ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿ ವತಿಯಿಂದ ಭಾನುವಾರ ಜೆ.ಎನ್.ಎನ್.ಸಿ.ಇ #JNNCE ಕಾಲೇಜಿನ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಎನ್ಇಎಸ್ ಕ್ರೀಡೋತ್ಸವ 2026 ರ ಕ್ರಿಕೆಟ್ ಪಂದ್ಯಾವಳಿಯಲ್ಲಿ #Cricket tournament ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಸಂಜೆ ಕಾಲೇಜು #ATNC Evening College ತಂಡ ಗೆಲುವು ಸಾಧಿಸಿದ್ದು, ಕೋಣಂದೂರಿನ ಶರಾವತಿ ಪ್ರಥಮ ದರ್ಜೆ ಕಾಲೇಜಿನ ತಂಡ ರನ್ನರ್ ಅಪ್ ಪಡೆದರು.
ಪುರುಷ ವಾಲಿಬಾಲ್ ಸ್ಪರ್ಧೆಯಲ್ಲಿ ಜೆ.ಎನ್.ಎನ್.ಸಿ.ಇ ಟ್ರಾನ್ಸ್‌ಪೋರ್ಟ್ ವಿಭಾಗ (ಪ್ರಥಮ), ಎನ್ಇಎಸ್ ಅಡ್ವಾನ್ಸ್ಡ್ ಸ್ಟಡೀಸ್ ಕಾಲೇಜು (ದ್ವಿತೀಯ), ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ನ್ಯಾಷನಲ್ ಫಾರ್ಮಸಿ ಕಾಲೇಜು (ಪ್ರಥಮ), ಜೆ.ಎನ್.ಎನ್.ಸಿ.ಇ ತಂಡ (ದ್ವಿತೀಯ), ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಆಚಾರ್ಯ ತುಳಸಿ ವಾಣಿಜ್ಯ ಕಾಲೇಜು (ಪ್ರಥಮ), ನ್ಯಾಷನಲ್ ಪಬ್ಲಿಕ್ ಶಾಲೆ (ದ್ವಿತೀಯ) ಸ್ಥಾನ ಪಡೆದಿದೆ.
ಇದರೊಂದಿಗೆ ಅಥ್ಲೆಟಿಕ್ಸ್ ಸ್ಪರ್ಧೆಗಳಾದ ನೂರು ಮತ್ತು ಇನ್ನೂರು ಮೀಟರ್ ಓಟದ ಸ್ಪರ್ಧೆ, ಉದ್ದ ಜಿಗಿತ, ಗುಂಡು ಎಸೆತ, ಚೆಸ್ ಸ್ಪರ್ಧೆಗಳು ನಡೆಯಿತು. ಎಲ್ಲಾ ವಯೋಮಾನದವರಿಗೆ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.
ಬೆಳ್ಳಂ ಬೆಳಗ್ಗೆ ಒಂದೆಡೆ ಸೇರಿದ್ದ ಎನ್ಇಎಸ್ ಸಿಬ್ಬಂದಿ ವರ್ಗ 4 ಕಿಮಿ ದೂರ ಮ್ಯಾರಥಾನ್ ಮೂಲಕ ಏಕತೆಯ ಹೆಜ್ಜೆ ಹಾಕಿದರು. ಎನ್ಇಎಸ್ ಕ್ರೀಡಾಂಗಣದಿಂದ ಹೊರಟ ಸಿಬ್ಬಂದಿಗಳು, ವಯಸ್ಸಿನ ಅರಿವಿಲ್ಲದಂತೆ ಚೈತನ್ಯ ಪೂರ್ಣರಾಗಿ ಭಾಗವಹಿಸಿದ್ದರು. ನಂತರ ನಡೆದ ಪಥ ಸಂಚಲನದಲ್ಲಿ ಆಡಳಿತ ಕಛೇರಿ ಸೇರಿದಂತೆ 36 ವಿದ್ಯಾಸಂಸ್ಥೆಗಳ 1800 ಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಕ್ರಿಯಾಶೀಲವಾಗಿ, ಅತಿಥಿಗಳಿಗೆ ಗೌರವ ರಕ್ಷೆ ನೀಡಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಸಂಪಾದನೆ ಎಂದರೆ ಹಣವೆಂದು ಮಾತ್ರ ಅರ್ಥೈಸಿಕೊಳ್ಳುತ್ತೇವೆ. ಅನುಬಂಧ, ಅನುಭಾವ, ಹೃದಯ ಶ್ರೀಮಂತಿಕೆ ಇವೇ ನಿಜವಾದ ಸಂಪಾದನೆ. ಕ್ರೀಡೋತ್ಸವದ ಮೂಲಕ ಸಂಸ್ಥೆಯ ಅಮೂಲ್ಯ ಮಾನವ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸಿಕೊಳ್ಳೊಣ ಎಂದು ಹೇಳಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಅನಂತದತ್ತಾ, ಎಚ್.ಸಿ.ಶಿವಕುಮಾರ್, ಸೀತಾಲಕ್ಷ್ಮೀ, ಸುಧೀರ್, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಜೆ.ಎನ್.ಎನ್.ಸಿ.ಇ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

