ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಆರಾಧನಾ ಸಮಿತಿಯ ಮೊದಲ ಸಭೆ ಜಿಲ್ಲಾ ಉಸ್ತುವಾರಿ ಸಚಿವ ನೇತೃತ್ವದಲ್ಲಿ ಇಂದು ನಡೆದಿದ್ದು, ನಗರದ ವಿವಿಧ ಬಡಾವಣೆಯ 10 ದೇವಾಲಯಗಳ ಅಭಿವೃದ್ಧಿಗೆ 54 ಲಕ್ಷ ರೂ.ಗಳ ಅನುದಾನ ಘೋಷಣೆ ಮಾಡಲಾಗಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ತಾಲೂಕು ಆರಾಧನಾ ಸಮಿತಿ ಅಧ್ಯಕ್ಷ ಬಿ.ಆರ್. ಮಧುಸೂಧನ್, ಆರಾಧನಾ ಸಮಿತಿಯ ಮೊಟ್ಟ ಮೊದಲ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ನೇತೃತ್ವದಲ್ಲಿ ಇಂದು ಯಶಸ್ವಿಯಾಗಿ ನಡೆದಿದೆ. ನಗರದಲ್ಲಿ ಧರ್ಮವನ್ನು ಉಳಿಸಲು ದೇವಾಲಯಗಳ ಅಭಿವೃದ್ಧಿ ಮುಖ್ಯವಾದುದು. ಈ ಕಾರಣದಿಂದಾಗಿ ಮೊದಲ ಹಂತದಲ್ಲಿ ನಗರದ 10 ದೇವಾಲಯಗಳ ಅಭಿವೃದ್ಧಿಗೆ ಶಾಸಕರ ನಿಧಿಯಿಂದ 54 ಲಕ್ಷ ರೂ.ಗಳ ಅನುದಾನವನ್ನು ಮಾನ್ಯ ಕೆ.ಎಸ್. ಈಶ್ವಪ್ಪನವರು ಬಿಡುಗಡೆ ಮಾಡಿದ್ದಾರೆ ಎಂದರು.
ಈಗ ಘೋಷಿಸಲಾಗಿರುವ ಅನುದಾನದಲ್ಲಿ ಕಾಮಗಾರಿಗೆ ಶೀಘ್ರದಲ್ಲೇ ಆರಂಭವಾಗಲಿದೆ. ಅಲ್ಲದೇ, ತಹಶೀಲ್ದಾರ್ ಕಚೇರಿ ಕಟ್ಟಡದಲ್ಲೇ ಶೀಘ್ರದಲ್ಲಿ ಆರಾಧನಾ ಸಮಿತಿಯ ನೂತನ ಕಚೇರಿಯೂ ಸಹ ಆರಂಭವಾಗಲಿದೆ.
ಧಾರ್ಮಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಹಳಷ್ಟು ಅನುಭವ ಹೊಂದಿರುವ ಮಧುಸೂಧನ್ ಅವರು ಸಮಿತಿ ಅಧ್ಯಕ್ಷರಾದ ನಂತರ ದೇವಾಲಯಗಳ ಜೀಣೋದ್ಧಾರ ಸೇರಿದಂತೆ ಈ ಕ್ಷೇತ್ರದ ಒಟ್ಟಾರೆ ಅಭಿವೃದ್ಧಿ ನಿರೀಕ್ಷೆಗಳು ಗರಿಗೆದರಿದ್ದವು. ಇದಕ್ಕೆ ಪೂರಕವಾಗಿ ಆರಾಧನಾ ಸಮಿತಿ ರಚನೆಗೊಂಡ ನಂತರ ನಡೆದ ಮೊದಲ ಸಭೆಯಲ್ಲೇ ದೇವಾಲಯಗಳ ಅಭಿವೃದ್ಧಿಗಾಗಿ ಹಣ ಬಿಡುಗಡೆ ಮಾಡಿಸುವಲ್ಲಿ ಮಧುಸೂಧನ್ ನೇತೃತ್ವದ ಸಮಿತಿ ಯಶಸ್ವಿಯಾಗಿರುವುದು ಪ್ರಶಂಸನೀಯ ವಿಚಾರ.
ಸಭೆಯಲ್ಲಿ ಆರಾಧನಾ ಸಮಿತಿ ಸದಸ್ಯ ಕಾರ್ಯದರ್ಶಿ, ತಹಶೀಲ್ದಾರ್ ನಾಗರಾಜ್, ಸದಸ್ಯರು ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post