ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಿಜೆಪಿಯ ಮೂಲ ಉದ್ದೇಶ ಅಧಿಕಾರ ಹಿಡಿಯುವುದಲ್ಲ. ಬದಲಾಗಿ ಸಂಘಟನೆಯನ್ನು ಬಲವಾಗಿ ಕಟ್ಟುವುದು ಹಾಗೂ ಆ ಮೂಲಕ ದೇಶವನ್ನು ಸದೃಢಗೊಳಿಸುವುದು ಎಂದು ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಅಭಿಪ್ರಾಯಪಟ್ಟರು.
ಬೀರನಕೆರೆ ಮಠದಲ್ಲಿ ಬಿಜೆಪಿ ಶಿವಮೊಗ್ಗ ಗ್ರಾಮಂತರ ಮಂಡಲದ ಎರಡು ದಿನಗಳ ಪ್ರಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಕ್ಷ ಕಟ್ಟಬೇಕಾದರೆ ಶಿಸ್ತುಬದ್ಧವಾದ ಮನಸ್ಸುಗಳನ್ನು ಒಗ್ಗೂಡಿಸಬೇಕು. ಭಾಜಪ ಈಗ ವಿಶ್ವದಲ್ಲೇ ವಿಭಿನ್ನವಾದ ಒಂದು ಪಕ್ಷ, ಉತ್ತಮವಾದ ಕಾರ್ಯದಿಂದ ಪಕ್ಷವನ್ನು ಕಟ್ಟಿ ಬೆಳೆಸೋಣ ಎಂದು ಕರೆ ನೀಡಿದರು.
ಬಿಜೆಪಿ ಶಿವಮೊಗ್ಗ ಗ್ರಾಮಾಂತರ ಅಧ್ಯಕ್ಷ ರತ್ನಾಕರ್ ಶೈಣೈ ಮಾತನಾಡಿ, ಸಂಘಟನೆಯ ಕಾರ್ಯ ಹಾಗೂ ಇತಿಹಾಸವನ್ನು ಮೆಲುಕು ಹಾಕುವುದು ಕತ್ತಲೆಯಲ್ಲಿ ದೀಪ ಸಿಕ್ಕಹಾಗೆ ಎಂದು ತಿಳಿಸಿದರು.

ರಾಜ್ಯ ಪ್ರಕೋಷ್ಠಗಳ ಸಂಚಾಲಕ ಭಾನುಪ್ರಕಾಶ್, ಜಿಲ್ಲಾ ಪಂಚಾಯತ್ ಸದಸ್ಯೆ ಸೌಮ್ಯ ಭೋಜನಾಯ್ಕ್, ಶಿವಮೊಗ್ಗ ವಿಭಾಗ ಪ್ರಭಾರಿಗಳಾದ ಗಿರೀಶ್ ಪಟೇಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಆರ್.ಟಿ. ಗೋಪಾಲ್, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ ಹಾಗೂ ಗಿರೀಶ್ ಮತ್ತು ಜಿಲ್ಲಾ ಗ್ರಾಮಾಂತರ ನಿಕಟಪೂರ್ವ ಅಧ್ಯಕ್ಷ ಜಿ.ಈ. ವಿರೂಪಾಕ್ಷಪ್ಪ ಇದ್ದರು.









Discussion about this post