ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ನಾಗರ ಪಂಚಮಿಯಾದ ಇಂದು ಆಗಸವಳ್ಳಿ ಗಾಂಧಿ ನಗರದ ಮನೆಯೊಂದರಲ್ಲಿ ನಾಗರ ಹಾವು ಕಾಣಿಸಿಕೊಂಡಿದ್ದು, ವಿಶೇಷವೆಂದರೆ ನಿವಾಸದ ಮಾಲೀಕರ ಹೆಸರು ನಾಗಪ್ಪ!
ಹೌದು… ಇಂತಹುದ್ದೊಂದು ವಿಶೇಷತೆ ಇಂದು ನಡೆದಿದೆ. ಅಗಸವಳ್ಳಿಯ ಗಾಂಧಿನಗರದ ನಾಗಪ್ಪ ಎನ್ನುವವರ ಮನೆಯ ತೊಟ್ಟಿಯಲ್ಲಿ ನಾಗರ ಹಾವು ಬಿದ್ದಿದ್ದನ್ನು ಗಮನಿಸಿದ ಮನೆಯವರು ಸ್ನೇಕ್ ಕಿರಣ್ ಅವರಿಗೆ ಕರೆ ಮಾಡಿದ್ದಾರೆ.ಸ್ಥಳಕ್ಕಾಗಮಿಸಿದ ಕಿರಣ್, ಸುಮಾರು 5 ಅಡಿ ಉದ್ದದ ನಾಗರ ಹಾವನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post