ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಗರದ ತ್ಯಾವರೆಚಟ್ನಹಳ್ಳಿ ವಿದ್ಯುತ್ ಉಪಕೇಂದ್ರದಿಂದ ಹೊರಟು ಶಾಂತಿನಗರ ಮುಖ್ಯರಸ್ತೆ, ರಾಗಿಗುಡ್ಡ ರಸ್ತೆ, ಹೊನ್ನಾಳಿ ರಸ್ತೆ (ಮಾರುತಿ ಶೋ ರೂಂ ನಿಂದ ಮೇಲ್ಸೇತುವೆಯ ಕೆಳಭಾಗದಲ್ಲಿರುವ ಚೌಡಮ್ಮ ದೇವಸ್ಥಾನದ ವರೆಗೆ) ಶೇಷಾದ್ರಿಪುರಂ, ಶಂಕರಮಠ ಮುಖ್ಯರಸ್ತೆ (ಎಡಭಾಗ), ರೈಸ್ ಮಿಲ್ ರಸ್ತೆಗಳು, ಶಂಕರ ಕಾಲೋನಿ, ಶಂಕರ ಮಠದ ಹಿಂಭಾಗದ ರಸ್ತೆ, ಹಳೆ ಗುಂಡಪ್ಪ ಶೆಡ್, ಹೊಸ ಗುಂಡಪ್ಪ ಶೆಡ್ ಹಾಗೂ ಮಲ್ಲೇಶ್ವರನಗರದ ಮಖೇನ 11 ಕೆ.ವಿ.ಫೀಡರ್‌ಗೆ ಭೂಗತ ವಿದ್ಯುತ್ ಕೇಬಲ್ ಅಳವಡಿಸುತ್ತಿದ್ದು, ಸಾರ್ವಜನಿಕರು ಅಥವಾ ಯಾವುದೇ ಇಲಾಖೆಗೆ ಸಂಬಂಧಿಸಿದಂತೆ ಭೂಮಿಯನ್ನು ಅಗೆಯುವ ಕಾಮಗಾರಿಗಳನ್ನು ಮೆಸ್ಕಾಂ ಗಮನಕ್ಕೆ ಬಾರದಂತೆ ಕೈಗೆತ್ತಿಕೊಳ್ಳಬಾರದೆಂದು ಮೆಸ್ಕಾಂ ಕಾ ಮತ್ತು ಪಾ ನಗರ ಉಪವಿಭಾಗ-1, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















