ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜ್ಯೋತಿ ಲ್ಯಾಬ್ ಫ್ಯಾಬ್ರಿಕೇರ್ ಸರ್ವಿಸಸ್ ಸಹಯೋಗದಲ್ಲಿ ಮಲೆನಾಡಿನ ಪ್ರತಿಷ್ಠಿತ ಶ್ರೀನಿಧಿ ಟೆಕ್ಸ್’ಟೈಲ್ಸ್ ವರ್ಲ್ಡ್ ವತಿಯಿಂದ ನಗರದಲ್ಲಿ ಇದೇ ಮೊದಲ ಬಾರಿಗೆ ಫ್ಯಾಬ್ರಿಕ್ ಸ್ಪಾ ಆರಂಭಿಸಲಾಗುತ್ತಿದ್ದು, ನಾಳೆ ಇದಕ್ಕೆ ಚಾಲನೆ ದೊರೆಯಲಿದೆ.
ಈ ಕುರಿತಂತೆ ಮಾಹಿತಿ ನೀಡಿದ ಸಂಸ್ಥೆ ಮುಖ್ಯಸ್ಥರು, ಮಲೆನಾಡಿನ ವಿಶ್ವಾಸಾರ್ಹ ಟೆಕ್ಸ್’ಟೈಲ್ಸ್ ಉದ್ಯಮವಾದ ಶ್ರೀನಿಧಿ ಸಿಲ್ಕ್ ಅಂಡ್ ಟೆಕ್ಸ್’ಟೈಲ್ಸ್ ಭಾರತದ ಅಷ್ಟೇ ವಿಶ್ವಾಸಾರ್ಹ ಸಂಸ್ಥೆಯಾದ ಜ್ಯೋತಿ ಲ್ಯಾಬೊರೇಟರಿಸ್ ಸಹಭಾಗಿತ್ವದಲ್ಲಿ ಇದೇ ಮೊದಲ ಬಾರಿಗೆ ಕಲುಷಿತ ಬಟ್ಟೆಗಳ ಶುದ್ಧೀಕರಣ ಘಟಕದ ಕೌಂಟರ್ ತೆರೆಯಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸ್ಥಾಪಿತವಾಗಿರುವ ಈ ಫ್ಯಾಬ್ರಿಕ್ ಸ್ಪಾ ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ನುರಿತ ತಂತ್ರಜ್ಞಾನದೊಂದಿಗೆ ಪ್ರತಿ ಬಟ್ಟೆಯನ್ನು ಶುದ್ಧೀಕರಿಸಲಾಗುತ್ತಿದ್ದು, ಹೊಚ್ಚ ಹೊಸತರಂತೆ ಗ್ರಾಹಕರ ಕೈಗಿಡುವ ಪ್ರಯತ್ನ ಮಾಡಲಾಗುತ್ತಿದೆ. ಬಟ್ಟೆಗೆ ಅಗತ್ಯವಾದ ಸ್ಟಾರ್ಚಿಂಗ್, ಡಾರ್ನಿಂಗ್, ಪಾಲಿಶಿಂಗ್, ಸ್ಟೀಮ್ ಐರನ್, ಸಣ್ಣಪುಟ್ಟ ರಿಪೇರಿ, ಬ್ಲೀಚಿಂಗ್ ಮತ್ತೆ ವೈಟನಿಂಗ್, ಪರದೆಗಳು, ಕಾರ್ಪೆಟ್‌ಗಳ ಕ್ಲೀನಿಂಗ್, ಸೋಫಾ ಮ್ಯಾಟ್ರಸ್ ಕ್ಲೀನಿಂಗ್ ಸೇರಿದಂತೆ ಹತ್ತು ಹಲವು ಬಗೆಯ ಬಟ್ಟೆಗಳನ್ನು ಹೊಚ್ಚ ಹೊಸತರಂತೆ ಮಾಡುವ ತಂತ್ರಜ್ಞಾನವನ್ನು ಇಲ್ಲಿ ಅಳವಡಿಸಲಾಗಿದೆ.

ವಿಶೇಷವಾಗಿ ಒಂದು ದೂರವಾಣಿ ಕರೆಯ ಮೂಲಕ ಗ್ರಾಹಕರ ಮನೆಗೇ ಬಂದು ಬಟ್ಟೆಗಳನ್ನು ಸಂಗ್ರಹಿಸಿ, ಪುನಃ ಮನೆಗೇ ತಲುಪಿಸುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ.
ಈ ನೂತನ ಕೌಂಟರನ್ನು ನ.6ರ ನಾಳೆ 10.30ಕ್ಕೆ ಶ್ರೀನಿಧಿ ಟೆಕ್ಸ್’ಟೈಲ್ಸ್ ವರ್ಲ್ಡ್’ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯಕ್ ಉದ್ಘಾಟಿಸಲಿದ್ದು, ಫ್ಯಾಬ್ರಿಕ್ ಸ್ಪಾದ ಮುನಿಕುಮಾರ್, ಶ್ರೀನಿಧಿ ಸಮೂಹ ಸಂಸ್ಥೆಯ ಟಿ.ಆರ್. ಅಶ್ವತ್ಥ ನಾರಾಯಣ ಸೇರಿದಂತೆ ಹಲವರು ಉಪಸ್ಥಿತರಿರಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















