ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೋವಿಡ್19 ಸಂಕಷ್ಟದ ನಡುವೆ ಆನ್’ಲೈನ್ ಶಿಕ್ಷಣಕ್ಕೆ ಒತ್ತು ನೀಡಿರುವುದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಟಾಸ್ಕ್ ಫೋರ್ಸ್ ಸದಸ್ಯ ಲಕ್ಷ್ಮೀ ನಾರಾಯಣ ಕಾಶಿಯವರು ಸರ್ಕಾರಿ ಶಾಲೆಗೆ ಮೂರು ಕಂಪ್ಯೂಟರ್ ಟ್ಯಾಬನ್ನು ಕೊಡುಗೆಯಾಗಿ ನೀಡಿದ್ದಾರೆ.
ರೋಟರಿ ಹಾಗೂ ಪಬ್ಲಿಕ್ ಟಿವಿ ಸಹಯೋಗದಲ್ಲಿ ಆರಂಭಿಸಿರುವ ಜ್ಞಾನ ದೀವಿಗೆ ಯೋಜನೆ ಮೂಲಕ ಈ ಕೊಡುಗೆಯನ್ನು ಅವರು ನೀಡಿದ್ದು, ಇದರ 10485-00 ರೂ. ಚೆಕ್ ಅನ್ನು ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಗಣೇಶ್ ಅವರಿಗೆ ಹಸ್ತಾಂತರಿಸಿದರು.
ಶ್ರೀ ಲಕ್ಷ್ಮೀ ನಾರಾಯಣ ಕಾಶಿಯವರು ಕೋವಿಡ್19 ಲಾಕ್ ಡೌನ್, ನೆರೆ ಸೇರಿದಂತೆ ಈ ಹಿಂದೆಯೂ ಸಹ ಹಲವಾರು ಇಂತಹ ಸಾಮಾಜಿಕ ಕಳಕಳಿಗೆ ಕಾರ್ಯಗಳಿಗೆ ಕೊಡುಗೆ ನೀಡಿದ್ದಲ್ಲಿ ಇಲ್ಲಿ ಉಲ್ಲೇಖಿಸಬಹುದು.
ಇನ್ನು, ಜಿಲ್ಲಾ ಸಾಕ್ಷರತಾ ಸಮಿತಿಯ ಅಧ್ಯಕ್ಷ ಎಚ್.ಎಲ್. ರವಿ ಅವರು ತಮ್ಮ ಕುಟುಂಬದ ವತಿಯಿಂದ ಐದು ಟ್ಯಾಬ್ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post