ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಹುಣಸೋಡು ಕ್ವಾರಿಯಲ್ಲಿ ಸಂಭವಿಸಿದ ಸ್ಪೋಟಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೂರ್ವ ವಲಯ ಐಜಿಪಿ ರವಿ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಘಟನೆಗೆ ಸಂಬಂಧಿಸಿದಂತೆ ಅಕ್ರಮ ಗಣಿಗಾರಿಕೆಯನ್ನು ಲೀಜ್’ಗೆ ಪಡೆದು ಕ್ರಷರ್ ನಡೆಸುತ್ತಿದ್ದ ಮಾಲೀಕ ರವೀಂದ್ರ ನಗರದ ನಿವಾಸಿ ಬಿ.ವಿ. ಸುಧಾಕರ್, ವಿನೋಬ ನಗರದ ನಿವಾಸಿ ನರಸಿಂಹ (ಸೂಪರ್ ವೈಜರ್), ಚಾಲುಕ್ಯ ನಗರದ ಮುಮ್ತಾಜ್ ಅಹ್ಮದ್ (ಮ್ಯಾನೇಜರ್) ಹಾಗೂ ಭದ್ರಾವತಿಯ ಜಬ್ಬರ್ ಘಟ್ಟದ ನಿವಾಸಿ ರಶೀದ್ ಎನ್ನುವವರನ್ನು ಈಗಾಗಲೇ ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ ಎಂದಿದ್ದಾರೆ.
ಇನ್ನು, ತೆಲಂಗಾಣದ ಅನಂತಪುರಂ ಜಿಲ್ಲೆಯಿಂದ ಸ್ಪೋಟಕಗಳನ್ನು ತರಿಸಲಾಗಿದೆ ಎಂದು ತಿಳಿದುಬಂದಿದ್ದು, ಘಟನೆ ನಡೆದ ದಿನ ಸ್ಪೋಟಕಗಳನ್ನು ಸಾಗಾಟ ಮಾಡುತ್ತಿದ್ದ ವೇಳೇ ದುರ್ಘಟನೆ ಸಂಭವಿಸಿದೆ. ಆದರೆ, ಸ್ಪೋಟಕ್ಕೆ ಇದೇ ನಿಖರ ಕಾರಣ ಎಂದು ತಿಳಿದುಬಂದಿಲ್ಲ. ತನಿಖೆ ಪೂರ್ಣಗೊಂಡ ನಂತರವಷ್ಟೇ ತಿಳಿದುಬರಲಿದೆ ಎಂದಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post