ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಸ್ನಾತಕ ಪದವಿಗಳ ಪ್ರವೇಶಕ್ಕೆ ಅವಕಾಶ ವಂಚಿತರಾದ ವಿದ್ಯಾರ್ಥಿಗಳ ಅಳಲಿಗೆ ಸ್ಪಂದಿಸಿರುವ ರಾಜ್ಯದ ಉಪಮುಖ್ಯಮಂತ್ರಿಗಳೂ ಮತ್ತು ಉನ್ನತ ಶಿಕ್ಷಣ ಸಚಿವರೂ ಆದ ಡಾ. ಸಿ.ಎನ್ ಅಶ್ವಥ್ ನಾರಾಯಣ ಅವರು ಪದವಿ ಪ್ರವೇಶಕ್ಕೆ ಅಂತಿಮ ಅವಕಾಶವೊಂದನ್ನು ನೀಡಲು ವಿಶ್ವವಿದ್ಯಾಲಯಗಳಿಗೆ ಸೂಚನೆ ನೀಡಿದ್ದಾರೆ.ಸ್ನಾತಕ ಪದವಿಯ ಆಫ್ ಲೈನ್ ತರಗತಿಗಳು ಡಿ. 13 ರಿಂದ ಆರಂಭವಾಗಿದ್ದು, ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಕೊನೆಯ ದಿನವಾಗಿದ್ದ. ಡಿ.15 ನ್ನು ಡಿ.31 ರವರೆಗೂ ವಿಸ್ತರಿಸಲಾಗಿತ್ತು. ಆದರೆ ಕೊರೋನಾ ಸಂಕಷ್ಟದಿಂದ ಹಳ್ಳಿಗಳ ಸೇರಿದ್ದ ಗ್ರಾಮೀಣ ಪ್ರದೇಶದ ಬಹುತೇಕ ವಿದ್ಯಾರ್ಥಿಗಳಿಗೆ ಸಂಪರ್ಕ ಸಂವಹನದ ಕೊರೆತೆಯಿಂದಾಗಿ ನಿಗದಿತ ಸಮಯದೊಳಗೆ ಪದವಿ ಪ್ರವೇಶಾಕಾಶಪಡೆಯಲು ಸಾಧ್ಯವಾಗದೆ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಭವಿಷ್ಯದ ಆತಂಕದಲ್ಲಿದ್ದರು. ಕಾಲೇಜುಗಳಿಗೆ ಎಡತಾಕುತ್ತಾ ಪ್ರವೇಶಾವಕಶ ದಕ್ಕದೆ ಪರದಾಡುತ್ತಿದ್ದರು.
ವಿದ್ಯಾರ್ಥಿಗಳ ಈ ಆತಂಕವನ್ನು ಮನಗಂಡ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಅವರು ತಕ್ಷಣದಿಂದಲೇ ಸ್ನಾತಕ ಪದವಿ ಪ್ರವೇಶಕ್ಕೆ ಅವಕಾಶವನ್ನು ವಿಸ್ತರಿಸುವಂತೆ ಕುವೆಂಪು ವಿವಿಯ ಕುಲಪತಿಗಳಿಗೆ ಸೂಚಿಸುವ ಮೂಲಕ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ್ದಾರೆ. ಸಚಿವರ ಈ ಸಕಾಲಿಕ ಕ್ರಮದಿಂದ ವಿದ್ಯಾರ್ಥಿಗಳು ಒಂದು ವರ್ಷದ ಶೈಕ್ಷಣಿಕ ನಷ್ಟದಿಂದ ಪಾರಾದಂತಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post