ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಖಿಲ ವೀರಶೈವ ಲಿಂಗಾಯತ ಮಹಾಸಭೆಯ ಎರಡನೇ ಹಂತದ ಚುನಾವಣೆಗೆ ಕೇಂದ್ರ ಕಾರ್ಯಕಾರಿ ಸಮಿತಿಗೆ ಸಂಸದ ಬಿ.ವೈ. ರಾಘವೇಂದ್ರ #B Y Raghavendra ಮತ್ತು ಎಂ.ಪಿ. ಆನಂದಮೂರ್ತಿರವರು ರಾಜ್ಯ ಕಾರ್ಯಕಾರಿ ಸಮಿತಿಗೆ ಇಂದು ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ರುದ್ರಮುನಿ ಸಜ್ಜನ್ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ ಬಸವೇಶ್ವರ ವೀರಶೈವ ಲಿಂಗಾಯತ ಸಮಾಜದ ಸಹ ಕಾರ್ಯದರ್ಶಿ ಸಂತೋಷ ಬಳ್ಳಿಕೆರೆ ಜಿಲ್ಲಾ ನಿರ್ದೇಶಕರಾದ ಸುಕುಮಾರ್ ಎನ್ ಎನ್ ಪರಮೇಶ್ವರ್ (ವಾಲಿಬಾಲ್) ಅನಿತಾ ರವಿಶಂಕರ್ ಗೀತಾ ರವೀಂದ್ರ ಸವಿತಾ ಪ್ರಕಾಶ್, ಮಲ್ಲಿಕಾರ್ಜುನ ಕಾನೂರ್ ತಾಲೂಕು ನಿರ್ದೇಶಕರಾದ ಸೋಮನಾಥ್ ಮೋಹನ್ ಸತೀಶ್ ಮುಂಚೆ ಮನೆ ಮತ್ತು ತಿಪ್ಪೇಶ್ ಹೆಚ್. ಆರ್. ಉಪಸ್ಥಿತರಿದ್ದರು.
Also read: ಸರ್ಕಾರಿ ಶಾಲೆಗಳು ಮತ್ತೆ ವಿಜೃಂಭಿಸಲಿವೆ | ಶಿಕ್ಷಣ ಸಚಿವ ಮಧು ಬಂಗಾರಪ್ಪ
ಚುನಾವಣೆಯ ನಾಮಪತ್ರ ಸಲ್ಲಿಕೆ ಆಗಸ್ಟ್ ಒಂದರಿಂದ ಚಾಲನೆ ದೊರಕ್ಕಿದ್ದು ರಾಜ್ಯ ಘಟಕಗಳ ಅಧ್ಯಕ್ಷ ಮತ್ತು ಕಾರ್ಯಕಾರಿ ಸಮಿತಿಗೆ ಸಹ ಚುನಾವಣೆ ನಡೆಯಲಿದೆ ಎರಡನೇ ಹಂತದಲ್ಲಿ ಕರ್ನಾಟಕ ಕೇರಳ ಆಂಧ್ರಪ್ರದೇಶ ರಾಜ್ಯ ಘಟಕಗಳ ಅಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆ ನಡೆಯಲಿದೆ ಒಟ್ಟು ಕರ್ನಾಟಕ ರಾಜ್ಯ ಘಟಕಕ್ಕೆ 30 ಸದಸ್ಯ ಸ್ಥಾನಗಳಿಗೆ(ಸಾಮಾನ್ಯ 23 ಮಹಿಳೆ 7)ಚುನಾವಣೆ ನಡೆಯಲಿದೆ ಹಾಗೆ ಕೇರಳ ಆಂಧ್ರಪ್ರದೇಶ ತಮಿಳುನಾಡು ಮತ್ತು ಮಹಾರಾಷ್ಟç ರಾಜ್ಯಗಳಿಂದ ಕೇಂದ್ರ ಕಾರ್ಯಕಾರಿಗೆ ತಲಾ 5 ಸಾಮಾನ್ಯ ಒಬ್ಬರು ಮಹಿಳೆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಈ ಮೇಲ್ಕಂಡ ಎಲ್ಲಾ ಸ್ಥಾನಗಳಿಗೆ ಆಗಸ್ಟ್ 25 ರಂದು ಜಿಲ್ಲಾ ಕೇಂದ್ರ ಸ್ಥಾನದಲ್ಲಿ ಮತದಾನ ನಡೆಯಲ್ಲಿದ್ದು ಅಂದೇ ಫಲಿತಾಂಶ ಪ್ರಕಟವಾಗಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post