪ್ರತಿನಿಧಿಯಾಗಿ ಜನಸಾಮಾನ್ಯರ ಕೆಲಸವನ್ನು ಮಾಡಲು ಪಣ ತೊಟ್ಟಿದ್ದಾರೆ.
ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಿಜೇತ ಗೌಡ್ರು ಬಿ. ಶ್ರೀನಿವಾಸ್ ಅವರನ್ನು 5ನೇ ವಾರ್ಡಿನ ಅಭಿಮಾನಿಗಳು, ಸ್ನೇಹಿತರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post