ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಭಜನಾ ಪರಿಷತ್ ಹಾಗೂ ನಗರದ ಎಲ್ಲಾ ಭಜನಾ ಮಂಡಳಿಗಳ ಒಕ್ಕೂಟ, ಅರ್ಚಕ ವೃಂದ, ಶ್ರೀಪ್ರಸನ್ನ ಗಣಪತಿ ಬಲಮುರಿ ದೇವಸ್ಥಾನ, ಸಂಸ್ಕಾರ ಪ್ರತಿಷ್ಠಾನ (ಆರೋಗ್ಯ ಆರಾಧನಾ ಆಧ್ಯಾತ್ಮ)ದ ಸಂಯುಕ್ತಾಶ್ರಯದಲ್ಲಿ ಶಿವಮೊಗ್ಗ ನಗರ, ಜಿಲ್ಲೆ ಹಾಗೂ ರಾಜ್ಯದ ಎಲ್ಲಾ ಭಜನಾ ಮಂಡಳಿಗಳ ಸದಸ್ಯರು ಮತ್ತು ಭಾಗವತ್ ಭಕ್ತರ ವಿಶೇಷ ಸಹಕಾರದೊಂದಿಗೆ ಲೋಕ ಕಲ್ಯಾಣಾರ್ಥ ಹಾಗೂ ಮಹಾ ಶಿವರಾತ್ರಿ ಅಂಗವಾಗಿ ಸಾಮೂಹಿಕವಾಗಿ ಒಂದು ಕೋಟಿ ಓಂ ನಮಃ ಶಿವಾಯ ಜಪ ಯಜ್ಞ ಕಾರ್ಯಕ್ರಮ ಜನವರಿ 21ರಿಂದ ಪ್ರಾರಂಭ ಮಾರ್ಚ್ 10 ರವರೆಗೆ (48 ದಿನಗಳ ಪರ್ಯಂತ ) ನಡೆಯಲಿದೆ.
ಮಹಾಮಾರಿ ಕೊರೋನಾ ಇನ್ನಲೇ ಸರ್ಕಾರದ ನಿಯಮನ್ನು ಪಾಲಿಸಿಕೊಂಡು ಭಕ್ತರು ತಮ್ಮ ತಮ್ಮ ಮನೆಯಲ್ಲಿಯೇ ಸೇರಿ ವೈಯುಕ್ತಿಕವಾಗಿ/ಸಾಮೂಹಿಕವಾಗಿ ಜಪ ಮಾಡಿ ಪ್ರತಿ ವಾರ ಜಪ ಸಂಖ್ಯೆಯನ್ನು ಆಯೋಜಕರಿಗೆ ತಿಳಿಸಬೇಕು.
- ಕನಿಷ್ಠ 10 ಸದಸ್ಯರ ಒಂದು ತಂಡ ಮಾಡಿಕೊಳ್ಳಬೇಕು,
- ಅದಕ್ಕೆ ಒಬ್ಬರು ಮುಖ್ಯಸ್ಥರು ಇರಬೇಕು.
- ಪ್ರಾರಂಭ ಮಾಡುವ ದಿನ ಸಂಕಲ್ಪ ಮಾಡಿ ಜಪ ಕಾಣಿಕೆಯನ್ನು ರೂ. 101/- ತೆಗದಿಡಬೇಕು.
- ಪ್ರತಿ ದಿನ ಕನಿಷ್ಠ 1008 ಜಪ ಮಾಡಲೇಬೇಕು (ಬೆಳಿಗ್ಗೆ ಹಾಗೂ ಸಂಜೆ)
- ಪ್ರತಿ ಸಂಕಲ್ಪವನ್ನು ಮಾಡಿ ನಿಮ್ಮ ಮನೆಯ ದೇವರ ಮುಂದೆಯೇ ಜಪ ಮಾಡಬೇಕು.
- ಎಲ್ಲಾ ವಯಸ್ಸಿನ ಎಲ್ಲಾ ವರ್ಗದ ಭಾಗವತ್ಭಕ್ತರು ಭಾಗವಹಿಸಬಹುದು.
- ತಂಡದ ಮುಖ್ಯಸ್ಥರು ಪ್ರತಿ ವಾರ ತಮ್ಮ ಸದಸ್ಯರ ಒಟ್ಟು ಜಪ ಸಂಖ್ಯೆಯನ್ನು ವಾರಕ್ಕೊಮ್ಮೆ ಆಯೋಜಕರಿಗೆ ತಿಳಿಸಲೇಬೇಕು.
- ತಂಡದ ಮುಖ್ಯಸ್ಥರು ನಿಮ್ಮ ಸದಸ್ಯರ ಮನೆ ವಿಳಾಸ ಫೋನ್ ನಂಬರ್ ಬರೆದು ನಮಗೆ ತಲುಪಿಸಬೇಕು.
- ವೇ.ಬ್ರ. ಶ್ರೀ ಅ.ಪ. ರಾಮಭಟ್ಟರ ಮಾರ್ಗರ್ದರ್ಶನದಲ್ಲಿ ಮಹಾ ಸಮರ್ಪಣಾ ಕಾರ್ಯಕ್ರಮವೂ ನಡೆಯಲಿದೆ.
ಮಹಾ ಸಮರ್ಪಣಾ ಕಾರ್ಯಕ್ರಮದ ವೈಶಿಷ್ಟ್ಯ
ನಾಡಿನ ಅನೇಕ ಪೂಜ್ಯರ ಸಮಕ್ಷಮ ದಿವ್ಯ ಉಪಸ್ಥಿತಿಯಲ್ಲಿ ಸ್ವಹಸ್ತದಿಂದ ಈಶ್ವರ ದೇವರಿಗೆ ಜಲಾಭಿಷೇಕ,ವಿವಿಧ ಪುಷ್ಪಗಳಿಂದ ಅರ್ಚನೆ, ಬಿಲ್ವಾರ್ಚನೆ ಹಾಗೂ ಭಸ್ಮಾರ್ಚನೆ ನಡೆಯಲಿದೆ.ಶಿವ ಅಷ್ಟೋತ್ತರ, ಶಿವ ಸಹಸ್ರನಾಮ, ಶಿವ ಭಜನೆ, ಶಿವ ಲಿಂಗಾಷ್ಟಕ, ಶಿವ ಧ್ಯಾನ ಭಾಗವಹಿಸುವ ಎಲ್ಲರಿಂದ ಸಾಮೂಹಿಕವಾಗಿ ಶಿವನಾಮ ಸ್ಮರಣೆಯ ಜೈಂಕಾರ, ವೇದ ಪಂಡಿತರಿಂದ ರುದ್ರ ಪಠಣ ಹಾಗೂ ರುದ್ರ ಹೋಮ ಮಹಾ ಪೂರ್ಣಾಹುತಿ ನಡೆಯಲಿದೆ.
ಅಲ್ಲದೇ,ನಗರದ ವಿವಿಧ ಭರತನಾಟ್ಯ ಕೇಂದ್ರದ ವಿದ್ಯಾರ್ಥಿಗಳಿಂದ ಶಿವತಾಂಡವ ನೃತ್ಯ ವೈಭವ ಹಾಗೂ ವಿದ್ವಾಂಸರಿಂದ ಶಿವ ತತ್ವ ಹಾಗೂ ಶಿವ ಶಕ್ತಿ ಕುರಿತು ಪ್ರವಚನ ನಡೆಯಲಿದೆ.
ಹೆಚ್ಚಿನ ಮಾಹಿತಿಗಾಗಿ ಮೊ. 99640 72793ಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post