ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಇಂದು 60 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 762ಕ್ಕೆ ಏರಿಕೆಯಾಗಿದೆ.

ಈ ಕುರಿತಂತೆ ಜಿಲ್ಲಾಡಳಿತ ಬುಲೆಟಿನ್ ಬಿಡುಗಡೆ ಮಾಡಿದ್ದು, 60 ಮಂದಿಯಲ್ಲಿ ಇಂದು ಸೋಂಕು ದೃಢಪಟ್ಟರೆ, 37 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಈವರೆಗೂ 236 ಕಂಟೈನ್ಮೆಂಟ್ ಝೋನ್’ಗಳನ್ನು ಮಾಡಲಾಗಿದ್ದು, ಡಿ ನೋಟಿಫೈಡ್ ಝೋನ್’ಗಳ ಸಂಖ್ಯೆ 34 ಆಗಿದೆ ಎಂದು ಬುಲೆಟಿನ್ ತಿಳಿಸಿದೆ.

ತಾಲೂಕುವಾರು ವಿವರ: ಶಿವಮೊಗ್ಗ: 20 ಭದ್ರಾವತಿ: 5 ಸಾಗರ: 7 ಶಿಕಾರಿಪುರ: 18 ಹೊಸನಗರ: 2 ತೀರ್ಥಹಳ್ಳಿ: 6 ಸೊರಬ: 1 ಚಿತ್ರದುರ್ಗ: 1
Get In Touch With Us info@kalpa.news Whatsapp: 9481252093
















